ಬಾಳೆಹೊನ್ನೂರಿಗೆ ಬಿಜೆಪಿ ಯಿಂದ 8 ಕೋಟಿ ರಸ್ತೆ...
ಉದ್ದೇಶಿತ ರಸ್ತೆಯ ನೀಲನಕ್ಷೆ
ಬಾಳೆಹೊನ್ನೂರು ಜಿಲ್ಲೆಯ ಬಹುದೊಡ್ಡಗ್ರಾಮ ಪಂಚಾಯಿತಿ. ಈ ಊರಿಗೆ ಸಂಪರ್ಕಕ್ಕೆ ಇರುವ ಎಲ್ಲಾ ಮುಖ್ಯ ರಸ್ತೆಗಳನ್ನು ಕಳೆದ 5 ವರ್ಷದ ಹಿಂದೆಯೇ ಜೀವರಾಜ್ ಸುಸಜ್ಜಿತವಾಗಿ ನಿರ್ಮಿಸಿದ್ದಾರೆ ಆದರೇ 11 ವಾರ್ಡ್ ಗಳ ಎಲ್ಲಾ ಸಣ್ಣ ರಸ್ತೆಗಳು ಗುಂಡಿಬಿದ್ದು ಪಾಳುಬಿದ್ದಂತಾಗಿದ್ದನ್ನು ಮನಗಂಡ ಸ್ಥಳಿಯ ಬಿಜೆಪಿ ಮುಖಂಡರು ಈ ಹಿಂದೆ ಜೀವರಾಜ್ ರವರಿಗೆ ಮನವಿಸಲ್ಲಿಸಿದರು ಇದರ ಸತ್ಯಾಸತ್ಯತೆ ಮತ್ತು ಜನತೆಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಜೀವರಾಜ್ ಕೋಟ್ಯಾಂತರ ರೂ ವೆಚ್ಚದಲ್ಲಿ ಬಾಳೆಹೊನ್ನೂರಿನ ಮುಖ್ಯರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದರು. ನಂತರ ಹಲಸೂರು ರಸ್ತೆಗೆ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಿದರು ನಂತರ ಬಾಳೆಹೊನ್ನೂರಿನ ಹಲವು ವಾರ್ಡ್ ಗಳಲ್ಲಿ ದಲಿತರು ಹೆಚ್ಚಾಗಿ ಇರುವಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಈಗ ಬಾಳೆಹೊನ್ನೂರಿನ ಬಹುಪುರಾತನವಾದ ಡೋಬಿಹಳ್ಳಕ್ಕೆ ಆಧುನಿಕ ಸೇತುವೆ ಹಾಗೂ ಬಾಳೆಹೊನ್ನೂರಿನಿಂದ ಚೌಡೇಶ್ವರಿ ದೇವಸ್ಥಾನದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮಂತ್ರಿಗಳಾದ ಸನ್ಮಾನ್ಯ ನಿತಿನ್ ಗಡ್ಕರಿಯವರೊಂದಿಗೆ ಸಮಾಲೋಚಿಸಿ ಕೇಂದ್ರದ ಸಿ.ಆರ್.ಎಪ್ ಸೆಂಟ್ರಲ್ ರೋಡ್ ಪಂಡ್ ಅಡಿ ಈಗ 8 ಕೋಟಿ ಅನುದಾನವನ್ನು ತಂದು ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವುದೆಂದು ತಿಳಿಸಿದ್ದಾರೆ.
ದೋಬಿಹಳ್ಳದ ನೀಲ ನಕ್ಷೆ.
ಇಂದು ಈ ಕಾಮಗಾರಿಗೆ ಪೂರ್ವಭಾವಿಯಾಗಿ ಸಂಭಂದ ಪಟ್ಟ ಎಂಜಿನಿಯರ್ ಗಳು ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್. ಬಿಜೆಪಿ ಧುರೀಣ ಕಲ್ಮಕ್ಕಿ ಉಮೇಶ್ ಮತ್ತು ಬಿಜೆಪಿ ಜಿಲ್ಲಾ ಮುಖಂಡ ಪ್ರಭಾಕರ್ ಪ್ರಣಸ್ವಿ. ವಕ್ತಾರ ಜಗದೀಶ್ಚಂದ್ರ. ತಾಲ್ಲೂಕ್ ಪಂಚಾಯಿತಿ ಉಪಾಧ್ಯಕ್ಷ ಮಂಜು ಹೊಳೆಬಾಗಿಲು ಇವರೊಂದಿಗೆ ಚರ್ಚಿಸಿ ಸರ್ವೇ ಕಾರ್ಯ ನೆರೆವೇರಿಸಿದರು.
ಬಿಜೆಪಿ ಮುಖಂಡರೊಂದಿಗೆ ಎಂಜಿನಿಯರ್ ಗಳ ಸರ್ವೆ ಕಾರ್ಯ
ಈ ಸಂಧರ್ಭದಲ್ಲಿ ಶೃಉಂಗೇರಿ ಕ್ಷೇತ್ರ ಬ್ಲಾಗ್ ನೊಂದಿಗೆ ಮಾತನಾಡಿದ ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಜೀವರಾಜ್ ರವರ ಶ್ರಮದಿಂದಾಗಿ ಬಾಳೆಹೊನ್ನೂರು ಆಧುನೀಕರಣವಾಗುತ್ತಿದೆ ಜೀವರಾಜ್ ರವರ ಶ್ರಮಕ್ಕೆ ಬಾಳೆಹೊನ್ನೂರಿನ ಜನತೆ ಮುಂದಿನ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಬೆಂಬಲಿಸಿಯೇ ಬೆಂಬಲಿಸುತ್ತಾರೆ ಆ ಬಗ್ಗೆ ಅನುಮಾನ ಬೇಡ. ಬಾಳೆಹೊನ್ನೂರು ಅಭಿವೃದ್ಧಿಗಾಗಿ ಜೀವರಾಜ್ ರವರನ್ನು ಬೆಂಬಲಿಸಬೇಕಾಗಿದೆ ಇಷ್ಟೋದು ದೊಡ್ಡಮೊತ್ತದ ಅನುದಾನವನ್ನು ಬಾಳೆಹೊನ್ನೂರಿಗೆ ನೀಡಿದ್ದಕ್ಕಾಗಿ ಜನತೆಯ ಪರವಾಗಿ ಜೀವರಾಜ್ ರವರನ್ನು ಅಭಿನಂದಿಸಿದರು.
ಬಿಜೆಪಿ ಧುರೀಣ ಕಲ್ಮಕ್ಕಿ ಉಮೇಶ್ ಮಾತನಾಡಿ ಅಭಿವೃದ್ಧಿ ಹೇಗೆ ಮಾಡಬೇಕೆಂದು ಜೀವರಾಜ್ ರವರನ್ನು ನೋಡಿ ಕಲಿಯಬೇಕು ಮುಂದಿನ ಚುನಾವಣೆಯಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅತಿಹೆಚ್ಚು ಮತಗಳ ಮುನ್ನಡೆಯನ್ನು ಬಾಳೆಹೊನ್ನೂರಿನ ಜನತೆ ಜೀವರಾಜ್ ರವರಿಗೆ ನೀಡುತ್ತಾರೆ. ನಮ್ಮ ಮುಂದಿನ ಗುರಿ ಅಭಿವೃದ್ಧಿಗಾಗಿ ಪಂಚಾಯ್ತಿಯನ್ನು ಕಾಯದೇ ಜೀವರಾಜ್ ರವರ ಅನುಧಾನದಲ್ಲೇ ಬಾಳೆಹೊನ್ನೂರನ್ನು ಇನ್ನೂ ಅಭಿವೃದ್ಧಿಪಡಿಸುತ್ತೇವೆ. ಈ ಕಾಮಗರಿ ಮುಗಿದ ನಂತರ ಬಾಳೆಹೊನ್ನೂರಿನ ಬಹುದೊಡ್ಡ ಕಾಮಗಾರಿಯಾದ ಬಾಳೆಹೊನ್ನೂರಿನ ಭದ್ರಾನಧಿಯ ಮುಖ್ಯ ಸೇತುವೆ ಹಾಗೂ ಪ್ರಧಾನ ಮಂತ್ರಿ ಜನೌಷದ ಕೇಂದ್ರ ಆರಂಭಿಸುವ ಬಗ್ಗೆ ಬಿಜೆಪಿ ಗಮನ ಹರಿಸುತ್ತದೆ ಎಂದು ನುಡಿದರು.
ಈ ಕಾಮಗಾರಿ ಶೀಘ್ರವಾಗಿ ಮುಗಿದು ಜನಸೇವೆಗೆ ಅರ್ಪಣೆಯಾಗಲಿದೆ ಎಂದು ನುಡಿದರಲ್ಲದೇ ಈ ಕಾಮಗಾರಿಯನ್ನು ನಾವೇ ಮಾಡಿಸಿದ್ದು ಎಂದು ಹೇಳಿಕೊಂಡು ಕೆಲ ಕಾಂಗ್ರೇಸ್ ಮುಖಂಡರುಜನರೆದುರು ಪೋಸ್ ಕೊಡಲು ಬರಬಹುದೆಂದು ಕಾಂಗ್ರೇಸಿಗರನ್ನು ಲೇವಡಿ ಮಾಡಿದರು

No comments:
Post a Comment