Monday, 22 May 2017

ಶೃಂಗೇರಿ ಕಾಂಗ್ರೇಸ್  ಟಿಕೇಟ್ ಗಾಗಿ ಮುಸುಕಿನ ಗುದ್ದಾಟ..
ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಎದುರು ಮಂಡಿಯೂರಿ ಮಲಗಿರುವ ಕಾಂಗ್ರೇಸ್ ಇನ್ನೂ 20 ವರ್ಷ ಆದರೂ ಎದ್ದೇಳುವ ಲಕ್ಷ್ಣಗಳು ಕಾಣುತ್ತಿಲ್ಲ... ನಾ ಕೊಡೆ ನೀ ಬಿಡೆ ಎನ್ನುವಂತೆ ಆಟವಾಡುತ್ತಿರುವ ನಾಯಕರು ಎದುರುಗಡೆ ಮುಗುಳ್ನಗುತ್ತಾ ಇದ್ದರೂ ಒಳಗೊಳಗೆ ಮುಸುಕಿನ ಗುದ್ದಾಟ ನೆಡೆಸುತ್ತಿರುವುದು ಎಲ್ಲರೂ ಅರಿತಿರುವ ವಿಚಾರ.. ಇನ್ನೂ ಕೆಲ ಪ್ರಂಟ್ ಲೈನ್ ಮುಖಂಡರು ಬಿಜೆಪಿ ಯೊಂದಿಗೆ ಸಂಪರ್ಕದಲ್ಲಿರುವುದೂ ಸಹ ಗುಟ್ಟಾಗಿದ್ದರೂ ಸ್ವತಃ ಜಿಲ್ಲಾಧ್ಯಕ್ಷರೂ ಶಾಸಕರೂ ಆದಂತ ಜೀವರಾಜ್ ರವರು ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಏನೊಂದು ಮಾಡದೇ ಪಕ್ಷವನ್ನು ಪ್ರಭಲವಾಗಿ ಸಂಘಟಿಸುತ್ತಿರುವುದು ವಿರೋದಿಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ.
ಇನ್ನೂ ಕಾಂಗ್ರೇಸ್ ನಲ್ಲಿ ಗೆಲ್ಲುವ ಹುಮ್ಮಸ್ಸು ಇಲ್ಲದಿದ್ದರೂ   ಟಿಕೇಟ್ ಗೆ ಮಾತ್ರ ಲಾಭಿ ಶುರುವಾಗಿ ಬಿಟ್ಟಿದೆ.
ಒಬ್ಬರೂ ಡಿ.ಕೆ.ಶಿ ಬಣ... ಇನ್ನೋಬ್ಬರೂ ಮಹಿಳಾ ಬಣ... ಮತ್ತೊಬ್ಬರೂ ಸಿದ್ದರಾಮಯ್ಯನವರ ಕ್ಯಾಂಡಿಡೇಟ್.. ಇನ್ನೊಬ್ಬರೂ ಪರಮೇಶ್ವರ್ ಕ್ಯಾಂಡಿಡೇಟ್ ಇನ್ನೂ ಇಬ್ಬರೂ ಈ ಮೇಲಿನ ಎಲ್ಲರ ಒಲವು ಗಳಿಸುವ ಕ್ಯಾಂಡಿಡೇಟ್.... ಒಟ್ಟಾರೆ ಬಿಜೆಪಿ ಎದುರು ಪ್ರಭಲ ಎನ್ನುವಂತ ಕ್ಯಾಂಡಿಡೇಟ್ ಸಿಗದೇ ಪರಿತಪಿಸುತ್ತಿರುವ ಕಾಂಗ್ರೇಸ್ ನ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲು ಸಜ್ಜಾಗಿದ್ದಾರೆ ಜೀವರಾಜ್..

No comments:

Post a Comment