Friday, 16 February 2018

ಜೀವರಾಜ್ ರಸ್ತೆ ಕಾಮಗಾರಿ : ಪೋಲಿಸ್ ಇಲಾಖೆಯ ದಿವ್ಯ ನಿರ್ಲಕ್ಷ. 
ಬಾಳೆಹೊನ್ನೂರಿನ ಜೀವರಾಜ್ ರಸ್ತೆ

ದೇವರು ವರ ಕೊಟ್ಟರು ಪೂಜಾರಿ ಕೊಡ ಎನ್ನುವ ಗಾದೆ ಮಾತಂತೆ ಬಾಳೆಹೊನ್ನೂರಿನ ಹೃದಯ ಭಾಗದಲ್ಲಿ  ಕೇಂದ್ರ ಬಿಜೆಪಿ ಸರ್ಕಾರದ 8ಕೋಟಿ ಅನುದಾನದಲ್ಲಿ ನೆಡೆಯುತ್ತಿರುವ ರಸ್ತೆ ಹಾಗೂ ಡೋಬಿಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ  ಎಷ್ಟು ವೇಗವಾಗಿ ಚಾಲನೆ ಪಡೆಯಿತೋ ಈಗ ಅಷ್ಟೇ ನಿಧಾನಗತಿಯಲ್ಲಿ ಸಾಗುತ್ತಿದೆ.  ಕಾರಣ ವಾಹನಗಳ ಕಿರಿಕಿರಿ.  ಹೌದು ಎರೆಡೂ ಬದಿಯ ರಸ್ತೆಯಲ್ಲಿ ಒಂದು ಬದಿಯ ರಸ್ತೆ ಸಂಪೂರ್ಣ ನಿರ್ಮಾಣಗೊಂಡು  ಇನ್ನೊಂದು ಬದಿಯ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ ಆದರೇ ಬಾಳೆಹೊನ್ನೂರು ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮಾತ್ರ ಕೇವಲ ಇಬ್ಬರು ಮಹಿಳಾ ಹೋಂ ಗಾರ್ಡ್ ಗಳನ್ನು ಅಲ್ಲಿಗೆ ನೇಮಕ ಮಾಡಿ ಸಾರ್ವಜನಿಕರ ಕಷ್ಟಕ್ಕೂ,  ಕಾಮಗಾರಿ ಮಾಡುತ್ತಿರುವವರರಿಗೂ ನನಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.  ಟ್ರಾಪಿಕ್ ಗೆ ಸಂಬಂದಿಸಿದ ಇತರ ವಿಚಾರಗಳಿಗೆ ಕಿವಿಕೊಡುವ ಸಬ್ ಇನ್ಸ್ ಪೆಕ್ಟರ್ ಈ ವಿಚಾರಕ್ಕೆ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನ ಹರಿಸದೇ ಇರುವುದು ನಿಜಕ್ಕೂ ಬಾಳೆಹೊನ್ನೂರಿನ ದುರಂತ.  ಕೂಡಲೇ ಮಾನ್ಯ ಎಸ್. ಪಿ ಅಣ್ಣಾಮಲೈ ಸಾಹೇಬರು ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ನಾಗರೀಕರ ಅಭಿಲಾಷೆಯಾಗಿದೆ.  ಅಲ್ಲದೇ..  ಒಂದು ಭಾಗ ಸಂಪೂರ್ಣ ಕಾಮಗಾರಿ ಮುಗಿದಿದ್ದು ಇನ್ನೊಂದು ಭಾಗದಲ್ಲಿ ಅಲ್ಲಲ್ಲಿ ಕಾಮಗಾರಿ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಕೂಡಲೇ ಏಡಬದಿಯ ಪಥದ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ,  ಅಂಗಡಿ,  ಗ್ಯಾರೇಜ್ ಮಾಲಿಕರಿಗೆ ಈ ಜೀವರಾಜ್ ರಸ್ತೆಯಲ್ಲಿ  ವ್ಯವಹರಿಸಲು ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಇನ್ನೂ ಕಾಮಗಾರಿ ಅತ್ಯುತ್ತಮವಾಗಿ ಸಾಗುತ್ತಿದ್ದು ಕೇವಲ ರಕ್ಷಣೆ ಮತ್ತು ಟ್ರಾಪಿಕ್ ಸಮಸ್ಯೆಯಿಂದ ಕಾಮಾಗಾರಿಯ ವೇಗ ಕುಂಠಿತವಾಗುತ್ತಿರುವುದು ನಿಜಕ್ಕೂ ಖೇದಕರ ಹಾಗೂ ಜೀವರಾಜ್ ಹೆಸರಿಗೆ ಕಳಂಕ ತರುವ ಉದ್ದೇಶ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.ಕೂಡಲೇ ಪೋಲಿಸ್ ಇಲಾಖೆ ಈ ಮಾರ್ಗದಲ್ಲಿ ಕಾಮಗಾರಿ ಮುಗಿಯುವವರೆಗೂ ದ್ವಿಚಕ್ರ ವಾಹನ ಹೊರತು ಪಡಿಸಿ ಬೇರೆ ಯಾವುದೇ ವಾಹನ ಬಿಡದೇ ಆದಷ್ಟು ಬೇಗನೆ ಈ ರಸ್ತೆ  ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವಂತೆ ಈಸಂಬಂದಪಟ್ಟವರು ಗಮನಿಸ ತಕ್ಕದ್ದು.

Friday, 9 February 2018

ಸಮೀಕ್ಷೆ ಬಹಿರಂಗ : ಅಭ್ಯರ್ಥಿ ಬದಲಾವಣೆಗೆ ಕಾಂಗ್ರೇಸ್ ನಲ್ಲಿ ಗರಿಗೆದರಿದ ರಾಜಕೀಯ.

ಚುನಾವಣಾ ಸಮಯ ಚುನಾವಣೋತ್ತರ ಸಮೀಕ್ಷೆಗಳದ್ದೇ ಚರ್ಚೆ . ದಿನಕ್ಕೊಂದು ಚಾನಲ್ ಪತ್ರಿಕೆ ಸಮೀಕ್ಷೆ ಹೊರಬೀಳುತ್ತಿದ್ದಂತೆ ಶೃಂಗೇರಿ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿದೆ. ಹೌದು ಎಲ್ಲಾ ಚುನಾವಣ ಸಮೀಕ್ಷೆಗಳು ಬಿಜೆಪಿ ಯ ಡಿ.ಎನ್.ಜೀವರಾಜ್ ಗೆಲುವು ಖಚಿತ ಎಂದು ಸಮೀಕ್ಷೆಯ ಮಾಹಿತಿ ಹೊರ ಹಾಕುತ್ತಿದ್ದಂತೆ ಬಿಜೆಪಿಯವರು ಗೆಲುವಿನ ನಗೆ ಬೀರಲಾರಂಭಿಸಿದರೇ ಕಾಂಗ್ರೇಸ್ ನಲ್ಲಿ  ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ದಿಲ್ಲಿಯಲ್ಲಿ ಲಾಭಿ ಶುರುವಿಟ್ಟುಕೊಂಡಿರುವುದು ಸದ್ಯದಮಟ್ಟಿಗೆ ಹೊಸಬೆಳವಣಿಗೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಟಿ.ಡಿ.ರಾಜೇಗೌಡರೇ ಈ ಬಾರಿಯ ಅಭ್ಯರ್ಥಿ ಎಂದು ಮೊದಲ ಹಂತದಲ್ಲಿ ಆಯ್ಕೆಯಾಗಿದ್ದರೂ ಕ್ಷೇತ್ರದ ಶೃಂಗೇರಿ ಮತ್ತು ನರಾ..ಪುರದ ಕೆಲ ಮುಖಂಡರ ಬೆಂಬಲಿಗರು ಅಭ್ಯರ್ಥಿ ಬದಲಾಯಿಸಿ ಎಂಬ ಲಾಭಿ ಶುರುವಿಟ್ಟುಕೊಂಡಿರುವುದು ಸದ್ಯದ ಮಟ್ಟಿಗೆ ಹೊಸಬೆಳವಣಿಗೆ. ಇನ್ನೂ ರಾಜೇಗೌಡರು ವರ್ಷಕ್ಕೂ ಮುಂಚಿನಿಂದಲೇ ಪ್ರವಾಸ ಮಾಡುತ್ತಾ ಚುನಾವಣೆಗೆ ತಯಾರಿನೆಡೆಸಿದ್ದು ಸದ್ಯದ ಈ ಹೊಸ ಬೆಳವಣಿಗೆಗೆ ಯಾವ ರೀತಿ ಪ್ರತಿಕ್ರೀಯಿಸುತ್ತಾರೋ ಕಾದುನೋಡಬೇಕು. ಒಟ್ಟಾರೆ ಮಲೆನಾಡಿನಲ್ಲಿ ರಾಜಕೀಯ ನಿಧಾನವಾಗಿ ಅವರ್ನ ಬಿಟ್ ಇವರ್ನ ಬಿಟ್ ಅವರ್ಯಾರು ಎನ್ನುವ ಆಟದಂತಾಗಿದೆ.

Tuesday, 12 December 2017

ಪರೇಶ್ ಮೇಸ್ತ ಕೊಲೆ ಪ್ರಕರಣ-ರಾಷ್ಟ್ರೀಯ ತನಿಖಾ ತಂಡಕ್ಕೆ ಒಪ್ಪಿಸಿ- ಡಿ.ಎನ್.ಜೀವರಾಜ್ ಆಗ್ರಹ

ಹೊನ್ನಾವರ ಪರೇಶ್ ಮೇಸ್ತ ಕೊಲೆ ಪ್ರಕರಣ ಹಾಗೂ ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ಒಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ವಿಧಾನ ಸೌಧ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು..

ಮಾನ್ಯ ಶಾಸಕರಾದ ಡಿ.ಎನ್ ಜೀವರಾಜ್ ಮಾತನಾಡಿ ಈ ನಾಡು ಕುವೆಂಪು ನುಡಿದಂತೆ ಸರ್ವಜನಾಂಗದ ಶಾಂತಿಯ ತೋಟವಿದ್ದಂತೆ ಆದರೇ ಈ ಕಾಂಗ್ರೇಸ್ ನೇತೃತ್ವದ ಸಿದ್ದರಾಮಯ್ಯನವರ ಸರ್ಕಾರ  ಕೇವಲ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಲೇ ಬೇಕೆಂಬ ಹಟಕ್ಕೆ ಬಿದ್ದು ಜಾತಿ ಜಾತಿಗಳ ನಡುವೆ ಸಂಘರ್ಷವೇರ್ಪಡುವಂತೆ ಮಾಡಿ ಅಮಾಯಕರು ಪ್ರಾಣಕಳೆದುಕೊಳ್ಳುವಂತಾಗಿದ್ದು. ಕೂಡಲೇ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾತಂಡಕ್ಕೆ ವಹಿಸಬೇಕೆಂದು ನುಡಿದರು.


ವಿಧಾನಪರಿಷತ್ ವಿರೋದಪಕ್ಷದ ನಾಯಕ ಶ್ರೀ ಈಶ್ವರಪ್ಪನವರು ಹಾಗೂ ಮಾಜಿ ಡಿ.ಸಿ.ಎಂ ಆರ್ ಅಶೋಕ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Wednesday, 8 November 2017

ಆಧುನಿಕ ಬಾಳೆಹೊನ್ನೂರು ನಿರ್ಮಾಣ  ಜೀವರಾಜ್ ಕನಸು-  ವೆನಿಲ್ಲಾ ಭಾಸ್ಕರ್


ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮಾನ್ಯ ಶಾಸಕರಾದ ಶ್ರೀ ಡಿ.ಎನ್.ಜೀವರಾಜ್ ರವರ ಪರಿಶ್ರಮದ ಪಲವಾಗಿ ಬಾಳೆಹೊನ್ನೂರಿನ ಜನತೆ, ಶಾಲಾ ಮಕ್ಕಳು ದಿನನಿತ್ಯ ಹಿಡಿಶಾಪ ಹಾಕುತಿದ್ದ ಬಾಳೆಹೊನ್ನೂರಿನಿಂದ ಮೇಲ್ಪಾಲ್ ಕೊಪ್ಪ ರಸ್ತೆಗೆ   ಬಾಳೆಹೊನ್ನೂರಿನ ಇತಿಹಾಸದಲ್ಲೇ ಬೃಹತ್ ಯೋಜನೆಯ ಅಂದರೇ ಸರಿಸುಮಾರು 8 ಕೋಟಿ ರೂಗಳ ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದು ಈ ಯೋಜನೆಯಡಿ ಬಾಳೆಹೊನ್ನೂರಿನ ಬಹು ಹಳೆಯದಾದ ಡೋಬಿಹಳ್ಳಕ್ಕೆ 10 ಮೀಟರ್ ಅಗಲದ ಕಾಂಕ್ರಿಟ್ ಸೇತುವೆ ಹಾಗೂ  ಬಾಳೆಹೊನ್ನೂರು ಜೆಸಿ ವೃತ್ತದಿಂದ  ಹೊಸ ಪೆಟ್ರೋಲ್ ಬಂಕ್ ವರೆಗೆ 10 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ಹಾಗೂ ರಸ್ತೆ ಎರೆಡೂ ಬದಿಯಲ್ಲಿ 1 ಮೀಟರ್ ಅಗಲದ ಇಂಟರ್ ಲಾಕ್ ಪಾದಚಾರಿ ಮಾರ್ಗ ಹಾಗೂ ಎರೆಡೂ ಬದಿ ಬಾಕ್ಸ್ ಚರಂಡಿ ನಿರ್ಮಾಣಗೊಳ್ಳಲಿದೆ. ಹೊಸ ಪೆತ್ರೋಲ್ ಬಂಕ್ ನಿಂದ  ಕೆರೆ ಚೌಡೇಶ್ವರಿ  ದೇವಸ್ಥಾನದವರೆಗೆ  7 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ. ಕೆರೆ ಚೌಡೇಶ್ವರಿ ದೇವಸ್ಥಾನದಿಂದ ಮೇಲ್ಪಾಲ್ ವರೆಗೆ ಈಗಿರುವ ರಸ್ತೆಗೆ ಡಾಂಬರೀಕರಣ ಗೊಳ್ಳಲಿದೆ.
ಈ ಕಾರ್ಯದಬಗ್ಗೆ ಬಾಳೆಹೊನ್ನೂರಿನ ಜನತೆ ಸಂಪೂರ್ಣ ಹರ್ಷಚಿತ್ತರಾಗಿದ್ದು ಮಾನ್ಯ ಶಾಸಕರ ಕಾರ್ಯವೈಕರಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರಲ್ಲದೇ  ಇತಿಹಾಸ ಪ್ರಸಿದ್ದ ಯಾತ್ರಾಸ್ಥಳವಾದ ಶ್ರೀ ರಂಭಾಪುರೀ ಪೀಠವು ಇದೇ ರಸ್ತೆಯ ಮಾರ್ಗಮದ್ಯೆ ಬರುವುದರಿಂದ ಹಾಗೂ ಬಾಳೆಹೊನ್ನೂರಿನ ಹೃದಯಬಾಗದರಸ್ತೆ ಇದಾಗಿರುವುದರಿಂದ ಜೆಸಿ ಸರ್ಕಲ್ ನಿಂದ ಕೆರೆ ಚೌಡಿ ದೇವಸ್ಥಾನದವರೆಗೂ 10 ಮೀಟರ್ ಅಗಲದ ರಸ್ತೆ ಮಾಡಿ ಎರೆಡೂ ಬದಿ ಇಂಟರ್ ಲಾಕ್ ಪಾದಚಾರಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಮಾಡಬೇಕೆಂದು ಈಗಾಗಲೇ ಸ್ಥಳಿಯ ಬಿಜೆಪಿ ಮುಖಂಡರಾದ ವೆನಿಲ್ಲಾ ಭಾಸ್ಕರ್. ಕಲ್ಮಕ್ಕಿ ಉಮೇಶ್. ಪ್ರಭಾಕರ್ ಪ್ರಣಸ್ವಿ. ಕೆ.ಟಿ ವೆಂಕಟೇಶ್. ಕೆ.ಕೆ.ವೆಂಕಟೇಶ್ ಜಗದೀಶ್ಚಂದ್ರ.ಆರ್.ಡಿ.ಮಹೇಂದ್ರರವರ ಬಳಿ ತಿಳಿಸಿದ್ದು ಈ ಸಂಬಂದ ಅವರುಗಳು ಶಾಸಕರಬಳಿ ಈ ಸಂಬಂದ ಚರ್ಚಿಸಿ ಮುಂದಿನದಿನಗಳಲ್ಲಿ ಈ ಕೆಲಸಕ್ಕೆ ಹೆಚ್ಚುವರಿ ಹಣ ಇಡುವಂತೆ ಶಾಸಕರ ಬಳಿ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.

ಈ ಸಂಬಂದ ಮಾತನಾಡಿದ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಮಾನ್ಯ ಶಾಸಕರ ಅನುದಾನದಲ್ಲಿ ಬಾಳೆಹೊನ್ನೂರು ಆಧುನಿಕವಾಗುತ್ತಿದ್ದು ಮುಂದಿನದಿನಗಳಲ್ಲಿ ಬಾಳೆಹೊನ್ನೂರಿನ ಜನತೆ ಬಿಜೆಪಿ ಯನ್ನು ಸಂಪೂರ್ಣವಾಗಿ ಬೆಂಬಲಿಸಿದರೇ ಬಾಳೆಹೊನ್ನೂರಿನ ನಗರದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲು ಶ್ರಮಿಸಲು ಬಿಜೆಪಿ ಸಿದ್ದವಿದೆ ಎಂದು ತಿಳಿಸಿದರು.

Monday, 11 September 2017

ಗೌರಿ ಲಂಕೇಶ್ : ಐದನೇ ದಿನ ವೀರಶೈವ ಸಂಪ್ರದಾಯದಂತೆ ಪೂಜೆ


ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಅಂತ್ಯಸಂಸ್ಕಾರದಲ್ಲಿ ಯಾವುದೇ ವಿಧಿವಿಧಾನಗಳನ್ನು ಅನುಸರಿಸದೇ ಮಣ್ಣು ಮಾಡಲಾಗಿತ್ತು. ಆದರೆ ಗೌರಿ ಲಂಕೇಶ್ ಅವರು ಮೃತಪಟ್ಟು ಐದನೇ ದಿನದದಂದು ಸಂಪ್ರದಾಯಿಕ ಪೂಜೆ ನಡೆದಿದೆ.
ಭಾನುವಾರ ಸಂಜೆ ಐದನೇ ದಿನವಾದ ತಿಥಿಯಂದು ಗೌರಿಲಂಕೇಶ್ ಸಮಾಧಿಗೆ ವೀರಶೈವ ಸಂಪ್ರದಾಯದಂತೆ ಪೂಜೆ ನಡೆದಿದೆ. ಬಾಳೆ ಕಂಬ ಕಟ್ಟಿ ಹೊಂಬಾಳೆಯನ್ನು ಇಟ್ಟು ಕುಟುಂಬದ ಸದಸ್ಯರು ಪೂಜಿಸಿದ್ದಾರೆ.
ಗೌರಿ ಲಂಕೇಶ್ ಸಮಾಧಿಗೆ ಎಡೆಯಿಟ್ಟು ಸಂಪ್ರದಾಯಿಕವಾಗಿ ನಡೆದ ಪೂಜೆಯಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು ಎಂದು ಈ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರತ್ಯಕ್ಷದರ್ಶಿಗಳು ಟಿವಿಗೆ ತಿಳಿಸಿದ್ದಾರೆ.
ಗೌರಿ ಲಂಕೇಶ್ ಧಾರ್ಮಿಕ ವಿಧಿವಿಧಾನಗಳ ನಂಬದೇ ಇದ್ದ ಕಾರಣ ಅಂತ್ಯಸಂಸ್ಕಾರದ ವೇಳೆ ವೀರಶೈವ ಸಂಪ್ರದಾಯವನ್ನು ಅನುಸರಿಸದೇ ಪಾರ್ಥಿವ ಶರೀರವನ್ನು ಚಾಮರಾಜಪೇಟೆಯಲ್ಲಿರುವ ರುದ್ರಭೂಮಿ ಟಿಬಿ ಮಿಲ್ ನಲ್ಲಿ ಬುಧವಾರ ಸಂಜೆ ಮಣ್ಣು ಮಾಡಲಾಗಿತ್ತು.
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ನಕ್ಸಲರ ಕೈವಾಡವಿರುವ ಶಂಕೆ  ವ್ಯಕ್ತವಾಗಿದೆ.

ಗೌರಿ ಲಂಕೇಶ್ ಅವರು ರಾಜ್ಯ ನಕ್ಸಲರ ಶರಣಾಗತಿ ಸಮಿತಿಯ ಸದಸ್ಯೆಯಾಗಿದ್ದರು. ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ನಕ್ಸಲರಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಳೆದ 2 ವರ್ಷಗಳಿಂದ ನಕ್ಸಲರು ಹಗೆ ಇಟ್ಟುಕೊಂಡಿದ್ರು ಎಂಬ ಮಾಹಿತಿ ಇದೆ. ನಕ್ಸಲರ ಒಂದು ತಂಡ ಗೌರಿ ಲಂಕೇಶ್ ಮೇಲೆ ದ್ವೇಷ ಸಾಧಿಸುತ್ತಿತ್ತು ಎಂದು ಹೇಳಲಾಗಿದೆ. ಹೀಗಾಗಿ ನಕ್ಸಲರೇ ಗೌರಿ ಲಂಕೇಶ್‍ರನ್ನು ಟಾರ್ಗೆಟ್ ಮಾಡಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದೂವರೆ ದಶಕದಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಕನ್ಯಾಕುಮಾರಿ ಹಾಗೂ ರಾಯಚೂರು ಮೂಲದ ಶಿವು ಮತ್ತು ಚಿನ್ನಮ್ಮ ಮೂರು ತಿಂಗಳ ಹಿಂದೆ ಶರಣಾಗಿ ಮುಖ್ಯವಾಹಿನಿಗೆ ಬರುವುದಾಗಿ ತಿಳಿಸಿದ್ದರು. ಹಿರಿಯ ವಕೀಲ ಎ.ಕೆ ಸುಬ್ಬಯ್ಯ, ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ರಚಿಸಿರೋ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ವೇದಿಕೆ ಮೂಲಕ ಈ ಮೂವರು ನಕ್ಸಲರು ಶರಣಾಗಿದ್ದರು.

ಕೃಪೆ. ಪಬ್ಲಿಕ್ ಟಿವಿ
ಲಿಂಗಾಯತ ಧರ್ಮ : ಪಾಟೀಲ್ ಹೇಳಿಕೆಗೆ ಶ್ರೀಮಠದಲ್ಲೇ ಆಕ್ರೋಶ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ದಗಂಗಾ ಶ್ರೀಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆಗೆ ಶ್ರೀಮಠದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ನಿನ್ನೆ ತುಮಕೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ವೀರಶೈವ ಲಿಂಗಾಯತ ವಿಷಯದ ಬಗ್ಗೆ ಪ್ರಸ್ತಾಪಿಸಿ ನಂತರ ಬೆಂಗಳೂರಿಗೆ ಬಂದು ಲಿಂಗಾಯತ ಧರ್ಮಕ್ಕೆ ತುಮಕೂರು ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಏಕಪಕ್ಷೀಯವಾಗಿ ನೀಡಿರುವ ಹೇಳಿಕೆಯನ್ನು ಮಠದ ಮೂಲಗಳು ತೀವ್ರವಾಗಿ ಖಂಡಿಸಿವೆ.  

ನಮ್ಮ ಮಠ ಶೈಕ್ಷಣಿಕ, ಧಾರ್ಮಿಕ ಸೇವೆ ಮಾಡುತ್ತಾ ಬಂದಿದೆ. ಮಠವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ ಎಂದು ಇಂದು ಮಠಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಸ್ಪಷ್ಟನೆ ನೀಡಿದ್ದಾರೆ.

Wednesday, 6 September 2017

ಮಂಗಳೂರು ಚಲೋ... ಬಂದನಕ್ಕೊಳಗಾದ ಬಾಳೆಹೊನ್ನೂರು ಖಾಂಡ್ಯ ಕಾರ್ಯಕರ್ತರು..


ಕೆ.ಎಪ್.ಡಿ. ಮತ್ತು ಪಿ.ಎಪ್.ಐ ಸಂಘಟನೆಗಳನ್ನು ನಿಷೇದಿಸುವಂತೆ ಮತ್ತು ಸರಣಿ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಾಳೆಹೊನ್ನೂರು ಮತ್ತು ಖಾಂಡ್ಯ ಹೋಬಳಿ ಮತ್ತು ಯುವಮೋರ್ಚಾದಿಂದ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ಜಾಥವನ್ನು ಎಸ್ ಪೇಟೆ ಸಮುದಾಯ ಭವನದ ಬಳಿ ಪೋಲಿಸರು ತಡೆದು  ಪ್ರತಿಭಟನಾ ಕಾರರನ್ನು ಬಂದಿಸಿದರು.  ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ಬೈಕ್ ಜಾಥವನ್ನು ಬಾಳೆಹೊನ್ನೂರು ಬಿಜೆಪಿ ಮುಖಂಡ ಕಲ್ಮಕ್ಕಿ ಉಮೇಶ್ ಬಾಳೆಹೊನ್ನೂರಿನಲ್ಲಿ ಚಾಲನೆ ನೀಡಿದರು . ಬಂದನಕ್ಕೊಳಗಾದ  ನಂತರ ಮಾತನಾಡಿದ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಪರಮ ನೀಚ ಸರ್ಕಾರ ಈ ಕಾಂಗ್ರೇಸ್ ಸರ್ಕಾರವಾಗಿದೆ. ಹಿಂದೂಪರ ಕಾರ್ಯಕರ್ತರ ಸರಣಿ ಹತ್ಯೆಯನ್ನು ನಾವು ವಿರೋದಿಸುತ್ತೇವೆ. ಈ ರಾಜ್ಯ ಸರ್ಕಾರಕ್ಕೆ ನೈತಿಕತೆ ಬದ್ದತೆ ಇದ್ದರೇ ಕೂಡಲೇ ಪಿ.ಎಪ್.ಐ ಮತ್ತು ಕೆ.ಎಪ್ ಡಿ. ಸಂಘಟನೆಗಳನ್ನು ನಿಷೇದಿಸಬೇಕೆಂದು ಒತ್ತಾಯಿಸಿದರು.
ಕಲ್ಮಕ್ಕಿ ಉಮೇಶ್ ಮಾತನಾಡಿ ಹಿಂದುಗಳು ಸಹಿಷ್ಣುಗಳು  ಹಾಗಂತ ಸರಣಿಯಾಗಿ ಹಿಂದುಗಳ  ಹತ್ಯೆಯಾಗುತ್ತಿದ್ದರೆ ಅದನ್ನು ಎಂದಿಗೂ ಹಿಂದೂ ಸಮಾಜ ಸಹಿಸುವುದಿಲ್ಲ. ಮುಸ್ಲಿಂ ಮೂಲಭೂತ ಸಂಘಟನೆಗಳು ಸಮಾಜಕ್ಕೆ ಮಾರಕವಾದಂತಹವು ಕೂಡಲೇ ಈ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇದಿಸಬೇಕೆಂದು ನುಡಿದರು.  ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಲಿಂಗರಾಜು ಮಾತನಾಡಿ  ಹಿಂದು ಸ್ಥಾನದಲ್ಲಿ ಹಿಂದುವಿಗೆ ಬೆಲೆ ಇಲ್ಲದಂತಾಗಿದೆ. ಈ ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದು ಮುಂದಿನ ದಿನಗಳಲ್ಲಿ ಇದೇ ಸರ್ಕಾರಕ್ಕೆ ಮಾರಕವಾಗುವುದರಲ್ಲಿ ಅನುಮಾನವಿಲ್ಲ ಎಂದು ನುಡಿದರು.  ಬಿಜೆಪಿ ಮುಖಂಡ ಕೆ.ಟಿ.ವೆಂಕಟೇಶ್ ಮಾತನಾಡಿ ಈ ರಾಜ್ಯ ಸರ್ಕಾರಕ್ಕೆ ಕೊನೆಗಾಲ ಸಮೀಪಿಸುತ್ತಿದ್ದು ಮುಂದಿನ ಸರ್ಕಾರ ಬಿಜೆಪಿಯದ್ದೇ ಎಂದು ನುಡಿದರು.  ಸಭೆಯಲ್ಲಿ ಹೋಬಳಿ ಅಧ್ಯಕ್ಷ ಕೆ.ಕೆ ವೆಂಕಟೇಶ್ ಬಿಜೆಪಿ ಮುಖಂಡ ಪ್ರಭಾಕರ್ ಪ್ರಣಸ್ವಿ. ವಕ್ತಾರ ಜಗದೀಶ್ಚಂದ್ರ. ಖಾಂಡ್ಯ ಹೋಬಳಿ ಅಧ್ಯಕ್ಷ ರವಿ. ಯುವಮೋರ್ಚಾ ಅಧ್ಯಕ್ಷ ರಚನ್ ಹುಯಿಗೆರೆ. ತಾಲ್ಲೂಕ್ ಪಂಚಾಯಿತಿ ಉಪಾಧ್ಯಕ್ಷ ಮಂಜು ಹೊಳೆಬಾಗಿಲು.  ಖಾಂಡ್ಯ ಹೋಬಳಿಯ ಚಂದ್ರು.  ನಿತ್ಯಾನಂದ. ಪಾರ್ವತಮ್ಮ  ಮುಖಂಡರುಗಳು ಉಪಸ್ಥಿತರಿದ್ದರು.

Tuesday, 5 September 2017

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಯೊಬ್ಬರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂಕೆ ಗಣಪತಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಗಣಪತಿ ಅವರ ತಂದೆ ಎಂ.ಕೆ. ಕುಶಾಲಪ್ಪ ಹಾಗೂ ಸಹೋದರ ಮಾಚಯ್ಯ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಪೀಠ ಸಿಬಿಐ ತನಿಖೆಗೆ ಆದೇಶಿಸಿದೆ.
ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ಅವರ ವಿಚಾರಣೆ ನಡೆಸಿ ಮೂರು ತಿಂಗಳಿನೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿದೆ.

ಈ ಹಿಂದೆ ಸಿಬಿಐ ತನಿಖೆಗೆ ಒಪ್ಪಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಎಂ.ಕೆ. ಕುಶಾಲಪ್ಪ ಅವರು ಸಿಬಿಐ ತನಿಖೆ ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ವಿಡಿಯೋ ಸಾಕ್ಷ್ಯವಿದ್ದರೂ ಯಾವುದೇ ಕ್ರಮ ಜರುಗಿಸುವಲ್ಲಿ ಕರ್ನಾಟಕ ಸರ್ಕಾರ, ತನಿಖಾ ತಂಡ ವಿಫಲವಾಗಿದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕುಶಾಲಪ್ಪ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಷ್ಕರಿಸಿದೆ.
ಎಂ.ಕೆ.ಗಣಪತಿ ಅವರು ಕಳೆದ ವರ್ಷ ಜುಲೈ 7ರಂದು ಮಡಿಕೇರಿ ವಿನಾಯಕ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ನೇಣಿಗೆ ಶರಣಾಗುವ ಮುನ್ನ ನನ್ನ ಸಾವಿಗೆ ಹಿಂದಿನ ಗೃಹಸಚಿವ ಕೆ.ಜೆ. ಜಾರ್ಜ್, ಐಜಿಪಿ ಪ್ರಣವ್ ಮೊಹಂತಿ, ಎಡಿಜಿಪಿ ಎಎಂ ಪ್ರಸಾದ್ ಕಾರಣ ಎಂದು ಆರೋಪಿಸಿದ್ದರು.
ಸಾವಿಗೂ ಮುನ್ನ ಗಣಪತಿ ಅವರು ನೀಡಿದ್ದ ಹೇಳಿಕೆ ರಾಜಕೀಯ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಅಲ್ಲದೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಾರ್ಜ್ ಅವರಿಂದ ರಾಜಿನಾಮೆಯನ್ನು ಪಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಈ ಮೂವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ, ಬಿ ರಿಪೋರ್ಟ್ ಸಲ್ಲಿಸಿದೆ.

Thursday, 31 August 2017

ಬಾಳೆಹೊನ್ನೂರಿಗೆ  ಬಿಜೆಪಿ ಯಿಂದ 8  ಕೋಟಿ ರಸ್ತೆ...

                         ಉದ್ದೇಶಿತ ರಸ್ತೆಯ ನೀಲನಕ್ಷೆ

ಬಾಳೆಹೊನ್ನೂರು ಜಿಲ್ಲೆಯ ಬಹುದೊಡ್ಡಗ್ರಾಮ ಪಂಚಾಯಿತಿ. ಈ ಊರಿಗೆ ಸಂಪರ್ಕಕ್ಕೆ ಇರುವ ಎಲ್ಲಾ ಮುಖ್ಯ ರಸ್ತೆಗಳನ್ನು ಕಳೆದ 5 ವರ್ಷದ ಹಿಂದೆಯೇ ಜೀವರಾಜ್ ಸುಸಜ್ಜಿತವಾಗಿ ನಿರ್ಮಿಸಿದ್ದಾರೆ ಆದರೇ 11 ವಾರ್ಡ್ ಗಳ ಎಲ್ಲಾ ಸಣ್ಣ ರಸ್ತೆಗಳು ಗುಂಡಿಬಿದ್ದು ಪಾಳುಬಿದ್ದಂತಾಗಿದ್ದನ್ನು ಮನಗಂಡ ಸ್ಥಳಿಯ ಬಿಜೆಪಿ ಮುಖಂಡರು ಈ ಹಿಂದೆ  ಜೀವರಾಜ್ ರವರಿಗೆ ಮನವಿಸಲ್ಲಿಸಿದರು ಇದರ ಸತ್ಯಾಸತ್ಯತೆ ಮತ್ತು ಜನತೆಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಜೀವರಾಜ್ ಕೋಟ್ಯಾಂತರ ರೂ ವೆಚ್ಚದಲ್ಲಿ ಬಾಳೆಹೊನ್ನೂರಿನ ಮುಖ್ಯರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದರು. ನಂತರ ಹಲಸೂರು ರಸ್ತೆಗೆ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಿದರು ನಂತರ ಬಾಳೆಹೊನ್ನೂರಿನ ಹಲವು ವಾರ್ಡ್ ಗಳಲ್ಲಿ ದಲಿತರು ಹೆಚ್ಚಾಗಿ ಇರುವಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಈಗ ಬಾಳೆಹೊನ್ನೂರಿನ ಬಹುಪುರಾತನವಾದ ಡೋಬಿಹಳ್ಳಕ್ಕೆ  ಆಧುನಿಕ ಸೇತುವೆ ಹಾಗೂ ಬಾಳೆಹೊನ್ನೂರಿನಿಂದ ಚೌಡೇಶ್ವರಿ ದೇವಸ್ಥಾನದವರೆಗೆ  ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮಂತ್ರಿಗಳಾದ ಸನ್ಮಾನ್ಯ ನಿತಿನ್ ಗಡ್ಕರಿಯವರೊಂದಿಗೆ ಸಮಾಲೋಚಿಸಿ  ಕೇಂದ್ರದ ಸಿ.ಆರ್.ಎಪ್ ಸೆಂಟ್ರಲ್ ರೋಡ್ ಪಂಡ್ ಅಡಿ ಈಗ 8 ಕೋಟಿ ಅನುದಾನವನ್ನು ತಂದು ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವುದೆಂದು ತಿಳಿಸಿದ್ದಾರೆ.

                        ದೋಬಿಹಳ್ಳದ ನೀಲ ನಕ್ಷೆ.
ಇಂದು ಈ ಕಾಮಗಾರಿಗೆ ಪೂರ್ವಭಾವಿಯಾಗಿ ಸಂಭಂದ ಪಟ್ಟ ಎಂಜಿನಿಯರ್ ಗಳು ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್. ಬಿಜೆಪಿ ಧುರೀಣ ಕಲ್ಮಕ್ಕಿ ಉಮೇಶ್ ಮತ್ತು ಬಿಜೆಪಿ ಜಿಲ್ಲಾ ಮುಖಂಡ ಪ್ರಭಾಕರ್ ಪ್ರಣಸ್ವಿ. ವಕ್ತಾರ ಜಗದೀಶ್ಚಂದ್ರ. ತಾಲ್ಲೂಕ್ ಪಂಚಾಯಿತಿ ಉಪಾಧ್ಯಕ್ಷ ಮಂಜು ಹೊಳೆಬಾಗಿಲು ಇವರೊಂದಿಗೆ ಚರ್ಚಿಸಿ ಸರ್ವೇ ಕಾರ್ಯ ನೆರೆವೇರಿಸಿದರು.

ಬಿಜೆಪಿ ಮುಖಂಡರೊಂದಿಗೆ ಎಂಜಿನಿಯರ್ ಗಳ ಸರ್ವೆ ಕಾರ್ಯ


ಈ ಸಂಧರ್ಭದಲ್ಲಿ  ಶೃಉಂಗೇರಿ ಕ್ಷೇತ್ರ ಬ್ಲಾಗ್ ನೊಂದಿಗೆ ಮಾತನಾಡಿದ ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಜೀವರಾಜ್ ರವರ ಶ್ರಮದಿಂದಾಗಿ ಬಾಳೆಹೊನ್ನೂರು ಆಧುನೀಕರಣವಾಗುತ್ತಿದೆ  ಜೀವರಾಜ್ ರವರ ಶ್ರಮಕ್ಕೆ ಬಾಳೆಹೊನ್ನೂರಿನ ಜನತೆ ಮುಂದಿನ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಬೆಂಬಲಿಸಿಯೇ ಬೆಂಬಲಿಸುತ್ತಾರೆ ಆ ಬಗ್ಗೆ ಅನುಮಾನ ಬೇಡ. ಬಾಳೆಹೊನ್ನೂರು ಅಭಿವೃದ್ಧಿಗಾಗಿ ಜೀವರಾಜ್ ರವರನ್ನು ಬೆಂಬಲಿಸಬೇಕಾಗಿದೆ ಇಷ್ಟೋದು ದೊಡ್ಡಮೊತ್ತದ ಅನುದಾನವನ್ನು ಬಾಳೆಹೊನ್ನೂರಿಗೆ ನೀಡಿದ್ದಕ್ಕಾಗಿ ಜನತೆಯ ಪರವಾಗಿ ಜೀವರಾಜ್ ರವರನ್ನು ಅಭಿನಂದಿಸಿದರು.
ಬಿಜೆಪಿ ಧುರೀಣ ಕಲ್ಮಕ್ಕಿ ಉಮೇಶ್ ಮಾತನಾಡಿ ಅಭಿವೃದ್ಧಿ ಹೇಗೆ ಮಾಡಬೇಕೆಂದು ಜೀವರಾಜ್ ರವರನ್ನು ನೋಡಿ ಕಲಿಯಬೇಕು ಮುಂದಿನ ಚುನಾವಣೆಯಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅತಿಹೆಚ್ಚು ಮತಗಳ ಮುನ್ನಡೆಯನ್ನು ಬಾಳೆಹೊನ್ನೂರಿನ ಜನತೆ ಜೀವರಾಜ್ ರವರಿಗೆ ನೀಡುತ್ತಾರೆ. ನಮ್ಮ ಮುಂದಿನ ಗುರಿ ಅಭಿವೃದ್ಧಿಗಾಗಿ ಪಂಚಾಯ್ತಿಯನ್ನು ಕಾಯದೇ ಜೀವರಾಜ್ ರವರ ಅನುಧಾನದಲ್ಲೇ ಬಾಳೆಹೊನ್ನೂರನ್ನು ಇನ್ನೂ ಅಭಿವೃದ್ಧಿಪಡಿಸುತ್ತೇವೆ. ಈ ಕಾಮಗರಿ ಮುಗಿದ ನಂತರ ಬಾಳೆಹೊನ್ನೂರಿನ ಬಹುದೊಡ್ಡ ಕಾಮಗಾರಿಯಾದ ಬಾಳೆಹೊನ್ನೂರಿನ ಭದ್ರಾನಧಿಯ ಮುಖ್ಯ ಸೇತುವೆ ಹಾಗೂ ಪ್ರಧಾನ ಮಂತ್ರಿ ಜನೌಷದ ಕೇಂದ್ರ ಆರಂಭಿಸುವ ಬಗ್ಗೆ ಬಿಜೆಪಿ ಗಮನ ಹರಿಸುತ್ತದೆ ಎಂದು ನುಡಿದರು.
ಈ ಕಾಮಗಾರಿ ಶೀಘ್ರವಾಗಿ ಮುಗಿದು ಜನಸೇವೆಗೆ ಅರ್ಪಣೆಯಾಗಲಿದೆ ಎಂದು ನುಡಿದರಲ್ಲದೇ ಈ ಕಾಮಗಾರಿಯನ್ನು ನಾವೇ ಮಾಡಿಸಿದ್ದು ಎಂದು ಹೇಳಿಕೊಂಡು ಕೆಲ ಕಾಂಗ್ರೇಸ್ ಮುಖಂಡರುಜನರೆದುರು ಪೋಸ್ ಕೊಡಲು ಬರಬಹುದೆಂದು ಕಾಂಗ್ರೇಸಿಗರನ್ನು ಲೇವಡಿ ಮಾಡಿದರು

Wednesday, 30 August 2017

ಕಾಂಗ್ರೇಸ್ ತೊರೆದು ಬಿಜೆಪಿಗೆ ಸೇರ್ಪಡೆ.

ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿಯ ಸರಿಸುಮಾರು 13 ಜನ ಕಾಂಗ್ರೇಸ್ ಮುಖಂಡರು ಸ್ಥಳಿಯ ಕಾಂಗ್ರೆಸ್ ಮುಖಂಡರ ಜಾತಿ ರಾಜಕೀಯ. ಅಭಿವೃದ್ಧಿ ಕಾರ್ಯಗಳಲ್ಲಿ ಅಡ್ಡಗಾಲು ಹಾಕುವುದು,  ಸ್ಥಳಿಯ ಕೆಳ ವರ್ಗದ ಜನರನ್ನು  ನೇಪಥ್ಯಕ್ಕೆ ಮಾತ್ರ ಬಳಸಿಕೊಳ್ಳುವುದನ್ನು ವಿರೋದಿಸಿ ಮಾನ್ಯ ಶಾಸಕರಾದ ಡಿ.ಎನ್.ಜೀವರಾಜ್ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮುಂದೆಯೂ ಅವರೇ ಶಾಸಕರಾಗಿ ಮಂತ್ರಿಗಳು ಆಗಲಿ ಎಂಬ ಅಭಿಲಾಷೆಯಿಂದ ಅವರ ಕೈ ಬಲಪಡಿಸಲು ಬಿಜೆಪಿ ಪಕ್ಷಕ್ಕೆ ಕೊಪ್ಪದ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಡಿ.ಎನ್.ಜೀವರಾಜ್ ಸಮ್ಮುಖದಲ್ಲಿ  ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಬ್ಲಾಗ್ ನೊಂದಿಗೆ ಮಾತನಾಡಿದ ಜೀವರಾಜ್ ಕ್ಷೇತ್ರದಲ್ಲಿ ಹೊಸ ಮನ್ವಂತರದ ಗಾಳಿ ಬೀಸುತ್ತಿದ್ದು ನನಗೆ ನನ್ನ ಮೊದಲ ಗೆಲುವಿನ ಚುನಾವಣೆಯ ಕೆಲ ನೆನಪುಗಳು ಮರುಕಳಿಸುತ್ತಲಿದೆ. ಕ್ಷೇತ್ರದ ಮತದಾರರು ಈ ಹಿಂದಿಗಿಂತಲೂ ಪ್ರಭುದ್ಧರಾಗಿದ್ದು ಅವರು ದಿನ ನಿತ್ಯದ ಚಟುವಟಿಕೆಗಳನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾನೆ.
ಕಾಂಗ್ರೇಸ್ ಒಡೆದ ಮನೆಯಂತಾಗಿದ್ದು ಅದು ಎಲ್ಲಿಯವರೆಗೂ ಅವರ ಕಾರ್ಯಕರ್ತರನ್ನು ಜೀತದವರಂತೆ ನೆಡೆಸಿಕೊಂಡು ಬರುತ್ತದೆಯೋ ಅಲ್ಲಿಯವರೆಗೂ ಆ ಪಕ್ಷಕ್ಕೆ ಶೃಂಗೇರಿಯಲ್ಲಿ ನೆಲೆ ಇಲ್ಲ ಅಲ್ಲದೇ ಈಗಾಗಲೇ ಕ್ಷೇತ್ರದ ಜನತೆ ಒಂದು ಚುನಾವಣೆಯಲ್ಲಿ ಗೆಲ್ಲದೇ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಇನ್ನೂ ಗೆದ್ದರೆ ಇನ್ನೆಷ್ಟು ಸುಳ್ಳು ಹೇಳಬಹುದು ಎಂದು ಆಲೋಚಿಸುತ್ತಿದ್ದಾರೆ ಹಾಗಾಗಿ ಕಾಂಗ್ರೇಸ್ ನ ದುಡ್ಡಿನ ಮದ ಈ ಬಾರಿ ಕರಗೇ ಕರಗುತ್ತದೆ ಎಂದು ನುಡಿದರು.
ನಿಮಗೆ ಬಿಜೆಪಿ ಟಿಕೇಟ್ ಸಿಗುವುದಿಲ್ಲವಂತೆ ಎಂದು ಕಾಂಗ್ರೇಸ್ ನವರು ಅಪಪ್ರಚಾರ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜೀವರಾಜ್ ನಾನು ಜನರ ನನ್ನ ಕಾರ್ಯಕರ್ತರ ನನ್ನ ಪಕ್ಷದ  ನಿಷ್ಠಾವಂತ  ಬಿಜೆಪಿ ಕಾರ್ಯಕರ್ತ ನನ್ನ ಪಕ್ಷ ನನ್ನ ಜನರು ಏನು ಹೇಳುತ್ತಾರೋ ಅದನ್ನು ಮಾಡಲು ನಾನು ಸಿದ್ಧ.. ಅದು ಬಿಟ್ಟು ಕಾಂಗ್ರೇಸ್ ಪುಡಾರಿಗಳ ಮಾತುಗಳು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ  ಸೋಲಿನ ಭಯ ಕಾಂಗ್ರೇಸನ್ನು ಆವರಿಸಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ನರಾಪುರ ಮಂಡಲ ಅಧ್ಯಕ್ಷ ವೆನಿಲ್ಲಾ ಭಾಸ್ಕರ್. ಕೊಪ್ಪ ಮಂಡಲ ಅಧ್ಯಕ್ಷ ಮಹಬಲರಾವ್.. ಶೃಂಗೇರಿ ಮಂಡಲ ಅಧ್ಯಕ್ಷ ನಟೇಶ್ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ.  ಕ್ಷೇತ್ರ ಸಂಘಟನ ಕಾರ್ಯದರ್ಶಿ ಗಣೇಶ್ ರಾವ್ ಉಪಸ್ಥಿತರಿದ್ದರು.
ಸೆಪ್ಟಂಬರ್ 3 ಕ್ಕೆ ಶ್ರೀ ಆನಂದಗುರೂಜಿ ಬಾಳೆಹೊನ್ನೂರಿಗೆ



ದಿನಾಂಕ 3-9-2017 ರಂದು ಬಾಳೆಹೊನ್ನೂರಿನ ವಿಧ್ಯಾಗಣಪತಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಹರ್ಶಿ  ಶ್ರೀ ಆನಂದ ಗುರೂಜಿಯವರನ್ನು ಬಾಳೆಹೊನ್ನೂರು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಶ್ರೀ ಕಲ್ಮಕ್ಕಿ ನಾಗೇಶ್ ರವರು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂಧರ್ಭದಲ್ಲಿ ಸಮಿತಿಯ ಮುಖಂಡರು ಆದ ಕಲ್ಮಕ್ಕಿ ಉಮೇಶ್ ಮತ್ತು ಬಾಬಣ್ಣ ಮತ್ತು ಟಿ.ಎಂ.ಯೋಗೇಶ್ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಬ್ಲಾಗ್ ನೊಂದಿಗೆ ಮಾತನಾಡಿದ ಟಿ.ಎಂ. ನಾಗೇಶ್ ಆ ದಿನ ಸಂಜೆ ನಾಲ್ಕು ಗಂಟೆಗೆ ಮಹರ್ಷಿಯವರ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜಾ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರು ರೂ 1000  ನೀಡಿ ತಮ್ಮ ಹೆಸರನ್ನು ನೊಡಾಯಿಸಲು ಸಮಿತಿ ಆಯೋಜಿಸಿದ್ದು ಪೂಜಾ ಕಾರ್ಯದ ಟಿಕೇಟ್ ಗಳು ಸಮಿತಿಯ ಕೌಂಟರ್ ನಲ್ಲಿ ದೊರೆಯುತಿದ್ದು ಇದರ ಸದುಪಯೋಗವನ್ನು ಭಕ್ತಾಭಿಮಾನಿಗಳು ಪಡೆಯಬಹುದಾಗಿದೆ ಎಂದು ತಿಳಿಸಿದರು. ಅಲ್ಲದೇ ದಿನಾಂಕ 4-9-2017  ರಂದು ಬೃಹತ್ ಅನ್ನಧಾನ ಕಾರ್ಯಕ್ರಮ ಆಯೋಜಿಸಿದ್ದು ಅನ್ನಧಾನದ ನಂತರ ಶ್ರೀ ಮಹಾಗಣಪತಿಯ ವಿಸರ್ಜನಾ ಮೆರವಣಿಗೆ ಆಕರ್ಷಕ ಕಲಾತಂಡಗಳ ನೇತೃತ್ವದಲ್ಲಿ ನೆಡೆಯಲಿದ್ದು ಅದೇ ದಿನ ಜೆ.ಸಿ.ಸರ್ಕಲ್ ನಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಟಿ.ಎಂ.ನಾಗೇಶ್ ತಿಳಿಸಿದರು.

Thursday, 10 August 2017

ಬಾಳೆಹೊನ್ನೂರು ಗಣಪತಿ ಉತ್ಸವಕ್ಕೆ ಶ್ರೀ ಆನಂದಗುರೂಜಿ ದಿವ್ಯಸಾನಿಧ್ಯ-ಟಿ.ಎಂ.ನಾಗೇಶ್


ಕರ್ನಾಟಕದಲ್ಲಿಯೇ ಅತ್ಯಂತ ವ್ಯವಸ್ಥಿತ ಹಾಗೂ ಅದ್ದೂರಿಯ ಗಣೇಶೋತ್ಸವ ಎಂಬ ಕೀರ್ತಿಗೆ ಪಾತ್ರವಾಗಿರುವ ಬಾಳೆಹೊನ್ನೂರಿನ ಶ್ರೀ ವಿಧ್ಯಾಗಣಪತಿ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಮಹಾಲಕ್ಷಿಯ ಪೂಜಕರು ಆಗಿರುವ ಶ್ರೀ ಆನಂದಗುರೂಜಿಯವರನ್ನು ಸಮಿತಿಯವತಿಯಿಂದ ಅಧಿಕೃತವಾಗಿ  ಸಮಿತಿಯ ಅಧ್ಯಕ್ಷರಾದ ಟಿ.ಎಂ ನಾಗೇಶ್ ಕಲ್ಮಕ್ಕಿ ರವರ ನೇತೃತ್ವದಲ್ಲಿ  ಆಹ್ವಾನಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಟಿ.ಎಂ.ನಾಗೇಶ್ ಪ್ರತಿಬಾರಿಯಂತೆ ಈ ಬಾರಿಯೂ ಬಾಳೆಹೊನ್ನೂರು ಹಾಗೂ ಸುತ್ತಮುತ್ತಲ ಎಲ್ಲಾ ಗ್ರಾಮಗಳ ನಾಗರೀಕರ ಸಲಹೆ ಸಹಕಾರದೊಂದಿಗೆ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದೆಂದು ತಿಳಿಸಿದರು.
ಈ ಸಂಧರ್ಭದಲ್ಲಿ  ಮುಖಂಡರಾದ ಟಿ.ಎಂ.ಉಮೇಶ್,  ಸೇವಾಸಮಿತಿಯ ತ್ರಿವಿಕ್ರಮ್ ಭಟ್, ಎಸಿಎಪ್ ಶಂಕರ್ ರವರು, ಹಿರಿಯಣ್ಣ, ಸುರೇಂದ್ರ ಮಾಸ್ಟರ್, ಚಂದ್ರೇಗೌಡರು ಉಪಸ್ಥಿತರಿದ್ದರು.