Friday 9 March 2018

10-3-2018 ಶನಿವಾರ ಜೀವರಾಜ್ ರಸ್ತೆ ಬಂದ್..

ಬಾಳೆಹೊನ್ನೂರಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಅನುದಾನದಲ್ಲಿ ಶಾಸಕ ಡಿ.ಎನ್ ಜೀವರಾಜ್ ರವರ ಅಭಿವೃದ್ಧಿ ದೃಷ್ಠಿಕೋನದಲ್ಲಿ ಬಾಳೆಹೊನ್ನೂರಿನ ಇತಿಹಾಸದಲ್ಲಿಯೇ ಅತಿದೊಡ್ಡಮೊತ್ತದ ಕಾಮಗಾರಿಯಾದ ಜೆಸಿ ಸರ್ಕಲ್ ನಿಂದ ಚೌಡಿಕೆರೆವರೆಗಿನ ಕಾಂಕ್ರೀಟ್ ರಸ್ತೆ ಅರ್ಥಾತ್ ಜೀವರಾಜ್ ರಸ್ತೆ ಯಲ್ಲಿರುವ ಇತಿಹಾಸ ಪ್ರಸಿದ್ಧಡೋಬಿಹಳ್ಳಕ್ಕೆ ಬೃಹದಾಕಾರವಾದ ಭೀಮ್ ಜೋಡಣೆ ಕಾರ್ಯವಿರುವುದರಿಂದ  ಬೆಳಿಗ್ಗೆ 5ಗಂಟೆಯಿಂದ ಸಾಯಂಕಾಲದವರೆಗೂ ಯಾವುದೇ ವಾಹನ ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತಿಲ್ಲ ಎಂದು ನ್ಯಾಷನಲ್ ಕನ್ಸ್ಟ್ರಕ್ಷನ್ ನ ಸೈಟ್ ಎಂಜಿನಿಯರ್ ಬ್ಲಾಗ್ ಗೆ ತಿಳಿಸಿದ್ದಾರೆ. ಆದರೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿ ಎರೆಡುಗಂಟೆಗೊಮ್ಮೆ ವಾಹನಗಳನ್ನು ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಡೋಬಿಹಳ್ಳಕ್ಕೆ ನಿರ್ಮಿಸುತ್ತಿರುವ ಹೊಸ ಸೇತುವೆಗೆ ಸುಮಾರು 45ಅಡಿ ಉದ್ದ 2ಅಡಿ ದಪ್ಪ 4.5ಅಡಿ ಎತ್ತರದ ಬೃಹತ್ ಆದ 4ಭೀಮ್ ಗಳನ್ನು ಬೃಹದಾಕಾರದ 2 ಕ್ರೇನ್ ಮೂಲಕ ಜೋಡಿಸುವ ಕಾರ್ಯ ಶನಿವಾರ ನೆಡೆಯಲಿದ್ದು ಮುಂಜಾಗ್ರತ ದೃಷ್ಠಿಯಿಂದ ವಾಹನ ಸಂಚಾರ ನಿರ್ಭಂದ ಅನಿವಾರ್ಯ ಎಂದು ಬ್ಲಾಗ್ ಗೆ ತಿಳಿಸಿದ್ದಾರೆ.
ಈಗಾಗಲೇ ಭೀಮ್ ಗಳು ರೆಡಿಯಾಗಿದ್ದು ಭೀಮ್ ಜೋಡಣೆಗೆ ಸಕಲ ಸಿದ್ಧತೆಗಳು ನೆಡೆದಿದ್ದು ಬಲು ಅಪರೂಪದ ಈ ಜೋಡಣೆ ಕಾರ್ಯ ನೋಡಲು ಜನತೆ ಕಾತುರರಾಗಿರುವುದರಿಂದ ಪೋಲಿಸ್ ಇಲಾಖೆ ಹೆಚ್ಚಿನ ಸಿಬ್ಭಂದಿಯೊಂದಿಗೆ ಬಂದೋಬಸ್ದ್ ನ ಕೈಗೊಳ್ಳ ಬೇಕಾಗಬಹುದು. ಅದೇ ರೀತಿ ಶನಿವಾರದ ದಿನ ಆದಷ್ಟು ಬಾಳೆಹೊನ್ನೂರಿಗೆ ಬರುವವರು ದ್ವಿಚಕ್ರವಾಹನ ಬಳಸಿದರೇ ಹೆಚ್ಚಿನ ವಾಹನ ದಟ್ಟಣೆಯಿಂದ ಆಗಬಹುದಾದ ಪರಿತಾಪವನ್ನು ತಪ್ಪಿಸಿಕೊಳ್ಳಬಹುದು.

No comments:

Post a Comment