Monday, 29 May 2017

ಜೀವರಾಜ್ ಗೆ ರಸ್ತೆಯಲ್ಲಿಯೇ ಮನವಿ ಸಲ್ಲಿಸಿದ ಚೌಡಿಕೆರೆ ಒತ್ತುವರಿದಾರರು.



ಕ್ಷೇತ್ರ ನ್ಯೂಸ್ ಬ್ಲಾಗ್. ಬಾಳೆಹೊನ್ನೂರು.
ಬಾಳೆಹೊನ್ನೂರಿನ ಚೌಡಿಕೆರೆ ಒತ್ತುವರಿಯಾಗಿದ್ದ 5ಎಕರೆ  ಯನ್ನು ತೆರವುಗೊಳಿಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು 7ಕುಟುಂಬದ ಸದಸ್ಯರು ಶಾಸಕ ಜೀವರಾಜ್ ಗೆ ರಸ್ತೆ ಯಲ್ಲಿಯೇ ಮನವಿ ಸಲ್ಲಿಸಿ, ಬಾಳೆಹೊನ್ನೂರಿನಲ್ಲಿ ಬಹಳಷ್ಟು ಸರ್ಕಾರಿಜಾಗ ಒತ್ತುವರಿಯಾಗಿದೆ ಅದೆಲ್ಲದನ್ನು ಬಿಟ್ಟು ಕೇವಲ ನಮ್ಮಗಳ ಮೇಲೆ ಮಾತ್ರಈ ತೆರವು ಕಾರ್ಯಾಚರಣೆ ನೆಡೆಸುತ್ತಿರುವುದು ಸರಿ ಅಲ್ಲ, ನಾವು ಬಡವರಾಗಿದ್ದು ಈ ತೆರವುಕಾರ್ಯಾಚರಣೆ ನಿಲ್ಲಿಸಬೇಕೆಂದು ಮನವಿ ಸಲ್ಲಿಸಿದರು.


ಶಾಸಕ ಜೀವರಾಜ್ ಮನವಿ ಸ್ವೀಕರಿಸಿ ಸಂಬಂದಪಟ್ಟ ಇಲಾಖೆಗೆ ಮಾತನಾಡಿದ್ದು ಸದ್ಯದಮಟ್ಟಿಗೆ ಒತ್ತುವರಿದಾರರು ನಿರಾಳರಾಗಿದ್ದಾರೆ.  ಈ ಸಮಯದಲ್ಲಿ ಬಿ.ಜೆ.ಪಿ ಮುಖಂಡರು ವಿಎಸ್ ಎಸ್ ಎನ್ ಅದ್ಯಕ್ಷರಾದ ಕಲ್ಮಕ್ಕಿ ಉಮೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ,  ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ತಾಲ್ಲೂಕ್  ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇಬ್ರಾಹಿಂ ಶಾಫಿ ಉಪಸ್ಥಿತರಿದ್ದರು.

No comments:

Post a Comment