ಜೀವರಾಜ್ ಗೆಲುವು ಶತಸಿದ್ಧ: ನವಶಕ್ತಿ ಸಮಾವೇಶದಲ್ಲಿ ಸಂತೋಷ್ ಜೀ.
ಶೃಂಗೇರಿ ಕ್ಷೇತ್ರಮಟ್ಟದ ಪ್ರತಿ ಬೂತ್ ನ 9 ಜನರ ತಂಡದ ಸಮಾವೇಶ ನ.ರಾ.ಪುರದ ಕರಿಬಸವೇಶ್ವರ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿತು. ಸಮಾವೇಶದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಜೀ ರವರು ಭಾರತೀಯ ಜನತಾ ಪಕ್ಷದ ಸಂಘಟನೆಯ ಸಮಾವೇಶವನ್ನು ಇನ್ನೂ ಹತ್ತು ಜನ್ಮ ಎತ್ತಿದರೂ ಕಾಂಗ್ರೇಸ್ ನವರು ಮಾಡಲು ಸಾದ್ಯವಿಲ್ಲ. ಕಾರಣ ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಪಕ್ಷ. ಈ ನವಶಕ್ತಿ ಸಮಾವೇಶ ಪಕ್ಷದ ಬಲಾ ಬಲವನ್ನು ಅಳೆಯುವ ಸಾಧನವಾಗಿದ್ದು ಇನ್ನು ಮುಂಬರುವ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸದೃಡವನ್ನಾಗಿ ಜನರಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದರು. ಬಿಜೆಪಿಯ ಹಲವಾರು ಕಾರ್ಯಕ್ರಮಗಳನ್ನು ಕಾಂಗ್ರೇಸ್ ನವರು ಕಾಪಿ ಮಾಡಿದ್ದಾರೆ ಪರ್ವಾಗಿಲ್ಲ ಬಿಜೆಪಿ ದೇಶದ ಅಭಿವೃದ್ಧಿಗೋಸ್ಕರ ಮಾಡಿದರೇ ಉಳಿದ ಪಕ್ಷದವರು ವೈಯುಕ್ತಿಕ ಹಿತಾಸಕ್ತಿಗೋಸ್ಕರ ಮಾಡುತ್ತಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ತಲೆ ತಗ್ಗಿಸಿ ಮತಕೇಳುವ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಜೀವರಾಜ್ ಅಷ್ಟು ಸದೃಡವಾಗಿ ಪಕ್ಷವನ್ನು ಸಂಘಟಿಸಿದ್ದಾರೆ ಅಲ್ಲದೇ ಅಷ್ಟೇ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಇನ್ನೂ ಸಿದ್ದರಾಮಯ್ಯನ ಬಜೆಟ್ ಮೇಲೆ ವಾಗ್ದಾಳಿ ನೆಡೆಸಿದ ಅವರು ಯಾವ ರೈತ ಸಾಲಬಾದೆಯಿಂದ ಸಾಯುತ್ತಾನೋ ಆತನ ಸಾಲ ಮನ್ನಾ ಮಾಡುವ ನಿರ್ಧಾರ ನಿಜಕ್ಕೂ ಆತಂಕಕಾರಿ ಬೆಳವಣಿಗೆ ಈ ನಿರ್ಧಾರ ಇನ್ನಷ್ಟು ರೈತರು ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸುವಂತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಬಾರಿ ಸಿದ್ದರಾಮಯ್ಯನವರ ದುರಾಡಳಿತವೇ ಚುನಾವಣ ವಿಚಾರವಾಗಿದ್ದು ಈ ಕಾಂಗ್ರೇಸ್ ಸರ್ಕಾರದ ಅವದಿಯಲ್ಲಿ 3015 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ರೈತವಿರೋದಿ ಸರ್ಕಾರ. ಕರ್ನಾಟಕದ ಚಳುವಳಿಗಾರರು ಮಾರಾಟವಾದಂತ ಕೆಟ್ಟ ಸರ್ಕಾರ. ಜಗತ್ತಿನಲ್ಲಿ ಬಾನುವಾರ ಬಂದ್ ಕರೆದಂತ ನೀತಿಗೆಟ್ಟ ಸರ್ಕಾರವೇನಿದ್ದರು ಅದು ಈ ಸಿದ್ದರಾಮಯ್ಯನ ಸರ್ಕಾರ. ಹಾಗಾಗಿ ಜೀವರಾಜ್ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಗ್ರಾಪ್ ಏರುತ್ತಲಿದೆ ಅದು ಚುನಾವಣೆಯಲ್ಲಿ ಗೆಲುವಿನ ರೂಪವಾಗಿ ಹೊರ ಹೊಮ್ಮಿ ಜೀವರಾಜ್ ತಮ್ಮ ನಾಲ್ಕನೆ ಗೆಲುವು ಸಾಧಿಸಲಿದ್ದಾರೆ ಎಂದು ನುಡಿದರು.
ಸಮಾವೇಶದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್ ಜೀವರಾಜ್. ಸಂಘಟನಾ ಕಾರ್ಯದರ್ಶಿ ಗಣೇಶ್ ರಾವ್, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ಮುಖಂಡರಾದ ಬಾಸ್ಕರ್ ವೆನಿಲ್ಲಾ, ಮಹಾಬಲ ರಾವ್, ನಟೇಶ್ ಶೃಂಗೇರಿ, ಕಲ್ಮಕ್ಕಿ ಉಮೇಶ್, ಪುಣ್ಯಪಾಲ್, ಕವಿತಾ ಲಿಂಗರಾಜು, ಶಿಲ್ಪ ರವಿ, ಪಾರ್ವತಮ್ಮ, ಪಿ.ಜೆ.ಆಂಟೋನಿ, ಕೆಸುವೆ ಮಂಜು, ಗೋಪಾಲ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

No comments:
Post a Comment