Wednesday, 14 March 2018

ಇಟ್ಟಿಗೆ ಸೀಗೋಡು ಬಬ್ಬು ಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ನೆರವು- ಕಲ್ಮಕ್ಕಿ ಉಮೇಶ್ 

ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡಿನ ನಿರ್ಮಾಣ ಹಂತದಲ್ಲಿರುವ ಬಬ್ಲು ಸ್ವಾಮಿ ದೇವಸ್ಥಾನಕ್ಕೆ ಶಾಸಕ ಶ್ರೀ ಡಿ.ಎನ್.ಜೀವರಾಜ್ ರವರ ಸಲಹೆ ಸೂಚನೆಯಂತೆ ಆದಷ್ಟು ಬೇಗ ದೇವಸ್ಥಾನದ ಕಾಮಗಾರಿ ಮುಗಿಸಲು ಬೇಕಾದ ಆರ್ಥಿಕ ಸಹಾಯವನ್ನು ಬರಿಸುವುದಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್ ಇಟ್ಟಿಗೆ ಸೀಗೋಡಿನ ಗ್ರಾಮಸ್ಥರು ಮತ್ತು ಬಬ್ಲು ಸ್ವಾಮಿ ದೇವಸ್ಥಾನದ ಕಮಿಟಿಯವರಿಗೆ ಬರವಸೆ ನೀಡಿದ್ದಾರೆ.

ಸುತ್ತಮುತ್ತ ಬಹುಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ಬಬ್ಲು ಸ್ವಾಮಿ ದೇವಸ್ಥಾನ ಆದಷ್ಟು ಬೇಗ ಕಾಮಗಾರಿ ಮುಗಿಸಲು ಬೇಕಾದ ಆರ್ಥಿಕ ಸಹಾಯವನ್ನು ಭಕ್ತರನ್ನು ಒಳಗೊಂಡಂತೆ ನಾವು ಸಹ ಹೆಚ್ಚಿನ ದೇಣಿಗೆ ನೀಡಿ ಕಾಮಗಾರಿ ಮುಗಿಸುವುದಾಗಿ ಕಲ್ಮಕ್ಕಿ ಉಮೇಶ್ ನುಡಿದರು.
ಈ ಸಂಧರ್ಭದಲ್ಲಿ ಇಟ್ಟಿಗೆ ಸೀಗೋಡುವಿನ ಗ್ರಾಮಸ್ಥರು ಮತ್ತು ದೇವಸ್ಥಾನ ಕಮಿಟಿಯವರು  ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಮೊದಲಬಾರಿ ಗ್ರಾಮಕ್ಕೆ ಮತ್ತು ದೇವಸ್ಥಾನಕ್ಕೆ ಆಗಮಿಸಿದ ಕಲ್ಮಕ್ಕಿ ಉಮೇಶ್ ರವರನ್ನು ಊರಿನ ಪರವಾಗಿ ಅಭಿನಂದಿಸಿದರು.  ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಪ್ರಭಾಕರ್ ಪ್ರಣಸ್ವಿ, ಬಿಜೆಪಿ ಇಟ್ಟಿಗೆ ಸೀಗೋಡು ಮುಖಂಡ ಮಹೇಶ್ ಉಪಸ್ಥಿತರಿದ್ದರು

No comments:

Post a Comment