ಕಾಂಗ್ರೇಸ್ ಗೆ ಗುಡ್ ಬೈ ಹೇಳಿದ ಬನ್ನೂರು ಉಪಾಧ್ಯಕ್ಷೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬನ್ನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶಾಮಲ ನಾರಾಯಣ ಗೌಡ ಬಿಜೆಪಿಗೆ ಸೇರ್ಪಡೆ.
ಬಾಳೆಹೊನ್ನೂರು. ಬೆಳಿಗ್ಗೆಯಿಂದ ಪಂಚಾಯ್ತಿ ಚುನಾವಣೆ ಬಿರುಸಿನಿಂದ ಸಾಗಿ ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷರಾಗಿ ಟಿ.ಎಂ.ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ಶಾಮಲನಾರಾಯಣ ಗೌಡ ಆಯ್ಕೆಯಾಗಿ ಪಂಚಾಯ್ತಿ ಎದುರು ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಭ್ರಮ ಕಾಂಗ್ರೇಸ್ ನಲ್ಲಿ ಬಹಳಕಾಲ ಉಳಿಯಲಿಲ್ಲ.
ಶಾಮಲ ಯು ಟರ್ನ್:
ಸಂಭ್ರಮಿಸಿದ ಕೇವಲ 10ನಿಮಿಷದಲ್ಲಿ ಯು ಟರ್ನ್ ಹೊಡೆದ ಶಾಮಲ ನಾರಾಯಣಗೌಡ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳುವುದಾಗಿ ಪ್ರಕಟಿಸುತ್ತಿದ್ದಂತೆ ಬಿಜೆಪಿಯಲ್ಲಿ ಸಂಭ್ರಮ ಮನೆಮಾಡಿತು. ಉಪಾಧ್ಯಕ್ಷೆ ಮತ್ತು ಬಿಜೆಪಿ ಮುಖಂಡರುಗಳು ಬಾಳೆಹೊನ್ನೂರಿನ ಬಿಜೆಪಿ ಕಾರ್ಯಾಲಯದಲ್ಲಿ ಜಮಾವಣೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮಕ್ಕಿ ಉಮೇಶ್, ಕೆ.ಟಿ ವೆಂಕಟೇಶ್, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ಬನ್ನೂರು ಬಿಜೆಪಿ ಮುಖಂಡ ಉರುಗುಡಿಗೆ ರಾಜು ವನಿತ, ಹಾಗೂ ಬನ್ನೂರು ಗ್ರಾಮಪಂಚಾಯ್ತಿ ಬಿಜೆಪಿ ಬೆಂಬಲಿತ ಸದಸ್ಯರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂಧರ್ಭದಲ್ಲಿ ಮಾತನಾಡಿದ ಟಿ.ಎಂ.ಉಮೇಶ್ ಶಾಸಕರ ಅಭಿವೃದ್ಧಿ ಕಾರ್ಯ ಮೆಚ್ಚಿ ಪಕ್ಷಕ್ಕೆ ಆಗಮಿಸಿಸಿರುವ ಶಾಮಲ ನಾರಾಯಣ್ ಇನ್ನೂ ಹೆಚ್ಚಿನ ಜನಮೆಚ್ಚುವ ಕಾರ್ಯ ಮಾಡಲಿ , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರಲಿದ್ದು ಕಾಂಗ್ರೇಸ್ ಒಡೆದ ಮನೆಯಂತಾಗಿರುವ ಸಂಕೇತವಿದು ಎಂದು ನುಡಿದರು.

No comments:
Post a Comment