ಜೀವರಾಜ್ ವಾಕ್ಚಾತುರ್ಯಕೆ ಬೆವರಿದ ಕಾಂಗ್ರೇಸ್.. ಕೋಲು ಕೊಟ್ಟು ಹೊಡೆತ ತಿಂದ ಕಾಂಗ್ರೇಸ್ ಮುಖಂಡರು
ಶೃಂಗೇರಿ ಕ್ಷೇತ್ರ ನ್ಯೂಸ್ ಮಾರ್ಚ್ 13.
ಇಂದು ಬಾಳೆಹೊನ್ನೂರಲ್ಲಿ ಎ.ಪಿ.ಎಂ.ಸಿ ಮುಂದಾಳತ್ವದಲ್ಲಿ ಬಾಳೆಹೊನ್ನೂರು ಸಂತೆ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮ. ಕಾಂಗ್ರೇಸ್ ಮುಖಂಡರುಗಳದ್ದೇ ಪಾರುಪತ್ಯವಾಗಿದ್ದರು ಬಾಳೆಹೊನ್ನೂರಿನ ಅಭಿವೃದ್ಧಿ ದೃಷ್ಟಿಯನ್ನು ಮನಗಂಡು ಪ್ರೋಟೋಕಾಲ್ ಪ್ರಕಾರ ಜೀವರಾಜ್ ಸಹ ಆಗಮಿಸಿದ್ದರು. ಬಾರಿ ಪ್ರಚಾರದ ಈ ಕಾರ್ಯಕ್ರಮಕ್ಕೆ ಬಂದಿದ್ದು ಬೆರಳೆಣಿಕೆಯಷ್ಟು ಜನ ಮಾತ್ರ. ಅಂತೂ ಇಂತೂ ಮಾರುಕಟ್ಟೆ ಉದ್ಘಾಟನೆ ಗೊಂಡಿತು. ತದ ನಂತರ ನೆಡೆದ ಸಭಾ ಕಾರ್ಯಕ್ರಮದಲ್ಲಿ ಹೇಗಾದರೂ ಮಾಡಿ ಜೀವರಾಜ್ ರವರಿಗೆ ಮುಖಬಂಗ ಮಾಡಬೇಕೆನ್ನುವುದು ಕಾಂಗ್ರೇಸ್ ನ ಪೂರ್ವ ನಿಯೋಜಿತ ಹಳೆಚಾಳಿ ಇರಬಹುದೇನೋ ಎಂಬಂತೆ ಪತ್ರಿಕೆಯಲ್ಲಿ ಹೆಸರಿರದಿದ್ದರೂ ವೇದಿಕೆಯಲ್ಲಿ ಮಾತನಾಡಲು ಕಾಂಗ್ರೇಸ್ ಮುಖಂಡರೋರ್ವರು ಬಂದರು. ಬಂದವರು ಸುಮ್ಮನಿರಲಾರದೇ ವೇದಿಕೆಯಲ್ಲಿ ಹಾಕಿರುವ ಪ್ಲೆಕ್ಸ್ ನಲ್ಲಿ ಜೀವರಾಜ್ ಭಾವಚಿತ್ರವಿರುವುದನ್ನು ಆಕ್ಷೇಪಿಸಿ ಅ ಚಿತ್ರದ ಬದಲು ಎಪಿಎಂಸಿ ಅಧ್ಯಕ್ಷರ ಚಿತ್ರ ಇರಬೇಕೆಂದು ಖ್ಯಾತೆ ತೆಗೆದು ತಮ್ಮ ಮಾತನ್ನು ಮುಗಿಸಿದರು.
ನಂತರ ಜೀವರಾಜ್ ತಮ್ಮ ಎಂದಿನ ಶೈಲಿಯಲ್ಲಿಯೇ ಮಾತನಾಡಲು ಶುರು ಮಾಡಿದ ಅವರು ಅಭಿಮಾನದಿಂದ ನನ್ನ ಭಾವ ಚಿತ್ರ ಹಾಕಿರುವುದಕ್ಕೆ ನಾನೇನು ಹೇಳಲಾರೇ ಹಾಗಂತ ನನ್ನ ಭಾವಚಿತ್ರ ಹಾಕದಿದ್ದರೂ ನಾನು ಆಕ್ಷೇಪಿಸುತ್ತಿರಲಿಲ್ಲ . ನಾನು ಎ.ಪಿ.ಎಂ.ಸಿ ಯವರ ಹಾಗೂ ಸ್ಥಳಿಯ ಬಾಳೆಹೊನ್ನೂರಿನ ಜನತೆಯ ಅಭಿಮಾನದ ಅಹ್ವಾನದ ಮೇಲೆ ಇಲ್ಲಿ ಆಗಮಿಸಿರುವೆ ಎಂದು ಉತ್ತರಿಸಿ ಪತ್ರಿಕೆಯಲ್ಲಿ ಹೆಸರಿರದಿದ್ದರೂ ವೇದಿಕೆಯನ್ನೇರಿ ಭಾಷಣ ಮಾಡಿದ ಕಾಂಗ್ರೇಸ್ ಮುಖಂಡನಿಗೆ ಸರ್ವಜ್ಜನ ವಚನವಾದ
ಕರೆಯದೇ ಬರುವವನ
ಬರಿಗಾಲಲ್ಲಿ ನೆಡೆಯುವವನ
ಕರೆದು ಕೆರದಲ್ಲಿ ಹೊಡೆಯಬೇಕೆಂದ ಸರ್ವಜ್ಜ
ಎಂಬ ವಚನವನ್ನು ಹೇಳಿ ಪತ್ರಿಕೆಯಲ್ಲಿ ಹೆಸರಿರದಿದ್ದರೂ ಬಂದು ಅನಗತ್ಯ ಗೊಂದಲ ಮಾಡಲು ಉದ್ದೇಶಿಸಿದ ಕಾಂಗ್ರೇಸ್ ಮುಖಂಡನ ಮುಖದಲ್ಲಿ ಬೆವರಿಳಿಸಿದರು ಜೀವರಾಜ್ ರವರ ಈ ಕೌಂಟರ್ ಅಟ್ಯಾಕ್ ನೀರಿಕ್ಷಿಸದ ಕಾಂಗ್ರೇಸಿಗರ ಸ್ಥಿತಿ ಕೋಲು ಕೊಟ್ಟು ಪೆಟ್ಟು ತಿಂದಂತಾಗಿತ್ತು.
ಭಾಷಣ ಮುಗಿಸಿ ಜೀವರಾಜ್ ಹೋರಟಾಗ ಇಡೀ ಸಭಾಂಗಣವೇ ಅರ್ಧಕರ್ಧ ಖಾಲಿಯಾಗಿ ಜನ ಶಬ್ಬಾಸ್ ಜೀವರಾಜ್ ಎಂದು ಅವರಿಂದೇಯೇ ಹೊರನೆಡೆದರು. ಒಟ್ಟಾರೆ ಕಾಂಗ್ರೇಸಿಗರ ಸ್ಥಿತಿ ಇಂಗು ತಿಂದ ಮಂಗನಂತಾಗಿದ್ದು ವಿಪರ್ಯಾಸ ಮತ್ತು ಸತ್ಯ.

No comments:
Post a Comment