ವ್ಯಕ್ತಿಗಿಂತ ಸಂಘಟನೆ, ಸಂಘಟನೆಯ ಜವಾಬ್ದಾರಿ ದೊಡ್ಡದು...ಆರ್.ಡಿ ಮಹೇಂದ್ರ
ಶೃಂಗೇರಿ ಕ್ಷೇತ್ರ ನ್ಯೂಸ್ : ಮೇ 19. ವ್ಯಕ್ತಿಗಿಂತ ಸಂಘಟನೆ, ಸಂಘಟನೆಯ ಜವಾಬ್ದಾರಿ ದೊಡ್ಡದು.. ಹಾಗಾಗಿ ಕೆಲವರು ಸಂಘಟನೆ ಬಿಟ್ಟು ಬೇರೆ ಪಕ್ಷ ಸೇರಿದರೆ ಅದರಿಂದ ಸಂಘಟನೆಗೇನು ನಷ್ಟವಾಗದು ಎಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಉಪಾಧ್ಯಕ್ಷ ಆರ್.ಡಿ ಮಹೇಂದ್ರ ಪ್ರತಿಕ್ರೀಯಿಸಿದ್ದಾರೆ.
ಕೆಲ ಕಾರ್ಯಕರ್ತರು ಕಾಂಗ್ರೇಸ್ ಸೇರಿದ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರೀಯಿಸಿದ ಅವರು ಸಂಘಟನೆ ಜಿಲ್ಲೆಯಲ್ಲಿ ಸದೃಡವಾಗಿದೆ. ಇಲ್ಲಿ ಯಾರೂ ದೊಡ್ಡವರಲ್ಲ ಯಾರು ಸಣ್ಣವರಲ್ಲ..ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಬಹುದೊಡ್ಡ ಹಿಂದೂ ಸಂಘಟನೆಯಲ್ಲಿ ದುಡಿಯಲಾಗದವರು ಇನ್ನೂ ಮುಳುಗುತ್ತಿರುವ ಹಡಗಾದ ಕಾಂಗ್ರೇಸಿಗೆ ಏನು ದುಡಿಯುವರು ?. ಹಾಗಾಗಿ ಸಮುದ್ರದಂತ ವಿಶ್ವ ಹಿಂದೂ ಬಜರಂಗದಳದಲ್ಲಿ ಇಂತಹ ಒಂದು ಬೊಗಸೆ ನೀರು ಖಾಲಿಯಾದರೆ ಸಮುದ್ರಕ್ಕೇನು ತೊಂದರೆಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
No comments:
Post a Comment