Friday, 19 May 2017

 ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೀವರಾಜ್ ಗೆ ವಿಜಯಮಾಲೆ.ನ್ಯೂಸ್ ಬ್ಲಾಗ್ ಸಮಿಕ್ಷೆ...

ಸರಳ, ಸಜ್ಜನಿಕೆಯ ಜೀವರಾಜ್ ರವರು  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಮತಗಳ ಅಂತರದಿಂದ  ಶೃಂಗೇರಿ ಕ್ಷೇತ್ರದಲ್ಲಿ ಜಯಶಾಲಿಯಾಗುತ್ತಾರೆಂದು ಜನತೆ ಅಭಿಪ್ರಾಯ ಪಟ್ಟಿದ್ದಾರೆ..


ಈ ಕ್ಷೇತ್ರ 15 ವರ್ಷಗಳ ಹಿಂದೆ ಕಾಂಗ್ರೇಸ್ ನ  ದುರಾಡಳಿತದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ನಂತರ ಜೀವರಾಜ್ ಕಾಂಗ್ರೇಸ್ ಕಪಿಮುಷ್ಠಿಯಿಂದ ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿ ಶೃಂಗೇರಿ ಕ್ಷೇತ್ರದ ನವನಿರ್ಮಾಣ ಕತೃ ಎಂದು ಜನತೆಯಿಂದ ಗುರುತಿಸಿ ಕೊಂಡಿದ್ದು   ಮೊನ್ನೆ ಮೊನ್ನೆ ವಿಧಾನ ಸಭೆಯಲ್ಲಿ ಕಸ್ತೂರಿ ರಂಗನ್ ವಿಚಾರವಾಗಿ ಅವರು ಮಾಡಿದ ಭಾಷಣ ಅವರ ರಾಜಕೀಯ ಪ್ರಭುದ್ಧತೆ ಹಾಗೂ ಕ್ಷೇತ್ರದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಜನತೆ ಬಹುವಾಗಿ ಮೆಚ್ಚಿಕೊಂಡಿದ್ದು.. ಈ ಕ್ಷೇತ್ರದ ಅಭಿವೃದ್ಧಿಗೆ ಜೀವರಾಜ್ ರಂತ ಪ್ರಭುದ್ಧ ಹಾಗೂ ಪ್ರಾಮಾಣಿಕ ರಾಜಕಾರಣಿಯಿಂದ ಮಾತ್ರ ಸಾದ್ಯ  ಎಂದು ಜನತೆ ಅಭಿಪ್ರಾಯ ಪಟ್ಟಿದ್ದಾರೆ.


ಇನ್ನೂ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ಬಿ.ಜೆ.ಪಿ ಸೇರ್ಪಡೆಯೂ ಜೀವರಾಜ್ ಗೆ ಅತಿ ಹೆಚ್ಚಿನ ಬಲ ತಂದಿದೆ ಎಂದು ಜನತೆ ಪ್ರತಿಕ್ರೀಯಿಸಿದ್ದಾರೆ.


ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಈ ಬಾರಿ ಜೆಡಿಎಸ್ ಎನ್ನುವುದು ಗಮನಿಸ ಬೇಕಾದ ಮುಖ್ಯ ಅಂಶ... ಕಾಂಗ್ರೇಸ್ ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕೆಂದು ಹೆಚ್ಚಿನವರ ಅನಿಸಿಕೆಯಾಗಿದೆ...

1 comment:

  1. ಕಾಂಗ್ರೇಸ್ ಶ್ರಿಂಗೇರಿ ಕ್ಷೇತ್ರದಲ್ಲಿ ಗೆದ್ದಾಗಿದೆ ಸರ್..

    ReplyDelete