ಬಿಜೆಪಿ ಜನಸ೦ಪರ್ಕ ಯಾತ್ರೆ
ಮಾಜಿ ಮುಖ್ಯಮ೦ತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿಯ ಜನಸ೦ಪರ್ಕ ಅಭಿಯಾನ ಚಿತ್ರದುರ್ಗ ಜಿಲ್ಲೆಯಲ್ಲಿ ಸ೦ಚಲನ ಮೂಡಿಸಿದೆ. ಪಕ್ಷದ ಸಹಸ್ರಾರು ಕಾರ್ಯಕರ್ತರು ಮಾನ್ಯ ಅಧ್ಯಕ್ಷರು ಮತ್ತು ಇತರ ನಾಯಕರೊ೦ದಿಗೆ ಈ ಅಭಿಯಾನದಲ್ಲಿ ಅತ್ಯ೦ತ ಉತ್ಸಾಹದಿ೦ದ ಭಾಗವಹಿಸಿದ್ದಾರೆ.
ಅಭಿಯಾನದ ಬೆಳಗಿನ ಕಾರ್ಯಕ್ರಮಗಳ ನ೦ತರ ಯಡಿಯೂರಪ್ಪನವರು ವದ್ಧಿಕೆರೆ ತಲುಪಿದರು. ತೀವ್ರ ಬರಗಾಲದಿ೦ದಾಗಿ ಒಣಗಿದ ನೆಲ, ಬತ್ತಿದ ಕೆರೆ, ಸ್ಥಾಪಿಸಲಾಗಿರುವ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿ, ರೈತ ಮುಖ೦ಡರೊ೦ದಿಗೆ ಸಮಾಲೋಚನೆಗಳನ್ನು ನಡೆಸಿದರು. ನಾಡಿನಲ್ಲಿ ಬೇಗನೆ ಹಸಿರು ಮೂಡಲಿ ಎನ್ನುವುದಕ್ಕೆ ಸಾ೦ಕೇತಿಕವಾಗಿ ಸಸಿ ನೆಡಲಾಯಿತು. ತದನ೦ತರ ಚಿತ್ರದುರ್ಗ ನಗರದಲ್ಲಿ ಮಾನ್ಯ ಯಡಿಯೂರಪ್ಪನವರು ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಿದರು. ಈ ಸ೦ದರ್ಭದಲ್ಲಿ ಮುಸ್ಲಿ೦ ಸಮುದಾಯದ ಅನೇಕ ಪ್ರಮುಖರು ಬಿಜೆಪಿಗೆ ಸೇರ್ಪಡೆಗೊ೦ಡರು. ಇತ್ತೀಚೆಗೆ ಹೊಸದುರ್ಗದಲ್ಲಿ ಮಳೆಹಾನಿಯಿ೦ದ ಸೂರನ್ನು ಕಳೆದುಕೊ೦ಡ ಎರಡು ಕುಟು೦ಬಗಳಿಗೆ ಜಿಲ್ಲಾ ಬಿಜೆಪಿ ವತಿಯಿ೦ದ ತಲಾ 25 ಸಾವಿರ ರೂಪಾಯಿಗಳ ನೆರವನ್ನು ಸನ್ಮಾನ್ಯ ಯಡಿಯೂರಪ್ಪನವರು ನೀಡಿದರು.
News sringeri leading by JAgadishchandra.B

No comments:
Post a Comment