Friday, 19 May 2017

ಯಶಸ್ವಿ ಮೋದಿ ಸರ್ಕಾರ.. ಭಾಸ್ಕರ್ ವೆನಿಲ್ಲಾ

ಮೋದಿಜಿಯವರ 3 ವರ್ಷದ ಆಡಳಿತ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತಹದು ಎಂದು ನ.ರಾ.ಪುರ ತಾಲ್ಲೂಕ್ ಬಿ.ಜೆ.ಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ನುಡಿದಿದ್ದಾರೆ.

ಅವರು ಕೇಂದ್ರದ ಬಿ.ಜೆ.ಪಿ ಸರ್ಕಾರಕ್ಕೆ 3 ವರ್ಷ ತುಂಬಿದ ಸಂಧರ್ಭದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಶೃಂಗೇರಿ ಕ್ಷೇತ್ರ ನ್ಯೂಸ್ ಬ್ಲಾಗ್ ನೊಂದಿಗೆ ಮಾತನಾಡುತ್ತ  ಕಾಂಗ್ರೇಸ್ ಈ ದೇಶಕ್ಕೆ ಅಂಟಿದ ಶಾಪ. ಈ ಶಾಪ ವಿಮೋಚನೆಗೆ ಮೋದಿಜಿ ದಿನದ 18 ಗಂಟೆಗಳ ಕಾಲ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಮೋದಿಜಿಯವರ ಎಲ್ಲಾ ಯೋಜನೆಗಳು ಭಾರತಕ್ಕೆ ದೀರ್ಘಕಾಲದ ಲಾಭ ತಂದುಕೊಡುವಂತಹದ್ದು..ಎಂದು ನುಡಿದರು.
ಇನ್ನೂ ರಾಹುಲ್ ಗಾಂದಿ ಬಗ್ಗೆ ಪ್ರಶ್ನಿಸಿದಾಗ ನಕ್ಕು. ಸದ್ಯ ಭಾರತದ ನಂ ಒನ್ ಜೋಕ್ ಗಳು ಅವರ ಹೆಸರಲ್ಲೇ ಇದ್ದು ಇನ್ನೂ ಮುಂದೆಯೂ ಅವರು ಜನರಿಗೆ ಮನರಂಜನೆಯನ್ನು ನೀಡಲಿ ಎಂದು ಹಾಸ್ಯ ಮಿಶ್ರಿತ ದಾಟಿಯಲ್ಲಿ ಲೇವಡಿಮಾಡಿದರು.

No comments:

Post a Comment