ರಾಹುಲ್, ಸಿದ್ದು ಗೆ ಶೃಂಗೇರಿ ಜಗದ್ಗುರುಗಳಿಂದ ತೀವ್ರ ತರಾಟೆ ??
*ಶೃಂಗೇರಿ ರಾಹುಲ್ ಬೇಟಿಯ ಆ 20 ನಿಮಿಷ*
ಶೃಂಗೇರಿಗೆ ರಾಹುಲ್ ಗಾಂದಿ ಮತ್ತು ಸಿ.ಎಂ.ಸಿದ್ದರಾಮಯ್ಯ ಬೇಟಿ ನಂತರ ಹಿಂದು ಸಿದ್ಧಾಂತವ ಬಲವಾಗಿ ಪ್ರತಿಪಾದಿಸುವ ಪತ್ರಕರ್ತನಾಗಿ ನನ್ನಲ್ಲೊಂದಿಷ್ಟು ಪ್ರಶ್ನೆಗಳು ಉದ್ಭವಿಸಿದವು. ಜೀ ಹುಜೂರ್ ಎಂದು ತನ್ನ ನಾಯಕ ಹೇಳಿದ್ದನ್ನೇ ಒಪ್ಪುವ ಸಂಸ್ಕೃತಿ ಇರುವ ಕಾಂಗ್ರೇಸ್ ನಲ್ಲಿ ರಾಹುಲ್ ಗಾಗಲಿ ಅಥವ ಹಿಂದುತ್ವದ ಬದ್ದ ವೈರಿ ಎಂದು ಬಿಂಬಿತವಾಗಿರುವ ಸಿದ್ದರಾಮಯ್ಯನಾಗಲಿ ತಪ್ಪು ಮಾಡಿದಾಗ ಬುದ್ದಿ ಹೇಳುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಹಿಂದುತ್ವಕ್ಕೆ ಧಕ್ಕೆ ತರುವಂತ ಕಾರ್ಯ ಮಾಡಿದಾಗ ಅದನ್ನೂ ಸಹ ಕಾಂಗ್ರೇಸ್ ನಲ್ಲಿರುವ ಹಿಂದೂ ಸಮುದಾಯ ವಿರೋದಿಸುವುದಿಲ್ಲ ಕಾರಣ ಒನ್ಸ್ ಎಗೈನ್ ಜೀ ಹುಜೂರ್ ಸಂಸ್ಕೃತಿ. ಆದರೇ ಮನುಷ್ಯ ಗುಣಧರ್ಮದ ಎಲ್ಲೆಯನ್ನು ಮೀರಿ ನಿತ್ಯ ಆಧ್ಯಾತ್ಮದ ಬಗ್ಗೆ ಚಿಂತಿಸುತ್ತ ದೇಶದ ಕೋಟ್ಯಾಂತರ ಭಕ್ತರ ಸಲಹಿ ಆಶೀರ್ವದಿಸುತ್ತಿರುವ ಶೃಂಗೇರಿ ಜಗದ್ಗುರುಗಳಾದರೂ ಈ ಸಿದ್ದರಾಮಯ್ಯನಿಗೆ, ರಾಹುಲ್ ಗಾಂದಿಗೆ ಬುದ್ದಿ ಹೇಳಿ ಸರಿದಾರಿಗೆ ತರಬಹುದಿತ್ತಲ್ಲವೇ? ಅಲ್ಲದೇ ಅವರಿಬ್ಬರಿಗೂ ಬುದ್ದಿ ಹೇಳುವ ತಾಕತ್ತು ಮತ್ತು ಜರೂರತ್ತು ಜಗದ್ಗುರುಗಳಿಗೆ ಇತ್ತಲ್ಲವೇ ? ನೋಡೋಣ ನರಸಿಂಹವನದಲ್ಲಿ ಸಿದ್ದು ಮತ್ತು ರಾಹುಲ್ ಬೇಟಿ ನೀಡಿದ ಆ 20 ನಿಮಿಷ ಏನು ನೆಡೆದಿರಬಹುದೆಂದು ಆಲೋಚಿಸುತ್ತ ಒಂದಿಷ್ಟು ಪತ್ರಕರ್ತರೊಂದಿಗೆ ಚರ್ಚಿಸಿ ಉತ್ತರ ಹುಡುಕುತ್ತಾ ಹೊರಟಾಗಲೇ ಸಿಕ್ಕ ಉತ್ತರ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷವು ಮತ್ತು ಶೃಂಗೇರಿ ಜಗದ್ಗುರುಗಳ ಬಗ್ಗೆ ಹೆಮ್ಮೆ ಗೌರವ ಇಮ್ಮಡಿಯಾಯಿತು. ಶ್ರೀ ಭಾರತಿ ತೀರ್ಥರಂತ ಜಗದ್ಗುರುಗಳನ್ನು ಪಡೆದ ನಾವೇ ಧನ್ಯ ಎಂಬ ಭಾವನೆಯುಂಟಾಯಿತು.*
*ಮಠಕ್ಕೆ ಬಂದಿದ್ದೀರಿ ಸಂತೋಷ ಆದರೇ ನಿಮ್ಮ ಕಾರ್ಯಗಳಿಗೆ ನಮ್ಮ ಆಶೀರ್ವಾದವಿಲ್ಲ.*
ಶೃಂಗೇರಿ ನನಗೇನು ಹೊಸದಲ್ಲ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಯಾದ ನನಗೆ ಒಂದು ಅವಿನಾಭಾವ ಸಂಬಂದವಿದೆ. ಅನೇಕ ನನ್ನ ಸಹಪಾಠಿಗಳು ಶೃಂಗೇರಿ ಮಠ ಹಾಗೂ ಸುತ್ತಮುತ್ತ ಕೆಲಸ ಕಾರ್ಯ ಮಾಡಿಕೊಂಡು ಈಗಲೂ ನನ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಆ ಎಳೆಯನ್ನು ಆದರಿಸಿ ವಿಚಾರಿಸಿದಾಗ ಹೊರ ಬಂದ ಸುದ್ದಿ ನಿಜಕ್ಕೂ ಹಿಂದುಗಳು ಗೌರವ ಪಡುವಂತಹದ್ದು. ಹೌದು ಶ್ರೀ ಮಠಕ್ಕೆ ಬೇಟಿ ನೀಡಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆಯುವವರು ಮಡಿ ಬಟ್ಟೆಯನ್ನು ದರಿಸಿ ಹೋಗುವುದು ಸಹಜ ಹಾಗೂ ಸಂಪ್ರದಾಯ ಆದರೇ ಸದಾ ಹಿಂದುತ್ವ ವಿರೋದಿ ನಿಲುವು ಹೊಂದಿದ ಸಿದ್ದು ಮತ್ತು ರಾಹುಲ್ ಮಡಿಯನ್ನು ದರಿಸಿ ಬಂದಿದ್ದರೂ ಆ ಮಡಿಯ ಮೇಲೆ ವಿಶೇಶವಾಗಿ ಮತ್ತೊಂದು *ಕೇಸರಿ ಶಲ್ಯೆಯನ್ನು ಕಡ್ಡಾಯ ಧರಿಸುವಂತೆ ನೋಡಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.* ನಂತರ ಜಗದ್ಗುರುಗಳ ಬೇಟಿಗೆ ಹೋದಾಗ ಜಗದ್ಗುರುಗಳು ದರ್ಶನದ ನಂತರ ಸಿದ್ದು ಮತ್ತು ರಾಹುಲ್ ಗಾಂದಿ ವೇಣುಗೋಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆಂಬ ಸ್ಪೋಟಕ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
*ದರ್ಶನದ ನಂತರ ಜಗದ್ಗುರುಗಳು ಕೇಳಿದ ಪ್ರಶ್ನೆ ಒಂದೇ "ಹಿಂದುತ್ವದ ಬಗ್ಗೆ ನಿಮಗ್ಯಾಕೆ ಇಷ್ಟು ತಾತ್ಸಾರ ?. ನಿಮಗೆ ಹಿಂದುತ್ವದ ಬಗ್ಗೆ ಅಸಹನೆ ಇದ್ದರೆ ನೀವು ಅದರಿಂದ ದೂರವಿರಿ ಅದುಬಿಟ್ಟು ಹಿಂದೂ ಧರ್ಮದ ಜಾತಿ ಜಾತಿಗಳ ಮದ್ಯೆ ವೈಶಮ್ಯ ತರುವಂತ ಕೆಲಸ ಮಾಡಬೇಡಿ. ಮಠ ಮಂದಿರಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ, ಯಾವ ಮಠ ಮಂದಿರಗಳು ಏನು ತಪ್ಪು ಮಾಡಿವೆ? ಮಠ ಮಂದಿರಗಳಿಂದ ಸಂಗ್ರಹವಾದ ಮುಜರಾಯಿ ಇಲಾಖೆಯ ಹಣವನ್ನು ಮಠ ಮಂದಿರಗಳಿಗೆ ವಿನಿಯೋಗಿಸುವುದು ಬಿಟ್ಟು ಅನ್ಯ ಧರ್ಮದ ಕಾರ್ಯಗಳಿಗೆ ಬಳಸುವುದು ತಪ್ಪು. ನೀವು ನಮ್ಮ ಮಠಕ್ಕೆ ಬೇಟಿ ನೀಡಿದ್ದೀರಿ ಸಂತೋಷ ಆದರೇ ನೀವು ಹಿಂದೂ ವಿರೋದಿ ಕಾರ್ಯಗಳನ್ನು ಮಾಡುತ್ತಿರುವುದರಿಂದ ನಮ್ಮ ಆಶೀರ್ವಾದ ನಿಮಗಿರುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.* ಇದರಿಂದ ವಿಚಲಿತರಾದ ಸಿದ್ದು ಮತ್ತು ರಾಹುಲ್ ಹೊರ ಬಂದಾಗ ಮಾದ್ಯಮಗಳಿಗೆ ಈ ವಿಚಾರ ಹೋಗದಂತೆ ಎಚ್ಚರವಹಿಸಿದ್ದಾರೆ. ಆದರೇ ಸಿದ್ದು ಮತ್ತು ರಾಹುಲ್ ಹೋರ ಹೋದ ನಂತರ ಮಠದ ಸಿಬ್ಬಂದಿ ವರ್ಗದವರು ಜಗದ್ಗುರುಗಳ ನುಡಿಯನ್ನು ಸಂತೋಷಗೊಂಡು ಅವರವರ ಆಪ್ತರ ಬಳಿ ಮಾತನಾಡಿದ್ದು ಸದ್ಯ ಕಾಂಗ್ರೇಸಿಗರಿಗೆ ಶೃಂಗೇರಿ ಜಗದ್ಗುರುಗಳು ತರಾಟೆಗೆ ತೆಗೆದುಕೊಂಡ ಸುದ್ದಿ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿದೆ. *ರಾಜಕೀಯ ಏನೇ ಇರಲಿ ಜಗದ್ಗುರುಗಳ ಸ್ಥಾನದಿಂದ ನಿಜಕ್ಕೂ ದಾರಿತಪ್ಪಿದವರಿಗೆ ಬುದ್ದಿ ಹೇಳಿದ ಕೆಲಸ ಮಾಡಿದ ಶೃಂಗೇರಿ ಜಗದ್ಗುರುಗಳು ನಿಜಕ್ಕೂ ಮಲೆನಾಡಿಗರ ಶೃಂಗೇರಿ ಭಕ್ತರ ಹಾಗೂ ಕೋಟ್ಯಾಂತರ ಹಿಂದುಗಳ ಹೆಮ್ಮೆ ಎಂದರೆ ತಪ್ಪಾಗಲಾರದು.*
*ಜಗದೀಶ್ಚಂದ್ರ.ಬಿ*
*ಸಂಪಾದಕರು. ಹಿಂದುತ್ವ ಬಂದುತ್ವ ಮಾಸಪತ್ರಿಕೆ*