Friday, 26 May 2017

ಬಾಳೆಹೊನ್ನೂರು ಚೌಡಿಕೆರೆ ಒತ್ತುವರಿ ತೆರವು ಕಾರ್ಯಾಚರಣೆ. ಸುಮಾರು 5 ಎಕರೆ ತೆರವುಗೊಳಿಸುತ್ತಿರುವ ಅಧಿಕಾರಿಗಳು.






ಬಾಳೆಹೊನ್ನೂರಿನ ಅತಿ ದೊಡ್ಡಕೆರೆಯಾದ ಇತಿಹಾಸಪ್ರಸಿದ್ಧವಾದ ನರಾಪುರ ರಸ್ತೆಯಲ್ಲಿರುವ ಚೌಡಿಕೆರೆಯ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಚರಣೆಯನ್ನು ನಾಡಕಛೇರಿ, ಪಂಚಾಯ್ತಿ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ಸರಿ ಸುಮಾರು 5ಎಕರೆ ಕೆರೆಒತ್ತುವರಿಯನ್ನು ತೆರವುಗೊಳಿಸುತ್ತಿದ್ದು  ಕಾರ್ಯಾಚರಣೆ ಯಾವುದೇ ಅಡೆತಡೆಇಲ್ಲದೇ ಸಾಗುತ್ತಿದೆ.
ಈ ಒತ್ತುವರಿ ಮಾಡಿರುವ ಪ್ರದೇಶದಲ್ಲಿ ಅಡಕೆ ಬಾಳೆ ತೋಟವಿದ್ದು ಕೆಲ ಮರಗಳಲ್ಲಿ ಪಸಲಿದ್ದು  ಮಾನವೀಯತೆ  ದೃಷ್ಟಿಯಿಂದ ಅದನ್ನು ತೆಗೆದುಕೊಳ್ಳಲು ಒಂದಿಷ್ಟು ದಿನ ಸಮಯನೀಡಲು ಕೋರಿದ್ದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು ಕಾರ್ಯಾಚರಣೆ ಮುಂದುವರಿದಿದೆ.
ಇನ್ನೂ ಕೆರೆ ಒತ್ತುವರಿ ತೆರೆವು ಶುರುವಾದಕೂಡಲೇ ಇನ್ನಿತರೆ ಬಾಳೆಹೊನ್ನೂರಿನಲ್ಲಿ ಅಕ್ರಮವಾಗಿ ಒತ್ತುವರಿ, ಕೆರೆಮುಚ್ಚಿ ಹಾಕಿರುವ ಪ್ರಕರಣಗಳ ಪೈಲ್ ದೂಳುಕೊಡವಿಕೊಂಡು ಏಳುವ ಸಾದ್ಯತೆಯಿಂದ ಅಕ್ರಮ ಕೆರೆ ಒತ್ತುವರಿ ಮಾಡಿರುವವರ ಮುಖದಲ್ಲಿ ಆತಂಕ ಮನೆಮಾಡಿದೆ








No comments:

Post a Comment