ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ನಕ್ಸಲರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಗೌರಿ ಲಂಕೇಶ್ ಅವರು ರಾಜ್ಯ ನಕ್ಸಲರ ಶರಣಾಗತಿ ಸಮಿತಿಯ ಸದಸ್ಯೆಯಾಗಿದ್ದರು. ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ನಕ್ಸಲರಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಳೆದ 2 ವರ್ಷಗಳಿಂದ ನಕ್ಸಲರು ಹಗೆ ಇಟ್ಟುಕೊಂಡಿದ್ರು ಎಂಬ ಮಾಹಿತಿ ಇದೆ. ನಕ್ಸಲರ ಒಂದು ತಂಡ ಗೌರಿ ಲಂಕೇಶ್ ಮೇಲೆ ದ್ವೇಷ ಸಾಧಿಸುತ್ತಿತ್ತು ಎಂದು ಹೇಳಲಾಗಿದೆ. ಹೀಗಾಗಿ ನಕ್ಸಲರೇ ಗೌರಿ ಲಂಕೇಶ್‍ರನ್ನು ಟಾರ್ಗೆಟ್ ಮಾಡಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದೂವರೆ ದಶಕದಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಕನ್ಯಾಕುಮಾರಿ ಹಾಗೂ ರಾಯಚೂರು ಮೂಲದ ಶಿವು ಮತ್ತು ಚಿನ್ನಮ್ಮ ಮೂರು ತಿಂಗಳ ಹಿಂದೆ ಶರಣಾಗಿ ಮುಖ್ಯವಾಹಿನಿಗೆ ಬರುವುದಾಗಿ ತಿಳಿಸಿದ್ದರು. ಹಿರಿಯ ವಕೀಲ ಎ.ಕೆ ಸುಬ್ಬಯ್ಯ, ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ರಚಿಸಿರೋ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ವೇದಿಕೆ ಮೂಲಕ ಈ ಮೂವರು ನಕ್ಸಲರು ಶರಣಾಗಿದ್ದರು.
ಕೃಪೆ. ಪಬ್ಲಿಕ್ ಟಿವಿ
No comments:
Post a Comment