Wednesday, 31 May 2017

ಕ್ರೀಡೆ ಯುವಕರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ- ಕಲ್ಮಕ್ಕಿ ಉಮೇಶ್


ಬಾಳೆಹೊನ್ನೂರಿನ ಮಾರ್ಕೇಟ್ ನ ಆಟೋಚಾಲಕರ ಸಂಘದ ಕ್ರಿಕೇಟ್  ಎಂ.ಸಿ.ಸಿ ಕ್ರಿಕೇಟ್ ಪಂದ್ಯಾವಳಿಯನ್ನು ಬಿ.ಜೆ.ಪಿ ಮುಖಂಡರು ಹಾಗೂ ವಿ.ಎಸ್.ಎಸ್ ಎನ್ ಅದ್ಯಕ್ಷರಾದ  ಕಲ್ಮಕ್ಕಿ ಉಮೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡಾಪಂದ್ಯಾವಳಿಗಳು ಸಮಾಜದಲ್ಲಿ ಶಾಂತಿ ಸೌಹಾರ್ಧತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆಯಲ್ಲದೇ ಯುವಕರಲ್ಲಿ ಸಂಘಟನಾತ್ಮಕ ಚತುರತೆಯನ್ನು ಹೆಚ್ಚಿಸುತ್ತದೆ ಎಂದು ನುಡಿದರು. ಈ ಸಂಧರ್ಭದಲ್ಲಿ ಕ್ಷೇತ್ರ ಯುವ ಕಾಂಗ್ರೇಸ್ ನ ನೂತನ ಅದ್ಯಕ್ಷ ಸಂತೋಷ್ ಕುಮಾರ್ ಬಿ.ಸಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Monday, 29 May 2017

ಡಾ. ಆರತಿ ಕೃಷ್ಣರಿಗೆ ಮಹಾತ್ಮಗಾಂಧಿ ಸಮ್ಮಾನ್ ಪ್ರಶಸ್ತಿ.



ಶೃಂಗೇರಿ ಕ್ಷೇತ್ರದ ಸಕ್ರೀಯ ರಾಜಕಾರಣಿ, ಸಮಾಜ ಸೇವಕಿ, ಅನಿವಾಸಿ ಭಾರತೀಯ ಸಂಸ್ಥೆಯ ಉಪಾಧ್ಯಕ್ಷರು ಆದಂತ 

ಡಾ. ಆರತಿ ಕೃಷ್ಣರಿಗೆ ಬ್ಯಾಂಕಾಕ್ ನೆಡೆದ ಅಂತರಾಷ್ಟ್ರೀಯ ಆಥಿ೯ಕ ಅಭಿವೃದ್ಧಿಯ ಬಗ್ಗೆ ಭಾರತೀಯರ ಜಾಗತಿಕ ಸಮಾವೇಶದಲ್ಲಿ " ಮಹಾತ್ಮ ಗಾಂಧಿ ಸಮ್ಮಾನ್ " ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅನಿವಾಸಿ ಭಾರತೀಯರ ಸಂಪರ್ಕಕೊಂಡಿಯಾಗಿ ಕಳೆದ 20 ವರ್ಷಗಳಿಂದ ಸೇವೆಸಲ್ಲಿಸಿರುವುದರಿಂದ ಶ್ರೀಮತಿ ಆರತಿಕೃಷ್ಣರವರಿಗೆ ಈ ಪ್ರಶಸ್ತಿ ಸಂದಿದೆ.



ಜೀವರಾಜ್ ಗೆ ರಸ್ತೆಯಲ್ಲಿಯೇ ಮನವಿ ಸಲ್ಲಿಸಿದ ಚೌಡಿಕೆರೆ ಒತ್ತುವರಿದಾರರು.



ಕ್ಷೇತ್ರ ನ್ಯೂಸ್ ಬ್ಲಾಗ್. ಬಾಳೆಹೊನ್ನೂರು.
ಬಾಳೆಹೊನ್ನೂರಿನ ಚೌಡಿಕೆರೆ ಒತ್ತುವರಿಯಾಗಿದ್ದ 5ಎಕರೆ  ಯನ್ನು ತೆರವುಗೊಳಿಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು 7ಕುಟುಂಬದ ಸದಸ್ಯರು ಶಾಸಕ ಜೀವರಾಜ್ ಗೆ ರಸ್ತೆ ಯಲ್ಲಿಯೇ ಮನವಿ ಸಲ್ಲಿಸಿ, ಬಾಳೆಹೊನ್ನೂರಿನಲ್ಲಿ ಬಹಳಷ್ಟು ಸರ್ಕಾರಿಜಾಗ ಒತ್ತುವರಿಯಾಗಿದೆ ಅದೆಲ್ಲದನ್ನು ಬಿಟ್ಟು ಕೇವಲ ನಮ್ಮಗಳ ಮೇಲೆ ಮಾತ್ರಈ ತೆರವು ಕಾರ್ಯಾಚರಣೆ ನೆಡೆಸುತ್ತಿರುವುದು ಸರಿ ಅಲ್ಲ, ನಾವು ಬಡವರಾಗಿದ್ದು ಈ ತೆರವುಕಾರ್ಯಾಚರಣೆ ನಿಲ್ಲಿಸಬೇಕೆಂದು ಮನವಿ ಸಲ್ಲಿಸಿದರು.


ಶಾಸಕ ಜೀವರಾಜ್ ಮನವಿ ಸ್ವೀಕರಿಸಿ ಸಂಬಂದಪಟ್ಟ ಇಲಾಖೆಗೆ ಮಾತನಾಡಿದ್ದು ಸದ್ಯದಮಟ್ಟಿಗೆ ಒತ್ತುವರಿದಾರರು ನಿರಾಳರಾಗಿದ್ದಾರೆ.  ಈ ಸಮಯದಲ್ಲಿ ಬಿ.ಜೆ.ಪಿ ಮುಖಂಡರು ವಿಎಸ್ ಎಸ್ ಎನ್ ಅದ್ಯಕ್ಷರಾದ ಕಲ್ಮಕ್ಕಿ ಉಮೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ,  ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ತಾಲ್ಲೂಕ್  ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇಬ್ರಾಹಿಂ ಶಾಫಿ ಉಪಸ್ಥಿತರಿದ್ದರು.

Friday, 26 May 2017

ಗೋ ಹತ್ಯೆ ನಿಷೇದವನ್ನು ಸ್ವಾಗತಿಸಿ ಶ್ರಿರಾಮ ಸೇನೆ ಬಾಳೆಹೊನ್ನೂರು

ಕೇಂದ್ರಸರ್ಕಾರದ ಗೋ ಹತ್ಯೆ ನಿಷೇದವನ್ನು ಸ್ವಾಗತಿಸಿ ಶ್ರಿರಾಮ ಸೇನೆ ಬಾಳೆಹೊನ್ನೂರು ಘಟಕದ ವತಿಯಿಂದ ಜೆಸಿ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು...ಸಂಕೀರ್ಣ,ದಿವಿನ್,ಮಹೇಶ್ ಶೆಟ್ಟಿ,ಮನೋಜ್ ವಿಜೇತ್,ಸಂಜಯ್,ಚೇತನ್ ಮುಂತಾದ ಕಾರ್ಯಕರ್ತರಿದ್ದರು......


ಗೋಹತ್ಯೆ  ನಿಷೇಧ


ರೈತರಿಗೆ ಮಾತ್ರ ದನಕರು ಮಾರಾಟಕ್ಕೆ ಅನುಮತಿ
ನವದೆಹಲಿ :  ದೇಶಾದ್ಯಂತ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಪ್ರಾಣಿಗಳ ವ್ಯಾಪಾರಕ್ಕೆ ಹೊರಡಿಸಿರುವ ಹೊಸ ಆದೇಶದನ್ವಯ ಗೋವುಗಳನ್ನು ಭೂಮಾಲೀಕರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪ್ರಾಣಿಗಳ ಕಲ್ಯಾಣ ಹೆಸರಿನಲ್ಲಿ ನಿನ್ನೆ ಹೊರಡಿಸಲಾದ ಅಧಿಸೂಚನೆ ಗೋವುಗಳ ರಕ್ಷಣೆಗೆ ಹೊರಡಿಸಲಾದ ಕೇಂದ್ರ ಸರ್ಕಾರದ ಮೊದಲ ಆದೇಶವಾಗಿದೆ.

ಗೋವುಗಳ ವ್ಯಾಪಾರಸ್ಥರು ವಿಶೇಷವಾಗಿ ಮುಸ್ಲಿಂರ ಮೇಲೆ ಹಿಂದೂ ಸಂಘಟನೆಗಳಿಂದ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ.

ಹರಿಯಾಣ ಮೂಲದ ಹಾಲು ಉತ್ಪಾದಕ ಪೆಹ್ಲೂಖಾನ್ ಅವರ ಮೇಲೆ ಗೋ ರಕ್ಷಕರ ಪಡೆ ಏಪ್ರಿಲ್ 1 ರಂದು ರಾಜಸ್ತಾನದಲ್ಲಿ ಹಲ್ಲೆ ನಡೆಸಿದ ನಂತರ 4 ದಿನಗಳಲ್ಲಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದರು.

ಕಳೆದ ಒಂದು ತಿಂಗಳ ಹಿಂದೆ ಅಸ್ಸಾಂನಲ್ಲಿ ಇಬ್ಬರು ಗೋ ವ್ಯಾಪಾರಸ್ಥರು ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂಬ ಸಂಶಯದ ಮೇಲೆ ಅವರಿಗೆ ಹಿಂಸೆ ನೀಡಲಾಗಿತ್ತು. ಈಶಾನ್ಯ ಭಾರತದ ಬಹುತೇಕ ಭಾಗಗಳು ಮತ್ತು ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ.

ಗೋವುಗಳನ್ನು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು, ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕಲ್ಲ ಎಂದು 1960ರ ಪ್ರಾಣಿಗಳ ಹಿಂಸಾಚಾರ ತಡೆ ಕಾಯ್ದೆಯ ವಿಶೇಷ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಜಾನುವಾರುಗಳನ್ನು ಗಮನದಲ್ಲಿಟ್ಟುಕೊಂಡು ಈ ಷರತ್ತನ್ನು ವಿಧಿಸಲಾಗಿತ್ತು.

ತಾನು ಕೃಷಿಕ ಎಂಬುದನ್ನು ಸಾಬೀತುಪಡಿಸುವ ವ್ಯಕ್ತಿಗಳಿಗೆ ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿದೆ.

8 ಪುಟಗಳನ್ನೊಳಗೊಂಡ ನಿಷೇಧ ಆದೇಶದನ್ವಯ ಅಂತರ್ರಾಷ್ಟ್ರೀಯ ಗ‌ಡಿಯಲ್ಲಿ 50 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದನಗಳ ಸಂತೆಗಳಿರಬಾರದು, ರಾಜ್ಯದ ಗಡಿಯ 25 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ಸಂತೆಗಳಿಗೆ ಅವಕಾಶ ನೀಡದಿರಲು ಪರಿಸರ ಸಚಿವಾಲಯ ಕ್ರಮ ಕೈಗೊಂಡಿದೆ. ಯಾವುದೇ ರಾಜ್ಯದಿಂದ ಹೊರಗೆ ಜಾನುವಾರುಗಳನ್ನು ಸಾಗಿಸಬೇಕಾದರೆ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕಾಗಿದೆ.

ಮ್ಯಾಜಿಸ್ಟೇಟರ್‌ರ ನೇತೃತ್ವದಲ್ಲಿ ಜಿಲ್ಲಾ ಪ್ರಾಣಿ ಮಾರುಕಟ್ಟೆ ಸಮಿತಿಗಳ ಒಪ್ಪಿಗೆ ಇಲ್ಲದೆ ಯಾವುದೇ ದನಗಳ ಸಂತೆ ನಡೆಯುವಂತಿಲ್ಲ. ಇಂತಹ ಸಮಿತಿಗಳಲ್ಲಿ ಸರ್ಕಾರ ಅನುಮೋದಿಸಿದ ಪ್ರಾಣಿ ಕಲ್ಯಾಣ ಸಂಘಗಳ ಇಬ್ಬರು ಪ್ರತಿನಿಧಿಗಳು ಇರುತ್ತಾರೆ.

ಭಾರತದ ಬಹುತೇಕ ರಾಜ್ಯಗಳಲ್ಲಿ ವಾರ ವಾರ ದನಗಳ ಸಂತೆಗಳು ನಡೆಯುತ್ತವೆ. ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಾನಳಿಗಳನ್ನು ಮುಂದಿನ ಮೂರು ತಿಂಗಳಲ್ಲಿ ಜಾರಿಗೆ ತರಬೇಕಾಗಿದೆ. ಗೋ ವ್ಯಾಪಾರಸ್ಥರ ಪೈಕಿ ಬಹುತೇಕ ಮಂದಿ ಬಡವರು ಹಾಗೂ ಅನಕ್ಷರಸ್ಥರಾಗಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಇದಕ್ಕಾಗಿ ಕಾಲಾವಕಾಶ ನೀಡಲಾಗಿದೆ
ಬಾಳೆಹೊನ್ನೂರು ಚೌಡಿಕೆರೆ ಒತ್ತುವರಿ ತೆರವು ಕಾರ್ಯಾಚರಣೆ. ಸುಮಾರು 5 ಎಕರೆ ತೆರವುಗೊಳಿಸುತ್ತಿರುವ ಅಧಿಕಾರಿಗಳು.






ಬಾಳೆಹೊನ್ನೂರಿನ ಅತಿ ದೊಡ್ಡಕೆರೆಯಾದ ಇತಿಹಾಸಪ್ರಸಿದ್ಧವಾದ ನರಾಪುರ ರಸ್ತೆಯಲ್ಲಿರುವ ಚೌಡಿಕೆರೆಯ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಚರಣೆಯನ್ನು ನಾಡಕಛೇರಿ, ಪಂಚಾಯ್ತಿ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ಸರಿ ಸುಮಾರು 5ಎಕರೆ ಕೆರೆಒತ್ತುವರಿಯನ್ನು ತೆರವುಗೊಳಿಸುತ್ತಿದ್ದು  ಕಾರ್ಯಾಚರಣೆ ಯಾವುದೇ ಅಡೆತಡೆಇಲ್ಲದೇ ಸಾಗುತ್ತಿದೆ.
ಈ ಒತ್ತುವರಿ ಮಾಡಿರುವ ಪ್ರದೇಶದಲ್ಲಿ ಅಡಕೆ ಬಾಳೆ ತೋಟವಿದ್ದು ಕೆಲ ಮರಗಳಲ್ಲಿ ಪಸಲಿದ್ದು  ಮಾನವೀಯತೆ  ದೃಷ್ಟಿಯಿಂದ ಅದನ್ನು ತೆಗೆದುಕೊಳ್ಳಲು ಒಂದಿಷ್ಟು ದಿನ ಸಮಯನೀಡಲು ಕೋರಿದ್ದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು ಕಾರ್ಯಾಚರಣೆ ಮುಂದುವರಿದಿದೆ.
ಇನ್ನೂ ಕೆರೆ ಒತ್ತುವರಿ ತೆರೆವು ಶುರುವಾದಕೂಡಲೇ ಇನ್ನಿತರೆ ಬಾಳೆಹೊನ್ನೂರಿನಲ್ಲಿ ಅಕ್ರಮವಾಗಿ ಒತ್ತುವರಿ, ಕೆರೆಮುಚ್ಚಿ ಹಾಕಿರುವ ಪ್ರಕರಣಗಳ ಪೈಲ್ ದೂಳುಕೊಡವಿಕೊಂಡು ಏಳುವ ಸಾದ್ಯತೆಯಿಂದ ಅಕ್ರಮ ಕೆರೆ ಒತ್ತುವರಿ ಮಾಡಿರುವವರ ಮುಖದಲ್ಲಿ ಆತಂಕ ಮನೆಮಾಡಿದೆ








Thursday, 25 May 2017

ನ.ರಾ.ಪುರ ಬಿ.ಜೆ.ಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯತ್ವ ಅಭಿಯಾನ.




ಸದೃಡ ಭಾರತ ನಿರ್ಮಾಣಕ್ಕೆ ಮೋದಿಜಿಯವರ ಬ್ರಾತೃತ್ವದ ಸಂದೇಶವನ್ನು ಯುವಜನತೆ ಅರ್ಥಮಾಡಿ ಕೊಂಡು ಮುಂದೆಸಾಗಬೇಕಾಗಿದೆ, ಇಂದು ಭಾರತದ ನವ ನಿರ್ಮಾಣಕ್ಕೆ  ಹಾಗೂ ಶೃಂಗೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದೆ. ಈ ಬೆಂಬಲವನ್ನು ಸಾಭೀತು ಪಡಿಸಲು ಸದಸ್ಯತ್ವ ಅಭಿಯಾನ ಆರಂಭಿಸಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲ್ಲೂಕ್ ಅಧ್ಯಕ್ಷ ಇಬ್ರಾಹಿಂ ಶಾಫಿ ತಿಳಿಸಿದ್ದಾರೆ.
ಅವರು ಕ್ಷೇತ್ರ ನ್ಯೂಸ್ ಬ್ಲಾಗ್ ನೊಂದಿಗೆ ಮಾತನಾಡಿ ಕಾಂಗ್ರೇಸ್ ಹಾಗೂ ಜೆಡಿಎಸ್ ಮುಸಲ್ಮಾನರನ್ನು ಎತ್ತಿಕಟ್ಟಿ ರಾಜಕೀಯ ಮಾಡಿ ಲಾಭಗಳಿಸುವ ಹುನ್ನಾರ ನೆಡೆಸಿದರೆ, ಬಿಜೆಪಿ ಮುಸಲ್ಮಾನರೊಂದಿಗೆ ಸಹೋದರ ಭಾವನೆಯೊಂದಿಗೆ ಸಾಗುತ್ತಿದೆ ಹಾಗಾಗಿ ಜಾತಿ ಜಾತಿ ಸಂಘರ್ಷ ಏರ್ಪಟ್ಟು ಸಮಾಜದಲ್ಲಿ ಅಶಾಂತಿ ಏರ್ಪಡುವ ಬದಲು ಸಹೋದರ ಭಾವನೆಯೊಂದಿಗೆ ಅಲ್ಪಸಂಖ್ಯಾತರನ್ನು ನೆಡೆಸಿಕೊಳ್ಳುವ ಬಿಜೆಪಿ ಎಲ್ಲಾ ಅಲ್ಪಸಂಖ್ಯಾತರ ಆಯ್ಕೆಯಾಗಬೇಕು,  ಈ ಸಂಬಂದ ಅತಿ ಹೆಚ್ಚಿನ ಮುಸಲ್ಮಾನ ಬಂಧುಗಳು ಈ ಬಾರಿ ಜೀವರಾಜ್ ರನ್ನ ಬೆಂಬಲಿಸಿ ಗೆಲ್ಲಿಸಲು ಶ್ರಮವಹಿಸಲಿದ್ದಾರೆಂದು ಶಾಫಿ ನುಡಿದಿದ್ದಾರೆ





Wednesday, 24 May 2017

ಜೀವರಾಜ್ ದೂರುತ್ತಿದ್ದ ಕಾಂಗ್ರೇಸ್ ಈಗ ಶೋಭಕ್ಕನ ದೂರುತ್ತಿದೆ..


ಈ ದರಿದ್ರ ಕಾಂಗ್ರೇಸ್ ಮೆಂಟಾಲಿಟಿಯೇ  ಹೀಗೆ, ಇವು ತಾವು ಮಾಡೋಲ್ಲ ಮಾಡೋರಿಗೂ ಬಿಡೋಲ್ಲ.. ಮೊನ್ನೆ ಮೊನ್ನೆವರೆಗೂ ಜೀವರಾಜ್ ಬೆನ್ನು ಹತ್ತಿದ್ದ ಈ ಕಾಂಗಿಗಳು ಯಾವಾಗ ಜೀವರಾಜ್ ಗಬ್ಬಾನೆ ದೇವರಲ್ಲಿ ಉಹಿಲು ಹಾಕಿ ಆಣೆ ಪ್ರಮಾಣ ಮಾಡಿದರೋ ಇವು ಗಪ್ ಚಿಪ್ ಆಗಿ  ಈಗ ಜೀವರಾಜ್ ಬೆನ್ನುಬಿದ್ದರೆ ನಮ್ಮ ಗಿಮಿಕ್ ವರ್ಕ್ ಔಟ್ ಆಗೋಲ್ಲ ಅಂತ ಶೋಭಕ್ಕನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲು ಶುರು ಹಚ್ಚಿಕೊಂಡಿದ್ದಾವೆ. ಶೋಭಕ್ಕ  ಕ್ಷೇತ್ರಕ್ಕೆ  ದೊಡ್ಡಮಟ್ಟದಲ್ಲಿ  ಮಾತನಾಡಿ ಅನುದಾನ ತರುವ ತಾಕತ್ ಇರುವ ಧೀಮಂತ ಮಹಿಳೆ  ಎಂಬುದನ್ನು ಅರಿತಿರುವ ಕಾಂಗಿಗಳು ಹೇಗಾದರೂ ಮಾಡಿ ಚಿಕ್ಕಮಗಳೂರು ಜಿಲೆಯಲ್ಲಿ ಅವರ ಹೆಸರು ಕೆಡಿಸಬೇಕು ಎಂದು ಮಂಗಳೂರು ಮೂಲದ ಪಾಕ್ ನಂಟಿರುವ ಆನ್ ಲೈನ್  ಸುದ್ದಿ ಮಾಡುವ ಬ್ಲಾಗ್ ಒಂದಕ್ಕೆ ಕಮಿಟ್ ಆಗಿದ್ದಾರೆನ್ನುವ ಸ್ಪೋಟಕ ಸುದ್ದಿ ಹೊರ ಬಂದಿದೆ. ಆದರೆ ಚಿಕ್ಕಮಗಳೂರು ಕ್ಷೇತ್ರದ ಮತದಾರ ಕಾಂಗಿಗಳ ಮಂಗಾಟವನ್ನು ಎಷ್ಟರಮಟ್ಟಿಗೆ ಸಹಿಸುತ್ತಾನೆ ಎಂಬುದೇ ಮುಂದಿರುವ ಪ್ರಶ್ನೆ.

ದನದ ಮಾಂಸ ತಿನ್ನುವ  ಶೇ90  ಜನರಿಗೆ ಕ್ಯಾನ್ಸರ್ ಗ್ಯಾರೆಂಟಿ...

ಇದನ್ನು ಓದಿದಕೂಡಲೇ ಪೇಕ್ ನ್ಯೂಸ್ ಎಂದು ಜರಿಯಬೇಡಿ.. ಕಾಸರಗೋಡುವಿನ ಖಾಸಗಿ ಸಂಸ್ಥೆಯೊಂದು ಕೇರಳ ಹಾಗೂ ಕಾಸರಗೋಡು, ಮಂಗಳೂರಿನ ಸರಿಸುಮಾರು 15000  ಜನರನ್ನು ಪರಿಕ್ಷಿಸಿ ಈ ವರದಿಯನ್ನು  ಸಿದ್ದಪಡಿಸಿದೆ.  ಈ ವರದಿಯಂತೆ  ಇತ್ತೀಚಿಗೆ ದನಗಳು ಪ್ಲಾಸ್ಟಿಕ್ ಹಾಗೂ ರದ್ದಿಯನ್ನು ನ್ಯೂಸ್ ಪ್ರಿಂಟ್ ಗಳನ್ನು ಅತಿ ಹೆಚ್ಚು ತಿನ್ನುತಿದ್ದು ಇದರಿಂದಾಗಿ ದನಗಳ ಆಯಸ್ಸು ಕಡಿಮೆಯಾಗುವುದಲ್ಲದೇ ಅವುಸಹ ಅಕಾಲಿಕ ಸಾವಿಗೆ ತುತ್ತಾಗುತ್ತಿದ್ದು, ಇದನ್ನು ಸೇವಿಸುವವರು ಸಹ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆಂದು ಮದ್ಯಂತರ ವರದಿಯಲ್ಲಿ ದೃಡಪಟ್ಟಿದೆ.







ಇನ್ನೂ ಜಾನುವಾರುಗಳು ಈ ಹಿಂದಿನಂತೆ ಹಸಿರು ಹುಲ್ಲು ತಿನ್ನುವುದು ಕಡಿಮೆಯಾಗಿ ಕೆಮಿಕಲ್ ಯುಕ್ತ ಪೇಪರ್ ಅನ್ನು ಜನರು ಬಳಸಿ ಬಿಟ್ಟ ತಿಂಡಿ ಪದಾರ್ಥದ ಕವರ್ ಗಳನ್ನು ತಿನ್ನುತಿದ್ದು ಈ ಕವರ್ ಗಳು ಹೊಟ್ಟೆಯಲ್ಲಿ ಕರಗದೇ ಅಲ್ಲಿಯೇ ಸುರುಳಿಸುತ್ತಿಕೊಂಡು ಇರುವುದು ಅತಿ ವಿಷಕಾರಕವಾಗಿದೆ ಎಂಬುದು ದೃಡ ಸತ್ಯ.

Tuesday, 23 May 2017

ಯಡಿಯೂರಪ್ಪನವರು ಊಟ ಮಾಡಿದ ಮನೆಯ ಯಜಮಾನರು ಹೀಗೆ ಹೇಳಿದರು




ನಮ್ಮ ಮನೇಲಿ ಹೋಟೆಲ್ ಇಂದ ಬೇಕಾದ್ರೂ ಊಟ ತಂದ್ ಹಾಕ್ತೀವಿ ಇಲ್ಲ ನಮ್ಮನೇಲಿ ಬೇಕಾದ್ರು ರೆಡಿ ಮಾಡಿ ಹಾಕ್ತೀವಿ ಕೇಳೋಕೆ ನೀವ್ಯಾರು
ಯಡಿಯೂರಪ್ಪನವರು ಊಟ ಮಾಡಿದ ಮನೆಯ ಯಜಮಾನರು ಹೀಗೆ ಹೇಳಿದರು.

Monday, 22 May 2017

ಶೃಂಗೇರಿ ಕಾಂಗ್ರೇಸ್  ಟಿಕೇಟ್ ಗಾಗಿ ಮುಸುಕಿನ ಗುದ್ದಾಟ..
ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಎದುರು ಮಂಡಿಯೂರಿ ಮಲಗಿರುವ ಕಾಂಗ್ರೇಸ್ ಇನ್ನೂ 20 ವರ್ಷ ಆದರೂ ಎದ್ದೇಳುವ ಲಕ್ಷ್ಣಗಳು ಕಾಣುತ್ತಿಲ್ಲ... ನಾ ಕೊಡೆ ನೀ ಬಿಡೆ ಎನ್ನುವಂತೆ ಆಟವಾಡುತ್ತಿರುವ ನಾಯಕರು ಎದುರುಗಡೆ ಮುಗುಳ್ನಗುತ್ತಾ ಇದ್ದರೂ ಒಳಗೊಳಗೆ ಮುಸುಕಿನ ಗುದ್ದಾಟ ನೆಡೆಸುತ್ತಿರುವುದು ಎಲ್ಲರೂ ಅರಿತಿರುವ ವಿಚಾರ.. ಇನ್ನೂ ಕೆಲ ಪ್ರಂಟ್ ಲೈನ್ ಮುಖಂಡರು ಬಿಜೆಪಿ ಯೊಂದಿಗೆ ಸಂಪರ್ಕದಲ್ಲಿರುವುದೂ ಸಹ ಗುಟ್ಟಾಗಿದ್ದರೂ ಸ್ವತಃ ಜಿಲ್ಲಾಧ್ಯಕ್ಷರೂ ಶಾಸಕರೂ ಆದಂತ ಜೀವರಾಜ್ ರವರು ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಏನೊಂದು ಮಾಡದೇ ಪಕ್ಷವನ್ನು ಪ್ರಭಲವಾಗಿ ಸಂಘಟಿಸುತ್ತಿರುವುದು ವಿರೋದಿಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ.
ಇನ್ನೂ ಕಾಂಗ್ರೇಸ್ ನಲ್ಲಿ ಗೆಲ್ಲುವ ಹುಮ್ಮಸ್ಸು ಇಲ್ಲದಿದ್ದರೂ   ಟಿಕೇಟ್ ಗೆ ಮಾತ್ರ ಲಾಭಿ ಶುರುವಾಗಿ ಬಿಟ್ಟಿದೆ.
ಒಬ್ಬರೂ ಡಿ.ಕೆ.ಶಿ ಬಣ... ಇನ್ನೋಬ್ಬರೂ ಮಹಿಳಾ ಬಣ... ಮತ್ತೊಬ್ಬರೂ ಸಿದ್ದರಾಮಯ್ಯನವರ ಕ್ಯಾಂಡಿಡೇಟ್.. ಇನ್ನೊಬ್ಬರೂ ಪರಮೇಶ್ವರ್ ಕ್ಯಾಂಡಿಡೇಟ್ ಇನ್ನೂ ಇಬ್ಬರೂ ಈ ಮೇಲಿನ ಎಲ್ಲರ ಒಲವು ಗಳಿಸುವ ಕ್ಯಾಂಡಿಡೇಟ್.... ಒಟ್ಟಾರೆ ಬಿಜೆಪಿ ಎದುರು ಪ್ರಭಲ ಎನ್ನುವಂತ ಕ್ಯಾಂಡಿಡೇಟ್ ಸಿಗದೇ ಪರಿತಪಿಸುತ್ತಿರುವ ಕಾಂಗ್ರೇಸ್ ನ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲು ಸಜ್ಜಾಗಿದ್ದಾರೆ ಜೀವರಾಜ್..

Saturday, 20 May 2017

ಕಾಮಿ ಸ್ವಾಮಿಯ ಶಿಶ್ನ ಕತ್ತರಿಸಿದ ತರುಣಿ..



ತಮಿಳುನಾಡಿನ ವಿಕೃತ ಕಾಮಿ ಸ್ವಾಮಿಯೊಬ್ಬ ಬಲವಂತವಾಗಿ ಕಳೆದ 5ವರ್ಷಗಳಿಂದ 23 ರ ಹರೆಯದ ತರುಣಿಯನ್ನು ಬಲವಂತವಾಗಿ ತನ್ನ ಕಾಮ ತೃಷೆಗೆ ಬಳಸಿಕೊಳ್ಳುತ್ತಿದ್ದ.ಇದರಿಂದ ಮನನೊಂದ ಯುವತಿ ಆತನ ಶಿಶ್ನವನ್ನೆ ತುಂಡರಿಸಿ ತನ್ನ ಸೇಡನ್ನು ತೀರಿಸಿಕೊಂಡಿದ್ದಾಳೆ.
ಕಾಮತೃಷೆಯ ಪಾಪ ತುಂಡರಿಸಿ ಪರಿಹಾರ.
ಕಾಂಗ್ರೇಸ್ ಆಮ್ ಆದ್ಮಿ ವಿರುದ್ದ ಚುನಾವಣಾ ಆಯೋಗ ಬಹಿರಂಗ ಸವಾಲ್..

ಕಳೆದ ಚುನಾವಣೆಯಲ್ಲಿ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ ಕಾಂಗ್ರೇಸ್  ಮತ್ತು ಆಮ್ ಆದ್ಮಿ  ಹಾಗೂ ಇನ್ನಿತರ ಬಿಜೆಪಿಯನ್ನು ವಿರೋದಿಸುವ ಪಕ್ಷಗಳು  ಸೋಲಿಗೆ ಮತಯಂತ್ರ ಕಾರಣ ಎಂದು ಅಬ್ಬಿರಿದು ಬೊಬ್ಬಿರಿದವು..
ಇಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿ ಜೂನ್ 3 ರಂದು ಮತಯಂತ್ರವನ್ನು ಹ್ಯಾಕ್ ಮಾಡಿ ತೋರಿಸುವಂತೆ ಬಹಿರಂಗ ಸವಾಲು ಎಸೆದು ಭಾರತದ ಚುನಾವಣ ಆಯೋಗದ ಮೇಲೆ ಗೂಭೆ ಕೂರಿಸಿದ್ದ  ಗಂಜಿ ಪಕ್ಷಗಳ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದೆ.






Friday, 19 May 2017

 ಬಿಜೆಪಿ ಜನಸ೦ಪರ್ಕ ಯಾತ್ರೆ

ಮಾಜಿ ಮುಖ್ಯಮ೦ತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿಯ ಜನಸ೦ಪರ್ಕ ಅಭಿಯಾನ ಚಿತ್ರದುರ್ಗ ಜಿಲ್ಲೆಯಲ್ಲಿ ಸ೦ಚಲನ ಮೂಡಿಸಿದೆ. ಪಕ್ಷದ ಸಹಸ್ರಾರು ಕಾರ್ಯಕರ್ತರು ಮಾನ್ಯ ಅಧ್ಯಕ್ಷರು ಮತ್ತು ಇತರ ನಾಯಕರೊ೦ದಿಗೆ ಈ ಅಭಿಯಾನದಲ್ಲಿ ಅತ್ಯ೦ತ ಉತ್ಸಾಹದಿ೦ದ ಭಾಗವಹಿಸಿದ್ದಾರೆ.

ಅಭಿಯಾನದ ಬೆಳಗಿನ ಕಾರ್ಯಕ್ರಮಗಳ ನ೦ತರ ಯಡಿಯೂರಪ್ಪನವರು ವದ್ಧಿಕೆರೆ ತಲುಪಿದರು. ತೀವ್ರ ಬರಗಾಲದಿ೦ದಾಗಿ ಒಣಗಿದ ನೆಲ, ಬತ್ತಿದ ಕೆರೆ, ಸ್ಥಾಪಿಸಲಾಗಿರುವ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿ, ರೈತ ಮುಖ೦ಡರೊ೦ದಿಗೆ ಸಮಾಲೋಚನೆಗಳನ್ನು ನಡೆಸಿದರು. ನಾಡಿನಲ್ಲಿ ಬೇಗನೆ ಹಸಿರು ಮೂಡಲಿ ಎನ್ನುವುದಕ್ಕೆ ಸಾ೦ಕೇತಿಕವಾಗಿ ಸಸಿ ನೆಡಲಾಯಿತು. ತದನ೦ತರ ಚಿತ್ರದುರ್ಗ ನಗರದಲ್ಲಿ ಮಾನ್ಯ ಯಡಿಯೂರಪ್ಪನವರು ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಿದರು. ಈ ಸ೦ದರ್ಭದಲ್ಲಿ ಮುಸ್ಲಿ೦ ಸಮುದಾಯದ ಅನೇಕ ಪ್ರಮುಖರು ಬಿಜೆಪಿಗೆ ಸೇರ್ಪಡೆಗೊ೦ಡರು. ಇತ್ತೀಚೆಗೆ ಹೊಸದುರ್ಗದಲ್ಲಿ ಮಳೆಹಾನಿಯಿ೦ದ ಸೂರನ್ನು ಕಳೆದುಕೊ೦ಡ ಎರಡು ಕುಟು೦ಬಗಳಿಗೆ ಜಿಲ್ಲಾ ಬಿಜೆಪಿ ವತಿಯಿ೦ದ ತಲಾ 25 ಸಾವಿರ ರೂಪಾಯಿಗಳ ನೆರವನ್ನು ಸನ್ಮಾನ್ಯ ಯಡಿಯೂರಪ್ಪನವರು ನೀಡಿದರು.
News sringeri leading by JAgadishchandra.B
ಮದ್ಯಪಾನ ಮಾಡುತ್ತೀರಾ..?

*Almost ಒಂದು ಲಕ್ಷ ರೂ ಬೆಲೆಯ ಬೈಕ್* ಇರುವವರಲ್ಲಿ ಒಂದು ಪ್ರಶ್ನೆ ಬೈಕಿಗೆ ಯಾವ ಇಂಧನ ಹಾಕುತ್ತೀರಾ ??
*ಪೆಟ್ರೋಲ್..!* ಅಂತ ಉತ್ತರ ಬರುತ್ತದೆ.

ನೀವು ಯಾಕೆ *ಸೀಮೆ ಎಣ್ಣೆ*ಹಾಕಬಾರದು…ಎಂದು ಕೇಳಿದರೆ
ಅವನು ಹೇಳುತ್ತಾನೆ *ಎಂಜಿನ್ ಹಾಳಾಗುತ್ತದೆ…* ಮತ್ತೆ ಒಂದು ಪ್ರಶ್ನೆ…!ನೀವು *ಮದ್ಯಪಾನ ಮಾಡುತ್ತೀರಾ..?*ಉತ್ತರ *ಮಾಡುತ್ತೀನಿ..!*ಅದು ಆರೋಗ್ಯಕ್ಕೆ ಹಾನಿಕರವಲ್ಲವೇ…? ಹೇ ಅದು *ತೊಂದರೆಯಿಲ್ಲ*ಅದು ವಾರಕ್ಕೆ ಒಂದು ಸಲ ಮಾತ್ರ ಹಾಕೋದು ಹಾಗಾದರೆ ತಿಂಗಳಿಗೆ ಒಂದು ಸಲ ನಿಮ್ಮ *ಬೈಕಿಗೆ ಸೀಮೆ ಎಣ್ಣೆ ಹಾಕಬಾರದೇ…??*ಎಂಬ ಪ್ರಶ್ನೆಗೆ ಅವನಲ್ಲಿ ಉತ್ತರ ಇಲ್ಲ
*_ಒಂದು ಲಕ್ಷ ರೂ ಬೆಲೆಯ ಬೈಕ್ ಹಾಳಾಗುತ್ತದೆ ಅಂತ ಹೆದರಿಕೆ ಇರುವ ಈ ಮನುಷ್ಯರಿಗೆ ತನ್ನ ಜೀವಕ್ಕೆ ಹಾನಿಕರ ಅಂತ ಗೊತ್ತಿದ್ದು ಮದ್ಯಪಾನ ಮಾಡುತ್ತಾರೆ ಅಲ್ಲವೇ_*



*_ಚಿಂತಿಸಿ ನೋಡಿ ಮದ್ಯಪಾQ&Aನ,ತಂಬಾಕು,ಲಹರಿ ಪದಾರ್ಥ ಸೇವಿಸಿ ಜೀವನ ಹಾಳು ಮಾಡಬೇಡಿ_*

 ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೀವರಾಜ್ ಗೆ ವಿಜಯಮಾಲೆ.ನ್ಯೂಸ್ ಬ್ಲಾಗ್ ಸಮಿಕ್ಷೆ...

ಸರಳ, ಸಜ್ಜನಿಕೆಯ ಜೀವರಾಜ್ ರವರು  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಮತಗಳ ಅಂತರದಿಂದ  ಶೃಂಗೇರಿ ಕ್ಷೇತ್ರದಲ್ಲಿ ಜಯಶಾಲಿಯಾಗುತ್ತಾರೆಂದು ಜನತೆ ಅಭಿಪ್ರಾಯ ಪಟ್ಟಿದ್ದಾರೆ..


ಈ ಕ್ಷೇತ್ರ 15 ವರ್ಷಗಳ ಹಿಂದೆ ಕಾಂಗ್ರೇಸ್ ನ  ದುರಾಡಳಿತದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ನಂತರ ಜೀವರಾಜ್ ಕಾಂಗ್ರೇಸ್ ಕಪಿಮುಷ್ಠಿಯಿಂದ ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿ ಶೃಂಗೇರಿ ಕ್ಷೇತ್ರದ ನವನಿರ್ಮಾಣ ಕತೃ ಎಂದು ಜನತೆಯಿಂದ ಗುರುತಿಸಿ ಕೊಂಡಿದ್ದು   ಮೊನ್ನೆ ಮೊನ್ನೆ ವಿಧಾನ ಸಭೆಯಲ್ಲಿ ಕಸ್ತೂರಿ ರಂಗನ್ ವಿಚಾರವಾಗಿ ಅವರು ಮಾಡಿದ ಭಾಷಣ ಅವರ ರಾಜಕೀಯ ಪ್ರಭುದ್ಧತೆ ಹಾಗೂ ಕ್ಷೇತ್ರದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಜನತೆ ಬಹುವಾಗಿ ಮೆಚ್ಚಿಕೊಂಡಿದ್ದು.. ಈ ಕ್ಷೇತ್ರದ ಅಭಿವೃದ್ಧಿಗೆ ಜೀವರಾಜ್ ರಂತ ಪ್ರಭುದ್ಧ ಹಾಗೂ ಪ್ರಾಮಾಣಿಕ ರಾಜಕಾರಣಿಯಿಂದ ಮಾತ್ರ ಸಾದ್ಯ  ಎಂದು ಜನತೆ ಅಭಿಪ್ರಾಯ ಪಟ್ಟಿದ್ದಾರೆ.


ಇನ್ನೂ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ಬಿ.ಜೆ.ಪಿ ಸೇರ್ಪಡೆಯೂ ಜೀವರಾಜ್ ಗೆ ಅತಿ ಹೆಚ್ಚಿನ ಬಲ ತಂದಿದೆ ಎಂದು ಜನತೆ ಪ್ರತಿಕ್ರೀಯಿಸಿದ್ದಾರೆ.


ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಈ ಬಾರಿ ಜೆಡಿಎಸ್ ಎನ್ನುವುದು ಗಮನಿಸ ಬೇಕಾದ ಮುಖ್ಯ ಅಂಶ... ಕಾಂಗ್ರೇಸ್ ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕೆಂದು ಹೆಚ್ಚಿನವರ ಅನಿಸಿಕೆಯಾಗಿದೆ...
ಯಶಸ್ವಿ ಮೋದಿ ಸರ್ಕಾರ.. ಭಾಸ್ಕರ್ ವೆನಿಲ್ಲಾ

ಮೋದಿಜಿಯವರ 3 ವರ್ಷದ ಆಡಳಿತ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತಹದು ಎಂದು ನ.ರಾ.ಪುರ ತಾಲ್ಲೂಕ್ ಬಿ.ಜೆ.ಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ನುಡಿದಿದ್ದಾರೆ.

ಅವರು ಕೇಂದ್ರದ ಬಿ.ಜೆ.ಪಿ ಸರ್ಕಾರಕ್ಕೆ 3 ವರ್ಷ ತುಂಬಿದ ಸಂಧರ್ಭದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಶೃಂಗೇರಿ ಕ್ಷೇತ್ರ ನ್ಯೂಸ್ ಬ್ಲಾಗ್ ನೊಂದಿಗೆ ಮಾತನಾಡುತ್ತ  ಕಾಂಗ್ರೇಸ್ ಈ ದೇಶಕ್ಕೆ ಅಂಟಿದ ಶಾಪ. ಈ ಶಾಪ ವಿಮೋಚನೆಗೆ ಮೋದಿಜಿ ದಿನದ 18 ಗಂಟೆಗಳ ಕಾಲ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಮೋದಿಜಿಯವರ ಎಲ್ಲಾ ಯೋಜನೆಗಳು ಭಾರತಕ್ಕೆ ದೀರ್ಘಕಾಲದ ಲಾಭ ತಂದುಕೊಡುವಂತಹದ್ದು..ಎಂದು ನುಡಿದರು.
ಇನ್ನೂ ರಾಹುಲ್ ಗಾಂದಿ ಬಗ್ಗೆ ಪ್ರಶ್ನಿಸಿದಾಗ ನಕ್ಕು. ಸದ್ಯ ಭಾರತದ ನಂ ಒನ್ ಜೋಕ್ ಗಳು ಅವರ ಹೆಸರಲ್ಲೇ ಇದ್ದು ಇನ್ನೂ ಮುಂದೆಯೂ ಅವರು ಜನರಿಗೆ ಮನರಂಜನೆಯನ್ನು ನೀಡಲಿ ಎಂದು ಹಾಸ್ಯ ಮಿಶ್ರಿತ ದಾಟಿಯಲ್ಲಿ ಲೇವಡಿಮಾಡಿದರು.


ಬಿಎಸ್ ವೈ ಮುಂದಿನ ಮುಖ್ಯಮಂತ್ರಿ....ಅಮಿತ್ ಶಾ



ಬಿಎಸ್ ವೈ ಮುಂದಿನ ಮುಖ್ಯಮಂತ್ರಿ ಯಾಗಿ ಹೊರಹೊಮ್ಮುತ್ತಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನುಡಿದಿದ್ದಾರೆ.


ಪಕ್ಷದ ಒಳ ಜಗಳದಿಂದ ಪಕ್ಷಕ್ಕೆ ಹಾನಿಯಾಗಿರುವುದು ನಿಜವಾದರೂ ಮುಂದಿನ ಚುನಾವಣೆಯಲ್ಲಿ ಈ ಭ್ರಷ್ಟ ಕಾಂಗ್ರೇಸನ್ನು ಕಿತ್ತೊಗೆಯಲು ಹಾಗೂ ಮೋದಿಜಿಯವರ ಕ್ರಾಂತಿಕಾರಕ ಬದಲಾವಣೆಯನ್ನು ಬೆಂಬಲಿಸುವ ಉದ್ದೇಶದಿಂದ ಜನತೆ ಬಿಜೆಪಿ ಯನ್ನು  ಬೆಂಬಲಿಸುತ್ತಾರೆ ಎಂದು ನುಡಿದರು.
ಇನ್ನೂ ಮುಂದೆ ಪಕ್ಷದಲ್ಲಿ ಆಂತರಿಕ ಜಗಳ ಕಂಡುಬಂದರೆ ಮುಲಾಜಿಲ್ಲದೇ ಶಿಸ್ತುಕ್ರಮ ಅನಿವಾರ್ಯ ಎಂದು ಕರ್ನಾಟಕ ಬಿಜೆಪಿಗರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ
.
#ಯೋಗಿ 2024ರಲ್ಲಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಆಗದು



ಎವೆರ್ ಗ್ರೀನ್ ನರ್ಸರಿಯಲ್ಲಿ...ಅತ್ಯುತ್ತಮ ದರ್ಜೆಯ ಕಾಳುಮೆಣಸಿನ ಗಿಡಗಳು ಲಭ್ಯ..








ಶೃಂಗೇರಿ ಕ್ಷೇತ್ರ ನ್ಯೂಸ್ ಮೇ 19.   ರಾಜ್ಯದ ಪ್ರತಿಷ್ಟಿತ ನರ್ಸರಿಗಳಲ್ಲಿ ಒಂದಾದ ಬಾಳೆಹೊನ್ನೂರಿನ ಎವೆರ್ ಗ್ರೀನ್ ನರ್ಸರಿ ಯಲ್ಲಿ ಅತ್ಯುತ್ತಮ ದರ್ಜೆಯ ಕಾಳು ಮೆಣಸಿನ ಗಿಡಗಳು ಕೃಷಿಗೆ ಸಿದ್ದವಾಗಿದ್ದು  ಸ್ಥಳಿಯ ಹಾಗೂ ನೆರೆ ರಾಜ್ಯದ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಆಸಕ್ತಿ ತೋರುತಿದ್ದು.. ಆಸಕ್ತ ರೈತರು ಮಾಲಿಕರಾದ ವೆನಿಲ್ಲಾ ಭಾಸ್ಕರ್ ರವರನ್ನು ಸಂಪರ್ಕಿಸಬಹುದಾಗಿದೆ. ದಿನಂಪ್ರತಿ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ರೈತರು ನರ್ಸರಿಗೆ ಖುದ್ದಾಗಿ ಬೇಟಿ ನೀಡಿ ತಮ್ಮ ಆಯ್ಕೆಯ ಗಿಡಗಳನ್ನು ವೀಕ್ಷಿಸಬಹುದಾಗಿದೆ . ಇದಲ್ಲದೇ..ಅಡಕೆ, ತೆಂಗು, ಜಾಯಿಕಾಯಿ, ಲವಂಗ ಏಲಕ್ಕಿ ಇನ್ನಿತರ ತೋಟಗಾರಿಕ ಗಿಡಗಳು ರೈತರ ಆದ್ಯತೆಗೆ ತಕ್ಕಂತೆ ಪೂರೈಸಲಾಗುವುದಲ್ಲದೇ ಮುಘಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ ಎಂದು  ನರ್ಸರಿಯ ಪ್ರಕಟಣೆ ತಿಳಿಸಿದೆ.

ಸಂಪರ್ಕ ವಿಳಾಸ
ವೆನಿಲ್ಲಾ ಭಾಸ್ಕರ್.
ಎವೆರ್ ಗ್ರೀನ್ ನರ್ಸರಿ ಪಾರಂ
ಕೊಪ್ಪ ರಸ್ತೆ. ಬಾಳೆಹೊನ್ನೂರು
ನ.ರಾ.ಪುರ ತಾ. ಚಿಕ್ಕಮಗಳೂರು ಜಿಲ್ಲೆ
ಪೋನ್.9448025847

Thursday, 18 May 2017

ವ್ಯಕ್ತಿಗಿಂತ ಸಂಘಟನೆ, ಸಂಘಟನೆಯ  ಜವಾಬ್ದಾರಿ ದೊಡ್ಡದು...ಆರ್.ಡಿ ಮಹೇಂದ್ರ 


ಶೃಂಗೇರಿ ಕ್ಷೇತ್ರ ನ್ಯೂಸ್ : ಮೇ 19.  ವ್ಯಕ್ತಿಗಿಂತ ಸಂಘಟನೆ, ಸಂಘಟನೆಯ ಜವಾಬ್ದಾರಿ ದೊಡ್ಡದು.. ಹಾಗಾಗಿ ಕೆಲವರು ಸಂಘಟನೆ ಬಿಟ್ಟು ಬೇರೆ ಪಕ್ಷ ಸೇರಿದರೆ ಅದರಿಂದ ಸಂಘಟನೆಗೇನು ನಷ್ಟವಾಗದು ಎಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಉಪಾಧ್ಯಕ್ಷ ಆರ್.ಡಿ ಮಹೇಂದ್ರ ಪ್ರತಿಕ್ರೀಯಿಸಿದ್ದಾರೆ.



ಕೆಲ ಕಾರ್ಯಕರ್ತರು ಕಾಂಗ್ರೇಸ್ ಸೇರಿದ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರೀಯಿಸಿದ ಅವರು  ಸಂಘಟನೆ ಜಿಲ್ಲೆಯಲ್ಲಿ ಸದೃಡವಾಗಿದೆ. ಇಲ್ಲಿ ಯಾರೂ ದೊಡ್ಡವರಲ್ಲ ಯಾರು ಸಣ್ಣವರಲ್ಲ..ಸಮಾಜಕ್ಕಾಗಿ ಹಗಲಿರುಳು  ಶ್ರಮಿಸುತ್ತಿರುವ ಬಹುದೊಡ್ಡ ಹಿಂದೂ ಸಂಘಟನೆಯಲ್ಲಿ ದುಡಿಯಲಾಗದವರು ಇನ್ನೂ ಮುಳುಗುತ್ತಿರುವ ಹಡಗಾದ ಕಾಂಗ್ರೇಸಿಗೆ ಏನು ದುಡಿಯುವರು ?. ಹಾಗಾಗಿ ಸಮುದ್ರದಂತ ವಿಶ್ವ ಹಿಂದೂ ಬಜರಂಗದಳದಲ್ಲಿ ಇಂತಹ ಒಂದು ಬೊಗಸೆ ನೀರು ಖಾಲಿಯಾದರೆ ಸಮುದ್ರಕ್ಕೇನು ತೊಂದರೆಇಲ್ಲ ಎಂದು ಮಾರ್ಮಿಕವಾಗಿ ನುಡಿದರು.