Friday 16 February 2018

ಜೀವರಾಜ್ ರಸ್ತೆ ಕಾಮಗಾರಿ : ಪೋಲಿಸ್ ಇಲಾಖೆಯ ದಿವ್ಯ ನಿರ್ಲಕ್ಷ. 
ಬಾಳೆಹೊನ್ನೂರಿನ ಜೀವರಾಜ್ ರಸ್ತೆ

ದೇವರು ವರ ಕೊಟ್ಟರು ಪೂಜಾರಿ ಕೊಡ ಎನ್ನುವ ಗಾದೆ ಮಾತಂತೆ ಬಾಳೆಹೊನ್ನೂರಿನ ಹೃದಯ ಭಾಗದಲ್ಲಿ  ಕೇಂದ್ರ ಬಿಜೆಪಿ ಸರ್ಕಾರದ 8ಕೋಟಿ ಅನುದಾನದಲ್ಲಿ ನೆಡೆಯುತ್ತಿರುವ ರಸ್ತೆ ಹಾಗೂ ಡೋಬಿಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ  ಎಷ್ಟು ವೇಗವಾಗಿ ಚಾಲನೆ ಪಡೆಯಿತೋ ಈಗ ಅಷ್ಟೇ ನಿಧಾನಗತಿಯಲ್ಲಿ ಸಾಗುತ್ತಿದೆ.  ಕಾರಣ ವಾಹನಗಳ ಕಿರಿಕಿರಿ.  ಹೌದು ಎರೆಡೂ ಬದಿಯ ರಸ್ತೆಯಲ್ಲಿ ಒಂದು ಬದಿಯ ರಸ್ತೆ ಸಂಪೂರ್ಣ ನಿರ್ಮಾಣಗೊಂಡು  ಇನ್ನೊಂದು ಬದಿಯ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ ಆದರೇ ಬಾಳೆಹೊನ್ನೂರು ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮಾತ್ರ ಕೇವಲ ಇಬ್ಬರು ಮಹಿಳಾ ಹೋಂ ಗಾರ್ಡ್ ಗಳನ್ನು ಅಲ್ಲಿಗೆ ನೇಮಕ ಮಾಡಿ ಸಾರ್ವಜನಿಕರ ಕಷ್ಟಕ್ಕೂ,  ಕಾಮಗಾರಿ ಮಾಡುತ್ತಿರುವವರರಿಗೂ ನನಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.  ಟ್ರಾಪಿಕ್ ಗೆ ಸಂಬಂದಿಸಿದ ಇತರ ವಿಚಾರಗಳಿಗೆ ಕಿವಿಕೊಡುವ ಸಬ್ ಇನ್ಸ್ ಪೆಕ್ಟರ್ ಈ ವಿಚಾರಕ್ಕೆ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನ ಹರಿಸದೇ ಇರುವುದು ನಿಜಕ್ಕೂ ಬಾಳೆಹೊನ್ನೂರಿನ ದುರಂತ.  ಕೂಡಲೇ ಮಾನ್ಯ ಎಸ್. ಪಿ ಅಣ್ಣಾಮಲೈ ಸಾಹೇಬರು ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ನಾಗರೀಕರ ಅಭಿಲಾಷೆಯಾಗಿದೆ.  ಅಲ್ಲದೇ..  ಒಂದು ಭಾಗ ಸಂಪೂರ್ಣ ಕಾಮಗಾರಿ ಮುಗಿದಿದ್ದು ಇನ್ನೊಂದು ಭಾಗದಲ್ಲಿ ಅಲ್ಲಲ್ಲಿ ಕಾಮಗಾರಿ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಕೂಡಲೇ ಏಡಬದಿಯ ಪಥದ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ,  ಅಂಗಡಿ,  ಗ್ಯಾರೇಜ್ ಮಾಲಿಕರಿಗೆ ಈ ಜೀವರಾಜ್ ರಸ್ತೆಯಲ್ಲಿ  ವ್ಯವಹರಿಸಲು ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಇನ್ನೂ ಕಾಮಗಾರಿ ಅತ್ಯುತ್ತಮವಾಗಿ ಸಾಗುತ್ತಿದ್ದು ಕೇವಲ ರಕ್ಷಣೆ ಮತ್ತು ಟ್ರಾಪಿಕ್ ಸಮಸ್ಯೆಯಿಂದ ಕಾಮಾಗಾರಿಯ ವೇಗ ಕುಂಠಿತವಾಗುತ್ತಿರುವುದು ನಿಜಕ್ಕೂ ಖೇದಕರ ಹಾಗೂ ಜೀವರಾಜ್ ಹೆಸರಿಗೆ ಕಳಂಕ ತರುವ ಉದ್ದೇಶ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.ಕೂಡಲೇ ಪೋಲಿಸ್ ಇಲಾಖೆ ಈ ಮಾರ್ಗದಲ್ಲಿ ಕಾಮಗಾರಿ ಮುಗಿಯುವವರೆಗೂ ದ್ವಿಚಕ್ರ ವಾಹನ ಹೊರತು ಪಡಿಸಿ ಬೇರೆ ಯಾವುದೇ ವಾಹನ ಬಿಡದೇ ಆದಷ್ಟು ಬೇಗನೆ ಈ ರಸ್ತೆ  ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವಂತೆ ಈಸಂಬಂದಪಟ್ಟವರು ಗಮನಿಸ ತಕ್ಕದ್ದು.

No comments:

Post a Comment