Friday, 2 June 2017

ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ. 





ಕೊಪ್ಪಳ ಜಿಲ್ಲೆಯ ವ ಕುಷ್ಟಗಿ ತಾಲೂಕಿನ ಮುದೆನೂರು ಪಿಎಚ್ ಸಿಯಲ್ಲಿ ಮಗು ಜನನ.

ಜುಮಲಾಪುರ ಗ್ರಾಮದ ಸಂಗಮ್ಮ ಮತ್ತು ಬೀರಲಿಂಗಪ್ಪ ಬಳೂಟಗಿ ಎಂಬ ದಂಪತಿಗಳಿಗೆ ಜನಿಸಿದೆ ಮಗು.

ಇದು ಅವರಿಗೆ ಮೊದಲ ಮಗು.

ಹುಟ್ಟಿದ ೧೦ ನಿಮಿಷಗಳ ನಂತರ ಈ ಹೆಣ್ಣು ಮಗು ಸಾವು.

ವಿಚಿತ್ರ ಮಗು ಕಂಡು ಜನರಲ್ಲಿ ಆಶ್ಚರ್ಯ.

Thursday, 1 June 2017

ಬಾಳೆಹೊನ್ನೂರಿನ ಭದ್ರಾನದಿಗೆ ಕೇಂದ್ರದ ಬಿ.ಜೆ.ಪಿ ಸರ್ಕಾರದಿಂದ ಆಧುನಿಕವಾದ ಬೃಹತ್ ಸೇತುವೆ ನಿರ್ಮಾಣ : ಡಿ.ಎನ್.ಜೀವರಾಜ್ ಘೋಷಣೆ.

              ನೂತನ ಸೇತುವೆಯ ನೀಲಿನಕ್ಷೆ

ಶೃಂಗೇರಿ ಕ್ಷೇತ್ರ ನ್ಯೂಸ್ ಬ್ಲಾಗ್:  ವರದಿ
ಓರ್ವ ರಾಜಕಾರಣಿಗೆ ತನ್ನ ಕ್ಷೇತ್ರವನ್ನು ಹೇಗೆ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಬೇಕೆಂಬುದಕ್ಕೆ ಸ್ಪಷ್ಟವಾದ ಕನಸಿರಬೇಕು , ಆ ಕನಸನ್ನು ನನಸು ಮಾಡುವ ಚಾಕಚಕ್ಯತೆ ಬೇಕು . ಆ  ಗುಣ ರೂಪಿಸಿಕೊಂಡು ಅದನ್ನು ಕಾರ್ಯಗತ ಮಾಡುತ್ತಿರುವವರು ಶಾಸಕ ಜೀವರಾಜ್. ಇದೇ ಕಾರಣಕ್ಕೆ ಜನತೆ ಇವರನ್ನು ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂದು ಕರೆಯುತ್ತಿರುವುದು.



ಈಗಿರುವ ಶಿಥಿಲಗೊಂಡಿರುವ ಸೇತುವೆ.

ಮೇಲಿನ ಪೀಠಿಕೆ ಏಕೆಂದರೇ ಕೇಂದ್ರದ ರಸಗೊಬ್ಬರ ಮತ್ತು ಸಂಸಧೀಯ ವ್ಯವಹಾರಗಳ ಸಚಿವರಾದ ಶ್ರೀ ಅನಂತಕುಮಾರ್ ರವರು ಶೃಂಗೇರಿಯಿಂದ ಹೊರನಾಡುವಿಗೆ ತೆರಳುವ ಮಾರ್ಗ ಮದ್ಯೆ ಬಾಳೆಹೊನ್ನೂರಿನಲ್ಲಿ ಬಿಜೆಪಿ ಮುಖಂಡ ಕಲ್ಮಕ್ಕಿ ಉಮೇಶ್ ನೇತೃತ್ವದಲ್ಲಿ ಎಲ್ಲಾ ಮುಖಂಡರು ಅನಂತ್ ಕುಮಾರರನ್ನು ಸ್ವಾಗತಿಸಿ ಬಾಳೆಹೊನ್ನೂರು ಬಿಜೆಪಿ ಘಟಕ ಹಾಗೂ ಜನರಪರವಾಗಿ ಅಭಿನಂದಿಸಿದಾಗ ಸಚಿವರು ಜೀವರಾಜ್ ರವರ ಕೋರಿಕೆಯಂತೆ ಬಾಳೆಹೊನ್ನೂರಿಗೆ ಪ್ರಧಾನಮಂತ್ರಿ ಜನೌಷದ ಕೇಂದ್ರ ನೀಡಿರುವುದಾಗಿ ತಿಳಿಸಿದಾಗ ಎಲ್ಲರೂ ಸಂತೋಷಗೊಂಡು ಇನ್ನಾದರೂ ಜನತೆಗೆ ಕಡಿಮೆದರದಲ್ಲಿ ಔಷದ ಮಾತ್ರೆ ದೊರೆಯುತ್ತದೆ ಎಂದು. ಕಾರ್ಯಕ್ರಮ ಮುಗಿಸಿ ಅನಂತಕುಮಾರರೊಟ್ಟಿಗೆ ಕಾರಿನಲ್ಲಿ ತೆರಳಿದ ಜೀವರಾಜ್ ಕೇವಲ 42 ಕಿ.ಮೀ ದೂರದ ಹೊರನಾಡು ತಲುಪುವಷ್ಟರಲ್ಲಿ ಸಚಿವರೊಂದಿಗೆ ಹಾಗೂ ಸಂಬಂದಪಟ್ಟ ಇಲಾಖೆ ತಜ್ಝರೊಂದಿಗೆ ಚರ್ಚಿಸಿ ಬಾಳೆಹೊನ್ನೂರಿಗರ ಬಹುದಿನದ ಕನಸಾಗಿದ್ದ ಈಗಾಗಲೇ ಶಿಥಿಲಾವಸ್ಥೆ ತಲುಪಿರುವ ಭದ್ರಾನಧಿಯ ಹಳೆಸೇತುವೆ ಕೆಡವಿ ಅಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿಶೇಷ ಅನುದಾನದಲ್ಲಿ ಅದೇಷ್ಟು ಕೊಟಿ ಖರ್ಚಾದರೂ ತೊಂದರೆ ಇಲ್ಲ  ಬೃಹತ್ ಆದ ವಿನೂತನ ಆಧುನಿಕ ತಾಂತ್ರಿಕತೆಯ  ಸೇತುವೆ ನಿರ್ಮಾಣಕ್ಕೆ  ಸಚಿವರಿಂದ ಒಪ್ಪಿಗೆಪಡೆದು ಸಂಬಂದ ಪಟ್ಟ ಇಲಾಖೆಗೆ ವರದಿಸಿದ್ದಪಡಿಸುವಂತೆ ಸಚಿವರು ಸೂಚಿಸಿದ್ದಾರೆ....
ಈಗ ನೀವೆ ಯೋಚಿಸಿ ಜೀವರಾಜ್ ರವರನ್ನು ಜನತೆ ಯಾಕೆ ಇಷ್ಟಪಡುತ್ತಾರೆ ಎಂದು, ಯಾಕೆ ಮೂರು ಗೆಲುವು ಕೊಟ್ಟು ನಾಲ್ಕನೆ ಗೆಲುವು ನಿಮ್ಮದೇ ಎಂದು ಬೆಂಬಲಿಸುತ್ತಿದ್ದಾರೆ ಎಂದು.
ಏನೇ ಇರಲಿ ಜೀವರಾಜ್ ರವರ ಈ ಜನೋಪಯೋಗಿ ಹಾಗೂ ವಿಶಿಷ್ಟ ಗುಣಲಕ್ಷಣ, ಜನಬೆಂಬಲ ನೋಡುತ್ತಿರುವ ವಿರೋದಿ ಪಾಳಯದ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿರುವ ಸದ್ದು ಕ್ಷೇತ್ರದಲ್ಲಿ ಕಂಡುಬರುತ್ತಿದೆ.

ಭಾಳೆಹೊನ್ನೂರಿನ ಇತಿಹಾಸದಲ್ಲೇ ಇದು ಬೃಹತ್ ಮೊತ್ತದ ಕಾಮಗಾರಿಯಾಗಿದ್ದು ಇದನ್ನು ತರಲು ಶ್ರಮಿಸಿದಂತಹ ಶಾಸಕ ಜೀವರಾಜ್, ಮುಖಂಡರಾದ ಕಲ್ಮಕ್ಕಿ ಉಮೇಶ್, ವೆನಿಲ್ಲಾ ಭಾಸ್ಕರ್, ಕೆ.ಟಿ ವೆಂಕಟೇಶ್, ಪ್ರಭಾಕರ್ ಪ್ರಣಸ್ವಿ, ಕೆ.ಕೆ.ವೆಂಕಟೇಶ್, ಆರ್ ಡಿ ಮಹೇಂದ್ರ, ಜಗದೀಶ್ಚಂದ್ರ, ಜಮೀರ್ ಅಹಮದ್ ,ಮಂಜು ಹೊಳೆಬಾಗಿಲು ಆರ್ಮುಗಂ, ಮಹೇಶ್ ಶೆಟ್ಟಿ ಇಬ್ರಾಹಿಂ ಶಾಪಿ, ಕಮಲಮ್ಮ, ಸುಂದರೇಶ್,  ಹಾಗೂ ಬಿಜೆಪಿಯ ಎಲ್ಲಾ ಮುಖಂಡರುಗಳಿಗೆ ಬಾಳೆಹೊನ್ನೂರಿನ ಜನತೆ  ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಬಾಳೆಹೊನ್ನೂರಿಗೆ ಕಡಿಮೆ ಬೆಲೆಗೆ ಔಷದಿ ನೀಡುವ  ಪ್ರಧಾನಮಂತ್ರಿ  ಭಾರತೀಯ ಜನೌಷಧಿ ಪರಿಯೋಜನ ಕೇಂದ್ರ: ಕೇಂದ್ರ  ರಸಗೊಬ್ಬರ ಸಂಸದಿಯ ಖಾತೆ ಸಚಿವ ಅನಂತಕುಮಾರ್ ಘೋಷಣೆ.



ಶೃಂಗೇರಿ ಕ್ಷೇತ್ರ ನ್ಯೂಸ್. ಶೃಂಗೇರಿ  ಶ್ರೀ ಮಠಕ್ಕೆ ಆಗಮಿಸಿದ್ದ ಕೇಂದ್ರ ರಸಗೊಬ್ಬರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಅನಂತ್ ಕುಮಾರ್ ರವರು ಮಾರ್ಗಮದ್ಯೆ ಬಾಳೆಹೊನ್ನೂರಿಗೆ ಆಗಮಿಸಿದಾಗ ಬಿಜೆ.ಪಿ ಮುಖಂಡ ಕಲ್ಮಕ್ಕಿ ಉಮೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಸಚಿವರನ್ನು ಸ್ವಾಗತಿಸಿ ದರು. ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು ಕೇಂದ್ರದ ಮೋದಿಜಿ ನೇತೃತ್ವದ ಜನೋಪಯೋಗಿ ಯೋಜನೆಯಾದ "ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ" ವನ್ನು  ಮಾನ್ಯ ಶಾಸಕರಾದ ಡಿ.ಎನ್ ಜೀವರಾಜ್ ರವರ ಕೋರಿಕೆ ಮೇರೆಗೆ  ಬಾಳೆಹೊನ್ನೂರಿನಲ್ಲಿ ಒಂದು ಕೇಂದ್ರ ಆರಂಭಿಸಲಾಗುವುದು ಎಂದು ನುಡಿದರು. ಈ ಯೋಜನೆಯಡಿ ನೂರು ರೂ ಮುಖಬೆಲೆಯ ಔಷದಿಗಳು ಕೇವಲ ಮುವ್ವತ್ತು ರೂಗಳಿಗೆ ಜನರಿಗೆ ಸಿಗಲಿದೆ ಎಂದು ನುಡಿದರು.
ಮಾನ್ಯ ಶಾಸಕರಾದ ಜೀವರಾಜ್, ಕಾರ್ಕಳ ಶಾಸಕರಾದ ಸುನಿಲ್ ಕುಮಾರ್, ಕಲ್ಮಕ್ಕಿ ಉಮೇಶ್, ಕೆ.ಟಿ.ವೆಂಕಟೇಶ್, ಜಗದೀಶ್ಚಂದ್ರ,ಆರ್ಮುಗಂ, ಮಹೇಶ್ ಶೆಟ್ಟಿ, ಇಬ್ರಾಹಿಂ ಶಾಪಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Wednesday, 31 May 2017

ಕ್ರೀಡೆ ಯುವಕರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ- ಕಲ್ಮಕ್ಕಿ ಉಮೇಶ್


ಬಾಳೆಹೊನ್ನೂರಿನ ಮಾರ್ಕೇಟ್ ನ ಆಟೋಚಾಲಕರ ಸಂಘದ ಕ್ರಿಕೇಟ್  ಎಂ.ಸಿ.ಸಿ ಕ್ರಿಕೇಟ್ ಪಂದ್ಯಾವಳಿಯನ್ನು ಬಿ.ಜೆ.ಪಿ ಮುಖಂಡರು ಹಾಗೂ ವಿ.ಎಸ್.ಎಸ್ ಎನ್ ಅದ್ಯಕ್ಷರಾದ  ಕಲ್ಮಕ್ಕಿ ಉಮೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡಾಪಂದ್ಯಾವಳಿಗಳು ಸಮಾಜದಲ್ಲಿ ಶಾಂತಿ ಸೌಹಾರ್ಧತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆಯಲ್ಲದೇ ಯುವಕರಲ್ಲಿ ಸಂಘಟನಾತ್ಮಕ ಚತುರತೆಯನ್ನು ಹೆಚ್ಚಿಸುತ್ತದೆ ಎಂದು ನುಡಿದರು. ಈ ಸಂಧರ್ಭದಲ್ಲಿ ಕ್ಷೇತ್ರ ಯುವ ಕಾಂಗ್ರೇಸ್ ನ ನೂತನ ಅದ್ಯಕ್ಷ ಸಂತೋಷ್ ಕುಮಾರ್ ಬಿ.ಸಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Monday, 29 May 2017

ಡಾ. ಆರತಿ ಕೃಷ್ಣರಿಗೆ ಮಹಾತ್ಮಗಾಂಧಿ ಸಮ್ಮಾನ್ ಪ್ರಶಸ್ತಿ.



ಶೃಂಗೇರಿ ಕ್ಷೇತ್ರದ ಸಕ್ರೀಯ ರಾಜಕಾರಣಿ, ಸಮಾಜ ಸೇವಕಿ, ಅನಿವಾಸಿ ಭಾರತೀಯ ಸಂಸ್ಥೆಯ ಉಪಾಧ್ಯಕ್ಷರು ಆದಂತ 

ಡಾ. ಆರತಿ ಕೃಷ್ಣರಿಗೆ ಬ್ಯಾಂಕಾಕ್ ನೆಡೆದ ಅಂತರಾಷ್ಟ್ರೀಯ ಆಥಿ೯ಕ ಅಭಿವೃದ್ಧಿಯ ಬಗ್ಗೆ ಭಾರತೀಯರ ಜಾಗತಿಕ ಸಮಾವೇಶದಲ್ಲಿ " ಮಹಾತ್ಮ ಗಾಂಧಿ ಸಮ್ಮಾನ್ " ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅನಿವಾಸಿ ಭಾರತೀಯರ ಸಂಪರ್ಕಕೊಂಡಿಯಾಗಿ ಕಳೆದ 20 ವರ್ಷಗಳಿಂದ ಸೇವೆಸಲ್ಲಿಸಿರುವುದರಿಂದ ಶ್ರೀಮತಿ ಆರತಿಕೃಷ್ಣರವರಿಗೆ ಈ ಪ್ರಶಸ್ತಿ ಸಂದಿದೆ.



ಜೀವರಾಜ್ ಗೆ ರಸ್ತೆಯಲ್ಲಿಯೇ ಮನವಿ ಸಲ್ಲಿಸಿದ ಚೌಡಿಕೆರೆ ಒತ್ತುವರಿದಾರರು.



ಕ್ಷೇತ್ರ ನ್ಯೂಸ್ ಬ್ಲಾಗ್. ಬಾಳೆಹೊನ್ನೂರು.
ಬಾಳೆಹೊನ್ನೂರಿನ ಚೌಡಿಕೆರೆ ಒತ್ತುವರಿಯಾಗಿದ್ದ 5ಎಕರೆ  ಯನ್ನು ತೆರವುಗೊಳಿಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು 7ಕುಟುಂಬದ ಸದಸ್ಯರು ಶಾಸಕ ಜೀವರಾಜ್ ಗೆ ರಸ್ತೆ ಯಲ್ಲಿಯೇ ಮನವಿ ಸಲ್ಲಿಸಿ, ಬಾಳೆಹೊನ್ನೂರಿನಲ್ಲಿ ಬಹಳಷ್ಟು ಸರ್ಕಾರಿಜಾಗ ಒತ್ತುವರಿಯಾಗಿದೆ ಅದೆಲ್ಲದನ್ನು ಬಿಟ್ಟು ಕೇವಲ ನಮ್ಮಗಳ ಮೇಲೆ ಮಾತ್ರಈ ತೆರವು ಕಾರ್ಯಾಚರಣೆ ನೆಡೆಸುತ್ತಿರುವುದು ಸರಿ ಅಲ್ಲ, ನಾವು ಬಡವರಾಗಿದ್ದು ಈ ತೆರವುಕಾರ್ಯಾಚರಣೆ ನಿಲ್ಲಿಸಬೇಕೆಂದು ಮನವಿ ಸಲ್ಲಿಸಿದರು.


ಶಾಸಕ ಜೀವರಾಜ್ ಮನವಿ ಸ್ವೀಕರಿಸಿ ಸಂಬಂದಪಟ್ಟ ಇಲಾಖೆಗೆ ಮಾತನಾಡಿದ್ದು ಸದ್ಯದಮಟ್ಟಿಗೆ ಒತ್ತುವರಿದಾರರು ನಿರಾಳರಾಗಿದ್ದಾರೆ.  ಈ ಸಮಯದಲ್ಲಿ ಬಿ.ಜೆ.ಪಿ ಮುಖಂಡರು ವಿಎಸ್ ಎಸ್ ಎನ್ ಅದ್ಯಕ್ಷರಾದ ಕಲ್ಮಕ್ಕಿ ಉಮೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ,  ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ತಾಲ್ಲೂಕ್  ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇಬ್ರಾಹಿಂ ಶಾಫಿ ಉಪಸ್ಥಿತರಿದ್ದರು.

Friday, 26 May 2017

ಗೋ ಹತ್ಯೆ ನಿಷೇದವನ್ನು ಸ್ವಾಗತಿಸಿ ಶ್ರಿರಾಮ ಸೇನೆ ಬಾಳೆಹೊನ್ನೂರು

ಕೇಂದ್ರಸರ್ಕಾರದ ಗೋ ಹತ್ಯೆ ನಿಷೇದವನ್ನು ಸ್ವಾಗತಿಸಿ ಶ್ರಿರಾಮ ಸೇನೆ ಬಾಳೆಹೊನ್ನೂರು ಘಟಕದ ವತಿಯಿಂದ ಜೆಸಿ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು...ಸಂಕೀರ್ಣ,ದಿವಿನ್,ಮಹೇಶ್ ಶೆಟ್ಟಿ,ಮನೋಜ್ ವಿಜೇತ್,ಸಂಜಯ್,ಚೇತನ್ ಮುಂತಾದ ಕಾರ್ಯಕರ್ತರಿದ್ದರು......


ಗೋಹತ್ಯೆ  ನಿಷೇಧ


ರೈತರಿಗೆ ಮಾತ್ರ ದನಕರು ಮಾರಾಟಕ್ಕೆ ಅನುಮತಿ
ನವದೆಹಲಿ :  ದೇಶಾದ್ಯಂತ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಪ್ರಾಣಿಗಳ ವ್ಯಾಪಾರಕ್ಕೆ ಹೊರಡಿಸಿರುವ ಹೊಸ ಆದೇಶದನ್ವಯ ಗೋವುಗಳನ್ನು ಭೂಮಾಲೀಕರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪ್ರಾಣಿಗಳ ಕಲ್ಯಾಣ ಹೆಸರಿನಲ್ಲಿ ನಿನ್ನೆ ಹೊರಡಿಸಲಾದ ಅಧಿಸೂಚನೆ ಗೋವುಗಳ ರಕ್ಷಣೆಗೆ ಹೊರಡಿಸಲಾದ ಕೇಂದ್ರ ಸರ್ಕಾರದ ಮೊದಲ ಆದೇಶವಾಗಿದೆ.

ಗೋವುಗಳ ವ್ಯಾಪಾರಸ್ಥರು ವಿಶೇಷವಾಗಿ ಮುಸ್ಲಿಂರ ಮೇಲೆ ಹಿಂದೂ ಸಂಘಟನೆಗಳಿಂದ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ.

ಹರಿಯಾಣ ಮೂಲದ ಹಾಲು ಉತ್ಪಾದಕ ಪೆಹ್ಲೂಖಾನ್ ಅವರ ಮೇಲೆ ಗೋ ರಕ್ಷಕರ ಪಡೆ ಏಪ್ರಿಲ್ 1 ರಂದು ರಾಜಸ್ತಾನದಲ್ಲಿ ಹಲ್ಲೆ ನಡೆಸಿದ ನಂತರ 4 ದಿನಗಳಲ್ಲಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದರು.

ಕಳೆದ ಒಂದು ತಿಂಗಳ ಹಿಂದೆ ಅಸ್ಸಾಂನಲ್ಲಿ ಇಬ್ಬರು ಗೋ ವ್ಯಾಪಾರಸ್ಥರು ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂಬ ಸಂಶಯದ ಮೇಲೆ ಅವರಿಗೆ ಹಿಂಸೆ ನೀಡಲಾಗಿತ್ತು. ಈಶಾನ್ಯ ಭಾರತದ ಬಹುತೇಕ ಭಾಗಗಳು ಮತ್ತು ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ.

ಗೋವುಗಳನ್ನು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು, ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕಲ್ಲ ಎಂದು 1960ರ ಪ್ರಾಣಿಗಳ ಹಿಂಸಾಚಾರ ತಡೆ ಕಾಯ್ದೆಯ ವಿಶೇಷ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಜಾನುವಾರುಗಳನ್ನು ಗಮನದಲ್ಲಿಟ್ಟುಕೊಂಡು ಈ ಷರತ್ತನ್ನು ವಿಧಿಸಲಾಗಿತ್ತು.

ತಾನು ಕೃಷಿಕ ಎಂಬುದನ್ನು ಸಾಬೀತುಪಡಿಸುವ ವ್ಯಕ್ತಿಗಳಿಗೆ ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿದೆ.

8 ಪುಟಗಳನ್ನೊಳಗೊಂಡ ನಿಷೇಧ ಆದೇಶದನ್ವಯ ಅಂತರ್ರಾಷ್ಟ್ರೀಯ ಗ‌ಡಿಯಲ್ಲಿ 50 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದನಗಳ ಸಂತೆಗಳಿರಬಾರದು, ರಾಜ್ಯದ ಗಡಿಯ 25 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ಸಂತೆಗಳಿಗೆ ಅವಕಾಶ ನೀಡದಿರಲು ಪರಿಸರ ಸಚಿವಾಲಯ ಕ್ರಮ ಕೈಗೊಂಡಿದೆ. ಯಾವುದೇ ರಾಜ್ಯದಿಂದ ಹೊರಗೆ ಜಾನುವಾರುಗಳನ್ನು ಸಾಗಿಸಬೇಕಾದರೆ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕಾಗಿದೆ.

ಮ್ಯಾಜಿಸ್ಟೇಟರ್‌ರ ನೇತೃತ್ವದಲ್ಲಿ ಜಿಲ್ಲಾ ಪ್ರಾಣಿ ಮಾರುಕಟ್ಟೆ ಸಮಿತಿಗಳ ಒಪ್ಪಿಗೆ ಇಲ್ಲದೆ ಯಾವುದೇ ದನಗಳ ಸಂತೆ ನಡೆಯುವಂತಿಲ್ಲ. ಇಂತಹ ಸಮಿತಿಗಳಲ್ಲಿ ಸರ್ಕಾರ ಅನುಮೋದಿಸಿದ ಪ್ರಾಣಿ ಕಲ್ಯಾಣ ಸಂಘಗಳ ಇಬ್ಬರು ಪ್ರತಿನಿಧಿಗಳು ಇರುತ್ತಾರೆ.

ಭಾರತದ ಬಹುತೇಕ ರಾಜ್ಯಗಳಲ್ಲಿ ವಾರ ವಾರ ದನಗಳ ಸಂತೆಗಳು ನಡೆಯುತ್ತವೆ. ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಾನಳಿಗಳನ್ನು ಮುಂದಿನ ಮೂರು ತಿಂಗಳಲ್ಲಿ ಜಾರಿಗೆ ತರಬೇಕಾಗಿದೆ. ಗೋ ವ್ಯಾಪಾರಸ್ಥರ ಪೈಕಿ ಬಹುತೇಕ ಮಂದಿ ಬಡವರು ಹಾಗೂ ಅನಕ್ಷರಸ್ಥರಾಗಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಇದಕ್ಕಾಗಿ ಕಾಲಾವಕಾಶ ನೀಡಲಾಗಿದೆ
ಬಾಳೆಹೊನ್ನೂರು ಚೌಡಿಕೆರೆ ಒತ್ತುವರಿ ತೆರವು ಕಾರ್ಯಾಚರಣೆ. ಸುಮಾರು 5 ಎಕರೆ ತೆರವುಗೊಳಿಸುತ್ತಿರುವ ಅಧಿಕಾರಿಗಳು.






ಬಾಳೆಹೊನ್ನೂರಿನ ಅತಿ ದೊಡ್ಡಕೆರೆಯಾದ ಇತಿಹಾಸಪ್ರಸಿದ್ಧವಾದ ನರಾಪುರ ರಸ್ತೆಯಲ್ಲಿರುವ ಚೌಡಿಕೆರೆಯ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಚರಣೆಯನ್ನು ನಾಡಕಛೇರಿ, ಪಂಚಾಯ್ತಿ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ಸರಿ ಸುಮಾರು 5ಎಕರೆ ಕೆರೆಒತ್ತುವರಿಯನ್ನು ತೆರವುಗೊಳಿಸುತ್ತಿದ್ದು  ಕಾರ್ಯಾಚರಣೆ ಯಾವುದೇ ಅಡೆತಡೆಇಲ್ಲದೇ ಸಾಗುತ್ತಿದೆ.
ಈ ಒತ್ತುವರಿ ಮಾಡಿರುವ ಪ್ರದೇಶದಲ್ಲಿ ಅಡಕೆ ಬಾಳೆ ತೋಟವಿದ್ದು ಕೆಲ ಮರಗಳಲ್ಲಿ ಪಸಲಿದ್ದು  ಮಾನವೀಯತೆ  ದೃಷ್ಟಿಯಿಂದ ಅದನ್ನು ತೆಗೆದುಕೊಳ್ಳಲು ಒಂದಿಷ್ಟು ದಿನ ಸಮಯನೀಡಲು ಕೋರಿದ್ದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು ಕಾರ್ಯಾಚರಣೆ ಮುಂದುವರಿದಿದೆ.
ಇನ್ನೂ ಕೆರೆ ಒತ್ತುವರಿ ತೆರೆವು ಶುರುವಾದಕೂಡಲೇ ಇನ್ನಿತರೆ ಬಾಳೆಹೊನ್ನೂರಿನಲ್ಲಿ ಅಕ್ರಮವಾಗಿ ಒತ್ತುವರಿ, ಕೆರೆಮುಚ್ಚಿ ಹಾಕಿರುವ ಪ್ರಕರಣಗಳ ಪೈಲ್ ದೂಳುಕೊಡವಿಕೊಂಡು ಏಳುವ ಸಾದ್ಯತೆಯಿಂದ ಅಕ್ರಮ ಕೆರೆ ಒತ್ತುವರಿ ಮಾಡಿರುವವರ ಮುಖದಲ್ಲಿ ಆತಂಕ ಮನೆಮಾಡಿದೆ








Thursday, 25 May 2017

ನ.ರಾ.ಪುರ ಬಿ.ಜೆ.ಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯತ್ವ ಅಭಿಯಾನ.




ಸದೃಡ ಭಾರತ ನಿರ್ಮಾಣಕ್ಕೆ ಮೋದಿಜಿಯವರ ಬ್ರಾತೃತ್ವದ ಸಂದೇಶವನ್ನು ಯುವಜನತೆ ಅರ್ಥಮಾಡಿ ಕೊಂಡು ಮುಂದೆಸಾಗಬೇಕಾಗಿದೆ, ಇಂದು ಭಾರತದ ನವ ನಿರ್ಮಾಣಕ್ಕೆ  ಹಾಗೂ ಶೃಂಗೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಲ್ಪಸಂಖ್ಯಾತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದೆ. ಈ ಬೆಂಬಲವನ್ನು ಸಾಭೀತು ಪಡಿಸಲು ಸದಸ್ಯತ್ವ ಅಭಿಯಾನ ಆರಂಭಿಸಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲ್ಲೂಕ್ ಅಧ್ಯಕ್ಷ ಇಬ್ರಾಹಿಂ ಶಾಫಿ ತಿಳಿಸಿದ್ದಾರೆ.
ಅವರು ಕ್ಷೇತ್ರ ನ್ಯೂಸ್ ಬ್ಲಾಗ್ ನೊಂದಿಗೆ ಮಾತನಾಡಿ ಕಾಂಗ್ರೇಸ್ ಹಾಗೂ ಜೆಡಿಎಸ್ ಮುಸಲ್ಮಾನರನ್ನು ಎತ್ತಿಕಟ್ಟಿ ರಾಜಕೀಯ ಮಾಡಿ ಲಾಭಗಳಿಸುವ ಹುನ್ನಾರ ನೆಡೆಸಿದರೆ, ಬಿಜೆಪಿ ಮುಸಲ್ಮಾನರೊಂದಿಗೆ ಸಹೋದರ ಭಾವನೆಯೊಂದಿಗೆ ಸಾಗುತ್ತಿದೆ ಹಾಗಾಗಿ ಜಾತಿ ಜಾತಿ ಸಂಘರ್ಷ ಏರ್ಪಟ್ಟು ಸಮಾಜದಲ್ಲಿ ಅಶಾಂತಿ ಏರ್ಪಡುವ ಬದಲು ಸಹೋದರ ಭಾವನೆಯೊಂದಿಗೆ ಅಲ್ಪಸಂಖ್ಯಾತರನ್ನು ನೆಡೆಸಿಕೊಳ್ಳುವ ಬಿಜೆಪಿ ಎಲ್ಲಾ ಅಲ್ಪಸಂಖ್ಯಾತರ ಆಯ್ಕೆಯಾಗಬೇಕು,  ಈ ಸಂಬಂದ ಅತಿ ಹೆಚ್ಚಿನ ಮುಸಲ್ಮಾನ ಬಂಧುಗಳು ಈ ಬಾರಿ ಜೀವರಾಜ್ ರನ್ನ ಬೆಂಬಲಿಸಿ ಗೆಲ್ಲಿಸಲು ಶ್ರಮವಹಿಸಲಿದ್ದಾರೆಂದು ಶಾಫಿ ನುಡಿದಿದ್ದಾರೆ





Wednesday, 24 May 2017

ಜೀವರಾಜ್ ದೂರುತ್ತಿದ್ದ ಕಾಂಗ್ರೇಸ್ ಈಗ ಶೋಭಕ್ಕನ ದೂರುತ್ತಿದೆ..


ಈ ದರಿದ್ರ ಕಾಂಗ್ರೇಸ್ ಮೆಂಟಾಲಿಟಿಯೇ  ಹೀಗೆ, ಇವು ತಾವು ಮಾಡೋಲ್ಲ ಮಾಡೋರಿಗೂ ಬಿಡೋಲ್ಲ.. ಮೊನ್ನೆ ಮೊನ್ನೆವರೆಗೂ ಜೀವರಾಜ್ ಬೆನ್ನು ಹತ್ತಿದ್ದ ಈ ಕಾಂಗಿಗಳು ಯಾವಾಗ ಜೀವರಾಜ್ ಗಬ್ಬಾನೆ ದೇವರಲ್ಲಿ ಉಹಿಲು ಹಾಕಿ ಆಣೆ ಪ್ರಮಾಣ ಮಾಡಿದರೋ ಇವು ಗಪ್ ಚಿಪ್ ಆಗಿ  ಈಗ ಜೀವರಾಜ್ ಬೆನ್ನುಬಿದ್ದರೆ ನಮ್ಮ ಗಿಮಿಕ್ ವರ್ಕ್ ಔಟ್ ಆಗೋಲ್ಲ ಅಂತ ಶೋಭಕ್ಕನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲು ಶುರು ಹಚ್ಚಿಕೊಂಡಿದ್ದಾವೆ. ಶೋಭಕ್ಕ  ಕ್ಷೇತ್ರಕ್ಕೆ  ದೊಡ್ಡಮಟ್ಟದಲ್ಲಿ  ಮಾತನಾಡಿ ಅನುದಾನ ತರುವ ತಾಕತ್ ಇರುವ ಧೀಮಂತ ಮಹಿಳೆ  ಎಂಬುದನ್ನು ಅರಿತಿರುವ ಕಾಂಗಿಗಳು ಹೇಗಾದರೂ ಮಾಡಿ ಚಿಕ್ಕಮಗಳೂರು ಜಿಲೆಯಲ್ಲಿ ಅವರ ಹೆಸರು ಕೆಡಿಸಬೇಕು ಎಂದು ಮಂಗಳೂರು ಮೂಲದ ಪಾಕ್ ನಂಟಿರುವ ಆನ್ ಲೈನ್  ಸುದ್ದಿ ಮಾಡುವ ಬ್ಲಾಗ್ ಒಂದಕ್ಕೆ ಕಮಿಟ್ ಆಗಿದ್ದಾರೆನ್ನುವ ಸ್ಪೋಟಕ ಸುದ್ದಿ ಹೊರ ಬಂದಿದೆ. ಆದರೆ ಚಿಕ್ಕಮಗಳೂರು ಕ್ಷೇತ್ರದ ಮತದಾರ ಕಾಂಗಿಗಳ ಮಂಗಾಟವನ್ನು ಎಷ್ಟರಮಟ್ಟಿಗೆ ಸಹಿಸುತ್ತಾನೆ ಎಂಬುದೇ ಮುಂದಿರುವ ಪ್ರಶ್ನೆ.

ದನದ ಮಾಂಸ ತಿನ್ನುವ  ಶೇ90  ಜನರಿಗೆ ಕ್ಯಾನ್ಸರ್ ಗ್ಯಾರೆಂಟಿ...

ಇದನ್ನು ಓದಿದಕೂಡಲೇ ಪೇಕ್ ನ್ಯೂಸ್ ಎಂದು ಜರಿಯಬೇಡಿ.. ಕಾಸರಗೋಡುವಿನ ಖಾಸಗಿ ಸಂಸ್ಥೆಯೊಂದು ಕೇರಳ ಹಾಗೂ ಕಾಸರಗೋಡು, ಮಂಗಳೂರಿನ ಸರಿಸುಮಾರು 15000  ಜನರನ್ನು ಪರಿಕ್ಷಿಸಿ ಈ ವರದಿಯನ್ನು  ಸಿದ್ದಪಡಿಸಿದೆ.  ಈ ವರದಿಯಂತೆ  ಇತ್ತೀಚಿಗೆ ದನಗಳು ಪ್ಲಾಸ್ಟಿಕ್ ಹಾಗೂ ರದ್ದಿಯನ್ನು ನ್ಯೂಸ್ ಪ್ರಿಂಟ್ ಗಳನ್ನು ಅತಿ ಹೆಚ್ಚು ತಿನ್ನುತಿದ್ದು ಇದರಿಂದಾಗಿ ದನಗಳ ಆಯಸ್ಸು ಕಡಿಮೆಯಾಗುವುದಲ್ಲದೇ ಅವುಸಹ ಅಕಾಲಿಕ ಸಾವಿಗೆ ತುತ್ತಾಗುತ್ತಿದ್ದು, ಇದನ್ನು ಸೇವಿಸುವವರು ಸಹ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆಂದು ಮದ್ಯಂತರ ವರದಿಯಲ್ಲಿ ದೃಡಪಟ್ಟಿದೆ.







ಇನ್ನೂ ಜಾನುವಾರುಗಳು ಈ ಹಿಂದಿನಂತೆ ಹಸಿರು ಹುಲ್ಲು ತಿನ್ನುವುದು ಕಡಿಮೆಯಾಗಿ ಕೆಮಿಕಲ್ ಯುಕ್ತ ಪೇಪರ್ ಅನ್ನು ಜನರು ಬಳಸಿ ಬಿಟ್ಟ ತಿಂಡಿ ಪದಾರ್ಥದ ಕವರ್ ಗಳನ್ನು ತಿನ್ನುತಿದ್ದು ಈ ಕವರ್ ಗಳು ಹೊಟ್ಟೆಯಲ್ಲಿ ಕರಗದೇ ಅಲ್ಲಿಯೇ ಸುರುಳಿಸುತ್ತಿಕೊಂಡು ಇರುವುದು ಅತಿ ವಿಷಕಾರಕವಾಗಿದೆ ಎಂಬುದು ದೃಡ ಸತ್ಯ.

Tuesday, 23 May 2017

ಯಡಿಯೂರಪ್ಪನವರು ಊಟ ಮಾಡಿದ ಮನೆಯ ಯಜಮಾನರು ಹೀಗೆ ಹೇಳಿದರು




ನಮ್ಮ ಮನೇಲಿ ಹೋಟೆಲ್ ಇಂದ ಬೇಕಾದ್ರೂ ಊಟ ತಂದ್ ಹಾಕ್ತೀವಿ ಇಲ್ಲ ನಮ್ಮನೇಲಿ ಬೇಕಾದ್ರು ರೆಡಿ ಮಾಡಿ ಹಾಕ್ತೀವಿ ಕೇಳೋಕೆ ನೀವ್ಯಾರು
ಯಡಿಯೂರಪ್ಪನವರು ಊಟ ಮಾಡಿದ ಮನೆಯ ಯಜಮಾನರು ಹೀಗೆ ಹೇಳಿದರು.