Wednesday, 14 March 2018

2018 ರ ಯುಗಾದಿಯ ರಾಶಿಭವಿಷ್ಯ ಗೋಚಾರ ಫಲ.


ಮೇಷ: ಮನೆಯಲ್ಲಿ ಶುಭಕಾರ್ಯಗಳು ವರ್ಷಾರಂಭದಲ್ಲಿ ಜರಗುವುದು ಸುಖಪ್ರದವು ಸಂತೋಷವು ಹೆಚ್ಚಾಗುವುದು
ವ್ಯಾಪಾರದಲ್ಲಿ ವಿಶೇಷ ಲಾಭ ಪಾಲುದಾರರಿಂದ ಶುಭಕರ ತಾಯಿಯ ಆರೋಗ್ಯದಲ್ಲಿ ಸಮಸ್ಸೆಗಳು ವಾಹನಗಳಿಂದ ತೊಂದರೆ ದಂಡ ಕಟ್ಟಬೇಕಾಗುತ್ತದೆ ಭೂಮಿಯಿಂದ ಅನಾನುಕೂಲಗಳವೆ ಹೆಚ್ಚು ವಿಧ್ಯಾರ್ಥಿಗಳು ಕಷ್ಟಪಟ್ಟು ಓದಬೇಕಾಗುತ್ತದೆ ಕೆಟ್ಟಕನಸುಗಳು ಹೆಚ್ಚು ಕಾಣುವುದು ದೀರ್ಘ ಪ್ರಯಾಣಗಳು ವಾತರೋಗದಿಂದ ಸಮಸ್ಸೆಗಳು ಹೆಚ್ಚಾಗುವುದು
ಆದಿತ್ಯ ಹೃದಯ ಪಾರಾಯಣ ಮತ್ತುಶಿವ ಪಂಚಾಕ್ಷರಿ ಮಂತ್ರವನ್ನು ತಪ್ಪದೆ ಪಠಿಸಿರಿ.
ವೃಷಭ: ವೃಷಭ ರಾಶಿಯವರಿಗೆ ವರ್ಷಾರಂಭದಲ್ಲಿ ಸಾಧಾರಣ ಫಲವನ್ನು ಅನುಭವಿಸುವರು ಕೌಟುಂಬಿಕ ಜೀವನದಲ್ಲಿ ಸಮಸ್ಸೆಗಳು ಹೆಚ್ಚಾಗುವುದು ಕಷ್ಟಪಟ್ಟು ದುಡಿದರೂ ಲಾಭ ಕಡಿಮೆಯಾಗುವುದು ಸಾಲಗಳು ಹೆಚ್ಚಾಗುವುದು ಮದುವೆ ವಿಚಾರದಲ್ಲಿ ಅಶಾಂತಿ ಆದರೆ ವರ್ಷಾಂತ್ಯದಲ್ಲಿ ಶುಭಕರವಾಗುವುದು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯಾಗುವಿರಿ.
ಶನಿ ಅಷ್ಟೋತ್ತರ ಶನಿ ದೇವರ ಪೂಜೆ ಮಾಡುಬೇಕು.

ಮಿಥುನ: ಮಿಥುನ ರಾಶಿಯವರಿಗೆ ವರ್ಷಪೂರ್ತಿ ಶನಿ ಸಪ್ತಮದ ದೃಷ್ಟಿ ಬೀಳುವುದರಿಂದ ನೀಚ ಜನರ ಸಹವಾಸ ಗಂಡ ಹೆಂಡತಿಯರಲ್ಲಿ ಮನಸ್ಥಾಪಗಳು ಹೆಚ್ಚಾಗುವುದು ವ್ಯಾಪಾರದಲ್ಲಿ ನಿಧಾನವಾಗಿ ಬೆಳವಣಿಗೆ ಯಾಗುವುದು ಪಾಲದಾರರಿಂದ ಮೋಸ ಮನೆಯಲ್ಲಿ ಅಶಾಂತಿ ಹೆಚ್ಚಾಗುವುದು ಒಳ್ಳೆಯ ಆರೋಗ್ಯ ಶರೀರ ಸುಖ ಮಕ್ಕಳ ಭಾಗ್ಯ ಒದಗುವುದು ಸ್ನೇಹಿತರಿಂದ ಸಹಾಯ ದೊರಕುವುದು ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ ಧಾರ್ಮಿಕ ಭಾವನೆಗಳು ಹೆಚ್ಚಾಗುತ್ತದೆ.
ವಿಷ್ಣುವಿನ ಸ್ತ್ರೋತ್ರ ವಿಷ್ಣು ಪಾರಾಯಣ ಮಾಡಿದರೆ ಒಳ್ಳೆಯದು.
ಕಟಕ: ಕಟಕ ರಾಶಿಯವರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಆಗುತ್ತದೆ ವಿನಾಕಾರಣ ಅಪವಾದಗಳು ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಧೈರ್ಯ ಕಡಿಮೆಯಾಗುವುದು ಭೂಮಿ ವಿಚಾರ ಮನೆ ತೆಗೆದುಕೊಳ್ಳುವ ವಿಚಾರದಲ್ಲಿ ಒಳ್ಳೆಯದಾಗುತ್ತದೆ ತಾಯಿಯ ಮೇಲೆ ಪ್ರೀತಿ ಹೆಚ್ಚಾಗುವುದು ತಾಯಿಯ ಆರೋಗ್ಯದಲ್ಲಿ ಸುಧಾರಿಸುವುದು ಮತ್ತು ಸಾಲಗಳು ಇನ್ನೂ ಹೆಚ್ಚಾಗುವುದು ಮನೆಯಳ್ಳಿ ಕಳ್ಳತನಗಳು ಆಗುವುದು.
ಸುಬ್ರಹ್ಮಣ್ಯನ ಆರಾಧೆ ಮತ್ತು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ.
ಸಿಂಹ: ಸಿಂಹ ರಾಶಿಯವರಿಗೆ ನಾನಾರೀತಿ ಚಿಂತೆಗಳು ಶರೀರದಲ್ಲಿ ಅನಾರೋಗ್ಯ ಆಸ್ಪತ್ರೆಗೆ ಹೆಚ್ಚು ಖರ್ಚು ಹಣದ ವಿಚಾರದಲ್ಲಿ ಸಂಬಂಧಿಕರಿಂದ ದ್ವೇಷ ತಿರುಗಾಟ ಹೆಚ್ಚಾಗುವುದು ಆಸ್ತಿ ವಿಚಾರದಲ್ಲಿ ದಾಯಾದಿಗಳ ಕಲಹಗಳು ಪ್ರೀತಿ ಪ್ರೇಮವಿಚಾರದಲ್ಲಿ ಮೋಸವಾಗುವುದು ನಂತರ ಅಂದರೆ ವರ್ಷಾಂತ್ಯದಲ್ಲಿ ಶುಭಕರ ಮನೆ ಆಸ್ತಿ ವಾಹನಗಳು ತೆಗೆದುಕೊಳ್ಳುವುದು ವಿದ್ಯಾಭ್ಯಾಸ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸುವುದು.
ಶಿವನ ಪಂಚಾಕ್ಷರಿ ಮಂತ್ರವನ್ನು ತಪ್ಪದೆ ಪಠಿಸಿರಿ.

ಕನ್ಯಾ: ಕನ್ಯಾರಾಶಿಯವರಿಗೆ ಮೊದಲಿದ್ದ ಸಂತೋಷ ಸಂಭ್ರಮ ನಿಧಾನವಾಗಿ ಮರೆಯಾಗುವ ಸಾಧ್ಯತೆ ಹೆಚ್ಚು ಹಣವನ್ನು ವ್ಯಯಮಾಡುವುದು ಮನೆಯಲ್ಲಿ ಶುಭ ಕಾರ್ಯಗಳು ಜರಗುವುದು ಮತ್ತು ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿತೋರುವುದು ನಿಮ್ಮ ನಿರ್ಧಾರ ಮತ್ತು ಮಾತನ್ನು ಎಲ್ಲಾರೂ ಒಪ್ಪುವರು ವಾಹನ ವಿಚಾರದಲ್ಲಿ ತೊಂದರೆಗಳು ಮತ್ತು ಅದರಿಂದ ನಷ್ಟವನ್ನು ಅನುಭವಿಸುವಿರಿ ಆಸ್ಥಿ ತೆಗೆದುಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ಲಕ್ಷ್ಮೀನರಸಿಂಹ ದೇವರ ಆರಾಧನೆ ಬಹಳ ಮುಖ್ಯ.

ತುಲಾ: ತುಲಾ ರಾಶಿಯವರಿಗೆ ಹೆಚ್ಚು ಗೌರವಗಳು ಒಳ್ಳೆಯ ಅಭಿವೃದ್ದಿ ಕಾಣುವಿರಿ ವರ್ಷಾಂರಭದಲ್ಲಿ ಶ್ರೇಯಸ್ಸು ಶುಭಕಾರ್ಯಗಳು ಹೆಚ್ಚಾಗುವುದು ದೇವರು ಧರ್ಮಗಳ ಬಗ್ಗೆ ಆಸಕ್ತಿ ವಿದೇಶ ಪ್ರಯಾಣ ವಿದ್ಯಾಭ್ಯಾಸದಲ್ಲಿ ಶ್ರೇಯಸ್ಸು ಕಾಣುವಿರಿ ಆದರೆ ನಿಮ್ಮ ಸ್ವಂತ ಸಹೋದರ ಸಹೋದರಿಯರಿಂದ ನಿಮ್ಮ ಮನಸ್ಸಿಗೆ ನೋವಾಗುವುದು ಕ್ರೀಡಾವಿಚಾರದಲ್ಲಿ ಆಸಕ್ತಿ ಕಡಿಮೆಯಾಗುವುದು ಬಂಧುಬಾಂಧವರು ನಿಮ್ಮನ್ನು ದ್ವೇಷಿಸುವರು ಸ್ವಂತ ಜನರಿಂದ ಅಪವಾದಗಳು ಉಂಟಾಗುತ್ತದೆ.
ಗುರು ದೇವರನ್ನು ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿ ನಷ್ಟಭಯ ಕೆಲವು ಸಮಯದಲ್ಲಿ ಬೇಸರದಿಂದ ಇರುವಿರಿ ಕುಟುಂಬದಲ್ಲಿ ಅನೇಕ ತೊಂದರೆಗಳು ಮನೆಯಿಂದ ದೂರವಿರಲು ಮನಸ್ಸು ಬರಬಹುದು ಕೆಟ್ಟ ಮಾತುಗಳು ನಿಮ್ಮನ್ನು ಚಿಕ್ಕವರಾಗಿ ಮಾಡಬಹುದು ನಿಮ್ಮಮಾತಿಗೆ ಬೆಲೆಕೊಡದೆ ಇರುವುದು ದೃಷ್ಟಿದೋಷದಿಂದ ನರಳುತ್ತೀರಿ ಹಣವನ್ನು ಅನ್ಯಾಯಕ್ಕೆ ಖರ್ಚುಮಾಡಿ ನಂತರ ಪಶ್ಚಾತ್ತಾಪ ಪಡುವುದು ವರ್ಷಾಂತ್ಯದಲ್ಲಿ ಶುಭವಾಗುತ್ತದೆ.
ದುರ್ಗಾದೇವತೆ ಆರಾಧನೆ ಮತ್ತು ಪೂಜೆ ಮಾಡುವುದರಿಂದ ಒಳ್ಳೆಯದು.
ಧನಸ್ಸು: ಧನಸ್ಸು ರಾಶಿಯವರು ವರ್ಷಪೂರ್ತಿ ತುಸು ಕಷ್ಟ ಕಾರ್ಪಣ್ಯಗಳನ್ನು ಹೆದುರಿಸಬೇಕಾಗುತ್ತದೆ ಜನರಿಂದ ಮೋಸ ಅಪವಾದ ಹೆಚ್ಚಾಗುವುದು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆವಹಿಸುವುದು ಅಗತ್ಯ ಕಾಲಿಗೆ ಸಂಬಂಧಿಸಿದ ರೋಗಗಳು ಹೆಚ್ಚಾಗುವುದು ಸ್ನೇಹಿತರಿಂದ ಅನೇಕ ಸಮಸ್ಸೆಗಳಿಗೆ ಸಹಾಯ ಪರಿಹಾರ ಆಗುತ್ತದೆ ನಿಷ್ಕಳಂಕ ಬುದ್ದಿಯನ್ನು ಎಲ್ಲರೊಂದಿಗೆ ತೋರುವಿರಿ
ಶನೇಶ್ಚರನ ಪೂಜೆ ಮತ್ತು ಆರಾಧನೆ ಮಾಡಬೇಕು.

ಮಕರ: ಮಕರ ರಾಶಿಯವರಿಗೆ ಹಿತ ಶತ್ರುಗಳು ಹೆಚ್ಚಾಗುವರು ತುಚ್ಚ ಜನಗಳ ಸ್ನೇಹವುಳ್ಳವರೂ ಹಣವನ್ನು ಅತಿರೇಕವಾಗಿ ವ್ಯಯ ಮಾಡುವಿರಿ ಗುಪ್ತವಾಗಿಯೇ ಎಲ್ಲಾ ಸಮಸ್ಸೆಗಳನ್ನು ಇಟ್ಟುಕೊಳ್ಳುವಿರಿ ಜನ್ಮ ಸ್ಥಳದಿಂದ ಬಹಳ ದೂರ ಹೋಗಿ ವಾಸ ಮಾಡುವಿರಿ ವೃತ್ತಿಯಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗುವುದು ವ್ಯವಹಾರದಲ್ಲಿ ಶುಭ ವಾಗಿ ಲಾಭ ಕಾಣುವಿರಿ ಸಾಡೇಸಾತಿ ಶನಿ ನಿಮಗೆ ಪ್ರರಂಭವಾಗಿದೆ.
ಆಂಜನೇಯನ ಸ್ತ್ರೋತ್ರ ಪಠಿಸಿ ಒಳ್ಳೆಯದಾಗುತ್ತದೆ.

ಕುಂಭ: ಕುಂಭ ರಾಶಿಯವರು ಈ ವರ್ಷ ಮಿಶ್ರ ಫಲವನ್ನು ಅನುಭವಿಸುವಿರಿ ವಾಯು ಸಂಬಂಧ ರೋಗಗಳು ಹೆಚ್ಚಾಗುವುದು ಮಂಡಿ ನೋವು ಪದೆ ಪದೆ ಕಾಡುವುದು ಕೆಟ್ಟ
ಸ್ನೇಹಿತರಿಂದ ದೂರ ಹೋಗುವುದೇ ಒಳ್ಳೆಯದು ವ್ಯವಹಾರದಲ್ಲಿ ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಸೆ ಹೆಚ್ಚುವುದು ಹೊಸ ಪ್ರಯತ್ನದಿಂದ ಲಾಭ ಕಾಣುವಿರಿ ಆಧ್ಯಾತ್ಮ ವಿಚಾರದಲ್ಲಿ ಹೆಚ್ಚು ಆಸಕ್ತಿ ವಿದ್ಯಾಭ್ಯಾಸದಲ್ಲಿ ಉನ್ನತಿ ಮದುವೆ ಇನ್ನಿತರ ಶುಭಕಾರ್ಯಗಳು ನಡೆಯುವುದು ವಿದೇಶದಲ್ಲಿ ಇರುವವರು ಶುಭ ಸುದ್ದಿ ಕೊಡುವರು.
ಗಣಪತಿ ದೇವರ ಆರಾಧನೆ ಪೂಜೆ ಮಾಡಿವುದರಿಂದ ಒಳ್ಳೆಯದು.

ಮೀನ: ಮೀನ ರಾಶಿಯವರಿಗೆ ವೃತ್ತಿಗೆ ಸಂಚಕಾರ ಬೀಳಬಹುದು ಭೂಮಿ ಖರೀದಿ ವಿಷಯದಲ್ಲಿ ಮೋಸ ಮಕ್ಕಳ ವಿಚಾರದಲ್ಲಿ ದುಃಖ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಆಗುವುದು ಅತಿ ಹಾಸೆಯಿಂದ ನಷ್ಟ ಅನುಭವಿಸುವುದು ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಬಹುದು ವಿದ್ಯಾಭ್ಯಾಸದಲ್ಲಿ ಕುಂಟಿತ ಕಾಣಬಹುದು ವ್ಯವಹಾರದಲ್ಲಿ ಸಾಧಾರಣ ಫಲವನ್ನು ಅನುಭವಿಸುವಿರಿ.
ಗುರು ರಾಘವೇಂದ್ರರ ಆರಾಧನೆ ಮಾಡಿ ಒಳ್ಳೆಯತಾಗುತ್ತದೆ.

No comments:

Post a Comment