Thursday, 25 May 2017

ನ.ರಾ.ಪುರ ಬಿ.ಜೆ.ಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯತ್ವ ಅಭಿಯಾನ.




ಸದೃಡ ಭಾರತ ನಿರ್ಮಾಣಕ್ಕೆ ಮೋದಿಜಿಯವರ ಬ್ರಾತೃತ್ವದ ಸಂದೇಶವನ್ನು ಯುವಜನತೆ ಅರ್ಥಮಾಡಿ ಕೊಂಡು ಮುಂದೆಸಾಗಬೇಕಾಗಿದೆ, ಇಂದು ಭಾರತದ ನವ ನಿರ್ಮಾಣಕ್ಕೆ  ಹಾಗೂ ಶೃಂಗೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದೆ. ಈ ಬೆಂಬಲವನ್ನು ಸಾಭೀತು ಪಡಿಸಲು ಸದಸ್ಯತ್ವ ಅಭಿಯಾನ ಆರಂಭಿಸಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲ್ಲೂಕ್ ಅಧ್ಯಕ್ಷ ಇಬ್ರಾಹಿಂ ಶಾಫಿ ತಿಳಿಸಿದ್ದಾರೆ.
ಅವರು ಕ್ಷೇತ್ರ ನ್ಯೂಸ್ ಬ್ಲಾಗ್ ನೊಂದಿಗೆ ಮಾತನಾಡಿ ಕಾಂಗ್ರೇಸ್ ಹಾಗೂ ಜೆಡಿಎಸ್ ಮುಸಲ್ಮಾನರನ್ನು ಎತ್ತಿಕಟ್ಟಿ ರಾಜಕೀಯ ಮಾಡಿ ಲಾಭಗಳಿಸುವ ಹುನ್ನಾರ ನೆಡೆಸಿದರೆ, ಬಿಜೆಪಿ ಮುಸಲ್ಮಾನರೊಂದಿಗೆ ಸಹೋದರ ಭಾವನೆಯೊಂದಿಗೆ ಸಾಗುತ್ತಿದೆ ಹಾಗಾಗಿ ಜಾತಿ ಜಾತಿ ಸಂಘರ್ಷ ಏರ್ಪಟ್ಟು ಸಮಾಜದಲ್ಲಿ ಅಶಾಂತಿ ಏರ್ಪಡುವ ಬದಲು ಸಹೋದರ ಭಾವನೆಯೊಂದಿಗೆ ಅಲ್ಪಸಂಖ್ಯಾತರನ್ನು ನೆಡೆಸಿಕೊಳ್ಳುವ ಬಿಜೆಪಿ ಎಲ್ಲಾ ಅಲ್ಪಸಂಖ್ಯಾತರ ಆಯ್ಕೆಯಾಗಬೇಕು,  ಈ ಸಂಬಂದ ಅತಿ ಹೆಚ್ಚಿನ ಮುಸಲ್ಮಾನ ಬಂಧುಗಳು ಈ ಬಾರಿ ಜೀವರಾಜ್ ರನ್ನ ಬೆಂಬಲಿಸಿ ಗೆಲ್ಲಿಸಲು ಶ್ರಮವಹಿಸಲಿದ್ದಾರೆಂದು ಶಾಫಿ ನುಡಿದಿದ್ದಾರೆ





No comments:

Post a Comment