Monday 5 March 2018

ಕಾಂಗ್ರೇಸ್ ಟಿಕೇಟ್ ಒಂದು - ಮೂರು ಬಾಗಿಲು...
ಶೃಂಗೇರಿ  ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ ಸಚಿನ್ ಮಿಗ: ಮೇಲ್ನೋಟಕ್ಕೆ ಕಾಂಗ್ರೇಸ್ ನಲ್ಲಿ ಭಿನ್ನಮತ?


ಅಂತೂ ಇಂತೂ ಕಾಂಗ್ರೇಸ್ ನ ಶೃಂಗೇರಿ ಅಭ್ಯರ್ಥಿಯಾಗಿ ಸದಾಕಾಲ ಪಕ್ಷ ಸಂಘಟನೆಯಲ್ಲಿ ಮುಂಚುಣಿ ನಾಯಕರಾಗಿರುವ ಯುವ ಮುಂದಾಳು ಸಚಿನ್ ಮಿಗ ಕೆ.ಪಿ.ಸಿ.ಸಿ ಗೆ   ಅರ್ಜಿ ಸಲ್ಲಿಸಿದ್ದು ಶೃಂಗೇರಿ ಕ್ಷೇತ್ರದ ರಾಜಕೀಯ ಚಿತ್ರಣ ಸಂಪೂರ್ಣ ಗರಿಗೆದರಿದಂತಾಗಿದ್ದು ಕಾಂಗ್ರೇಸ್ ನಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದು ಸದ್ಯ ರಸ್ತೆಗಳಲ್ಲಿ ಚರ್ಚೆ ಮಟ್ಟಕ್ಕೆ ಬಂದಿದ್ದು ಆ ಪಕ್ಷದ ಹೈ ಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತಾರೆಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನೂ ಹಾಲಿ ಸಚಿನ್ ಮಿಗ ಚುನಾವಣೆ ಇರಲಿ ಇಲ್ಲದಿರಲಿ ಪಕ್ಷ ಸಂಘಟನೆಯಲ್ಲಿ ಸದಾಕಾಲ ತೊಡಗಿರುವ ನಮ್ಮನ್ನೇ ಹೈ ಕಮಾಂಡ್ ಅಭ್ಯರ್ಥಿಯನ್ನಾಗಿಸುತ್ತಾರೆಂಭ ಭರವಸೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನೂ ಕಳೆದ ಎರೆಡೂ ಬಾರಿ ಪರಾಜಿತ ಅಭ್ಯರ್ಥಿ ಟಿ.ಡಿ.ಆರ್ ಅವರು ಸಹ ಕಳೆದ 1ವರ್ಷಗಳಿಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು ಅವರು ಸಹ ಟಿಕೇಟ್ ಆಕಾಂಕ್ಷಿಯಾಗಿದ್ದು ಇನ್ನೂ ಇವರೆಲ್ಲರಿಗಿಂತ ಭಿನ್ನ ವ್ಯಕ್ತಿತ್ವದ ಆರತಿ ಕೃಷ್ಣರವರು ದಿಲ್ಲಿಯಲ್ಲಿ ಹಾಗೂ ರಾಜ್ಯದ ಪ್ರಭಾವಿ ಮುಖಂಡರ ಒಡನಾಟವಿದ್ದು ದಿಲ್ಲಿ ದೊರೆಗಳ ಕೃಪಾಶೀರ್ವಾದ ಮತ್ತು ತಮ್ಮ ತಂದೆಯವರ ನಾಮಬಲದಿಂದ ಕೊನೆಗಳಿಗೆಯಲ್ಲಿ ಟಿಕೇಟ್ ತಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಒಟ್ಟಾರೆ ಕಾಂಗ್ರೇಸ್ ಒಗ್ಗಾಟ್ಟುಗುವ ಸಮಯದಲ್ಲಿ ಟಿಕೇಟ್ ಒಂದು ಮೂರು ಬಾಗಿಲು  ಆಗಿರುವುದು ಸದ್ಯದ ಕ್ಷೇತ್ರದ ಚಿತ್ರಣ.

No comments:

Post a Comment