Thursday 15 March 2018

ಬಾಳೆಹೊನ್ನೂರು-ಸಿಡಿಲು ಬಡಿದು ಮನೆ ಭಸ್ಮ.









ಬಾಳೆಹೊನ್ನೂರು  ವರ್ಷದ ಮೊದಲ ಮಳೆ ಆಗಮನಕ್ಕಾಗಿ ಹಾತೋರೆಯುತ್ತಿದ್ದಾಗಲೇ ಮಳೆ ಆರಂಭಕ್ಕೂ ಮುನ್ನಾ ಗುಡುಗು ಸಿಡಿಲಿನ ಅರ್ಭಟಕ್ಕೆ ಮನೆ ಸಂಪೂರ್ಣ ಭಸ್ಮವಾಗಿದ್ದು ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ.
ಶ್ರೀ ರಂಭಾಪುರೀ ಮಠ ವ್ಯಾಪ್ತಿಯ ಅವಿನಾಶ್ ಎಂಬುವವರ ಮನೆಯಲ್ಲಿ ದಿನಾಂಕ 14-3-2018 ರ ರಾತ್ರಿ 7ಗಂಟೆಗೆ ಸರಿಯಾಗಿ ಅವಿನಾಶ್ ರವರ ಪತ್ನಿ ಕ್ಯಾಂಡಲ್ ತರುವ ಉದ್ದೇಶದಿಂದ ಮನೆಯ ಬಾಗಿಲು ಹಾಕಿ ಅಂಗಡಿಗೆ ತೆರಳಿದ್ದಾಗ ಹೊರಗಡೆ ಸಣ್ಣದಾಗಿ ಗುಡುಗು ಮಿಂಚು ಆರಂಭವಾಗಿದೆ.  ಮನೆಯ ಮೇಲ್ಭಾಗದ ಸಣ್ಣ ಡಿಷ್ ಮುಖಾಂತರ ಸಿಡಿಲು ಮನೆಯನ್ನು ಪ್ರವೇಶಿಸಿದ್ದು ಮನೆಯಲ್ಲಿದ್ದ ಟಿ.ವಿ. ದಿನನಿತ್ಯದ ಪರಿಕರ, ಬಟ್ಟೆ ಪಾತ್ರೆ ಎಲ್ಲವೂ ಸಿಡಿಲಿನ ಪ್ರಕರತೆಗೆ ಸುಟ್ಟುಹೋಗಿದ್ದು 4 ಕೊಠಡಿಗಳ ಮನೆಯಲ್ಲಿ 3 ಕೊಠಡಿಯ ಮನೆ ಪರಿಕರಗಳು ಸುಟ್ಟು ಕರಕಲಾಗಿವೆ. ಮನೆಯ ದಿನ ನಿತ್ಯದ ಪರಿಕರಗಳು ಮರುಬಳಕೆಗೆ ಬಾರದಷ್ಟು ಸುಟ್ಟು ಕರಕಲಾಗಿದ್ದು ಮನೆಯ ಕಾಂಕ್ರೀಟ್ ಗೋಡೆಯೂ ನಾಲ್ಕಾರು ಕಡೆ ಬಿರುಕುಬಂದಿದ್ದು ಅದೃಷ್ಠವಷಾತ್ ಮನೆಯಲ್ಲಿದ್ದ ತುಂಬಿದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿಲ್ಲ. ಗ್ಯಾಸ್ ಸಿಲಿಂಡರ್ ಏನಾದರೂ ಸ್ಪೋಟಗೊಂಡಿದ್ದರೆ ಅಕ್ಕಪಕ್ಕದ ಮನೆಗೂ ಬೆಂಕಿ ಆವರಿಸಿ ದೊಡ್ಡ ಅವಘಡವೇ ಸಂಭವಿಸುವ ಸಾದ್ಯತೆಯಿತ್ತು ಎಂದು ಸ್ಥಳಿಯರು ನುಡಿಯುತ್ತಾರೆ. ಒಟ್ಟಾರೆ 90ರಿಂದ 1ಲಕ್ಷ ರೂಗಳು ನಷ್ಟವುಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಇನ್ನಾದರೂ ಮಲೆನಾಡಿಗರು ಗುಡುಗು ಮಿಂಚು ಬರುವ ಸಂಧರ್ಭದಲ್ಲಿ ಮನೆಯ ಎಲೆಕ್ಟಾನಿಕ್ ವಸ್ತುಗಳ ಸಂಪರ್ಕವನ್ನು ತಪ್ಪಿಸಿ ಎಚ್ಚರವಹಿಸಿದರೇ ಮುಂದಾಗುವ ಅವಘಡವನ್ನು ತಪ್ಪಿಸಬಹುದು.

No comments:

Post a Comment