Monday, 19 February 2018

ಜೀವರಾಜ್ ರಸ್ತೆ ಸಮಸ್ಯೆ ಬಗೆಹರಿಸಲು ಸ್ವತಃ ಜೀವರಾಜೇ ಬರಬೇಕಾಯ್ತು.

ಅಭಿವೃದ್ಧಿಕಾರ್ಯಗಳು ಜನತೆಯ ಕಲ್ಯಾಣಕ್ಕಾಗಿಯೇ ಹೊರತು ಜನ ವಿರೋದಿಯಲ್ಲ, ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಮಾಡಿ ಜನತೆಗೆ ತೊಂದರೆಕೊಡುವ ನೀಚ ಮಟ್ಟಕ್ಕೆ ರಾಜಕೀಯ ಪಕ್ಷವೊಂದು ಇಳಿದಿರುವುದು ಆ ಪಕ್ಷದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕಾಂಗ್ರೇಸ್ ಹೆಸರೇಳದೇ ಜೀವರಾಜ್ ಹರಿಹಾಯ್ದರು. ಕಾರ್ಯ ನಿಮಿತ್ತ ಭೆಂಗಳೂರಿಗೆ ಸಾಗುವ ಮಾರ್ಗಮದ್ಯೆ ಬಾಳೆಹೊನ್ನೂರಿನಲ್ಲಿ ನಿರ್ಮಾಣವಾಗುತ್ತಿರುವ 8ಕೋಟಿ ವೆಚ್ಚದ ದ್ವಿ ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಕಾಮಗಾರಿಗೆ ಕೆಲವರು ರಾಜಕೀಯ ಪುಡಾರಿಗಳ ಆಟಕ್ಕೆ ತಕ್ಕಂತೆ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಾರೆ ಮತ್ತು ಕಾಮಗಾರಿ ಶೀಘ್ರ ಮುಗಿಯದಂತೆ ತೊಂದರೆ ನೀಡುತ್ತಾರೆ ಎಂಬ ಸಾರ್ವ ಜನಿಕರು ದೂರಿದಾಗ  ಜೀವರಾಜ್ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಆ ಪಕ್ಷಕ್ಕೆ ಶೋಭೆ ತರುವಂತಹದ್ದಲ್ಲ ಇದಕ್ಕೆ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು. ಕೆಲ ಪುಡಾರಿಗಳು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿರುವುದಕ್ಕೆ ಪೋಲಿಸರನ್ನು ಕರೆಯಿಸಿದ ಜೀವರಾಜ್ ಯಾವುದೇ ಕಾರಣಕ್ಕೂ ರಸ್ತೆ ಬಂದ್ ಮಾಡದೇ ಒನ್ ವೇ ಮಾಡಿ ಸೂಕ್ತ ಬಂದೋಬಸ್ದ್ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.
ಜನತೆ ಈ ರಸ್ತೆಗೆ  ಜೀವರಾಜ್ ರಸ್ತೆ ಎಂದು ಹೆಸರಿಟ್ಟಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಶಾಸಕನಾಗಿ ನಾನು ಇಲ್ಲಿ ನಿಂತಿರುವುದು ಆ ಜನತೆಯ ಪ್ರೀತಿ ವಿಶ್ವಾಸದಿಂದ  . ಅವರು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಕೊನೆಯವರೆಗೂ ಚಿರರುಣಿಯಾಗಿ ಜನಸೇವೆ ಮಾಡುವುದು ನನ್ನ ಕೆಲಸ ಎಂದು ನುಡಿದರು. ಒಟ್ಟಾರೆ ಜೀವರಾಜ್ ರಸ್ತೆಯ ಸಮಸ್ಯೆ ಬಗೆಹರಿಸಲು ಜೀವರಾಜೇ ಬರಬೇಕಾಯ್ತು!

ವರದಿ: ಜಗದೀಶ್ಚಂದ್ರ.ಬಿ

Sunday, 18 February 2018

ಮಾಜಿ ಮಂತ್ರಿ ಜೀವರಾಜ್ ಟ್ರಾಪಿಕ್ ಪೋಲಿಸ್ ಆದ ಕತೆ.

ಲೇಖಕರು: ಜಗದೀಶ್ಚಂದ್ರ.ಬಿ


ಶೃಂಗೇರಿ ಕ್ಷೇತ್ರದಲ್ಲಿ ಒಂದು ಸಲ ಶಾಸಕನಾದರೇ ಸಾಕು ಎಂದು ಹಲುಬುತ್ತಿರುವ ಕೆಲ ಪ್ರೇತಾತ್ಮಗಳ ನಡುವೆ ನಮ್ಮ ಹ್ಯಾಟ್ರಿಕ್ ಹೀರೋ.. ಮಾಜಿ ಮಂತ್ರಿ ಬಡಜನರ ಕಣ್ಮಣಿ ವಿಭಿನ್ನವಾಗಿ ಜನರಿಗೆ ಇಷ್ಟವಾಗುವುದೇ ಅವರ ಸರಳತೆಯ ಕಾರಣಕ್ಕೆ..
ದಿನಾಂಕ 18.2.2018 ರಂದು ಮಾನ್ಯ ಶಾಸಕ ಜೀವರಾಜ್ ಶೃಂಗೇರಿಯಿಂದ ಬಾಳೆಹೊನ್ನೂರಿಗೆ ಬರುತ್ತಿದ್ದರುಈ ಸಮಯದಲ್ಲಿ ಚಿಕ್ಕಬಳ್ಳಾಪುರ ಕಡೆಯ ಕಾಂಗ್ರೇಸ್ ಶಾಸಕನೋರ್ವ ತನಗೆ ಚುನಾವಣೆಯಲ್ಲಿ ಲಾಭವಾಗಲಿ ಎಂದು ತನ್ನ ಕ್ಷೇತ್ರದ. ಕೆಲವರನ್ನು 40ಬಸ್ ಗಳಲ್ಲಿ ಶೃಂಗೇರಿ ಪ್ರವಾಸಕ್ಕೆ ಕಳುಹಿಸಿದ್ದಾರೆ. ಇನ್ನೂ ಹೇಳಿ ಕೇಳಿ ಶಾಸಕರು ಕಳುಹಿಸಿದ್ದು ಸರ್ಕಾರವೂ ಕಾಂಗ್ರೇಸ್ ದೇ ಎಂಬ ಅಹಂ ನಲ್ಲಿ ಆ ಬಸ್ ಚಾಲಕರು ಶೃಂಗೇರಿಯಿಂದಲೇ ಅತಿವೇಗಗಾಗಿ ನುಗ್ಗುತ್ತಾ ಬಂದಿದ್ದಾರೆ ಈಗೆ ಬರುವಾಗ ಬಸರಿ ಕಟ್ಟೆ ಹ್ಯಾಂಡ್ ಪೋಸ್ಟ್ ಬಳಿ ಸ್ಥಳಿಯ ಖಾಸಗಿ ವಾಹನಕ್ಕೆ ತಾಗಿಸಿದ್ದಾರೆ ಆಗ ಸ್ಥಳಿಯರೊಂದಿಗೆ ಆ ಕಾಂಗ್ರೇಸ್  ಶಾಸಕರ ಗೂಂಡಾ ಬೆಂಬಲಿಗರು ಖ್ಯಾತೆ ತೆಗೆದಿದ್ದಾರೆ. ಏಕಾ ಏಕಿ 40ಬಸ್ ಗಳು ಒಂದರ ಹಿಂದೆ ಒಂದರಂತೆ ರಸ್ತೆಗೆ ಸಾಲು ಸಾಲಾಗಿ ಅಡ್ಡಗಟ್ಟಿ ನಿಂತಾಗ ಟ್ರಾಪಿಕ್ ಜಾಮ್ ಆದಾಗ ಅದೇ ದಾರಿಯಲ್ಲಿ ಬರುತ್ತಿದ್ದ ನಮ್ಮ ಜನನಾಯಕ ಜೀವರಾಜ್ ಸ್ಥಳಿಯರೊಂದಿಗೆ ವಿಚಾರ ತಿಳಿದು ತಾವೇ ಖುದ್ದಾಗಿ ಹೋಗಿ ಜಗಳಬಗೆಹರಿಸಿ  ಗೂಂಡಾವರ್ತನೆ ತೋರಿದ ಕಾಂಗ್ರೇಸ್ ಶಾಸಕರ ಹಿಂಬಾಲಕರಿಗೆ ತಮ್ಮ ಮಾತಿನ ವರಸೆಯಿಂದಲೇ ನಯವಾದ ಚಾಟೀ ಬೀಸಿ ಸಂಪೂರ್ಣ ರಸ್ತೆಯ ಟ್ರಾಪಿಕ್ ಸರಿಯಾಗುವವರೆಗೂ ತಾವೇ ನಿಂತು ಸರಿಮಾಡಿ ಮತ್ತೆ ತಮ್ಮ ಕಾರ್ ಏರಿ ಬಾಳೆಹೊನ್ನೂರಿನ ಕಡೆ ಹೊರಟಿದ್ದಾರೆ. ಓರ್ವ ಶಾಸಕನಾಗಿ ಮಾಜಿ ಮಂತ್ರಿಯಾಗಿ ಜೀವರಾಜ್ ನೆಡೆನುಡಿಕಂಡ ಕಾಂಗ್ರೇಸ್ ಶಾಸಕರ ಬೆಂಬಲಿಗರು ಜೀವರಾಜ್ ರವರನ್ನು ಗುಣಗಾನ ಮಾಡಿದರೆ. ಇದನ್ನೆಲ್ಲ ವೀಕ್ಷಿಸುತ್ತಿದ್ದ ಸ್ಥಳಿಯರು ಶಾಸಕರ ಜನಪರ ಜವಾಬ್ದಾರಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಏನೇ ಇರಲಿ ಒಬ್ಬ ಜನನಾಯಕ ಹೇಗಿರಬೇಕೆಂಬುದಕ್ಕೆ ಜೀವರಾಜ್ ಮಾದರಿ ಎಂದರೆ ತಪ್ಪಾಗಲಾರದು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕಲ್ಮಕ್ಕಿ ಉಮೇಶ್

ಚುನಾವಣೆಗೆ ಎರೆಡೂ ವರ್ಷದಿಂದ ಭರ್ಜರಿ ತಯಾರಿ ನೆಡೆಸಿರುವ ಬಿಜೆಪಿ ಈಗ ಬಾಳೆಹೊನ್ನೂರು ಹೋಬಳಿಯಲ್ಲಿ ಪ್ರಭಲ ವಕ್ಕಲಿಗ ನಾಯಕರಾಗಿದ್ದ ಕಲ್ಮಕ್ಕಿ ಉಮೇಶ್ ರವರನ್ನು ಕಳೆದ 6 ತಿಂಗಳ ಹಿಂದೆಯೇ ಕಾಂಗ್ರೇಸ್ ನಿಂದ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ವಿಎಸ್ ಎಸ್ ಎನ್ ಅಧ್ಯಕ್ಷರಾಗಿ ಪ್ರಭಲ ವಕ್ಕಲಿಗ ಮುಖಂಡರಾಗಿರುವ ಕಲ್ಮಕ್ಕಿ ಉಮೇಶ್ ರವರ ಸೇವೆಯನ್ನು ಇನ್ನಷ್ಟು ಬಳಸುವ ಉದ್ದೇಶದಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಶಾಸಕರು ಆಗಿರುವ ಡಿ.ಎನ್.ಜೀವರಾಜ್ ರವರು ಕಲ್ಮಕ್ಕಿ ಉಮೇಶ್ ರವರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಸುದ್ದಿಯನ್ನು ಶೃಂಗೇರಿ ಬ್ಲಾಗ್ ಗೆ ತಿಳಿಸಿರುವ ನ.ರಾ.ಪುರ ತಾಲ್ಲೂಕ್ ಅಧ್ಯಕ್ಷ ಶ್ರೀ ವೆನಿಲ್ಲಾ ಭಾಸ್ಕರ್ ಕಲ್ಮಕ್ಕಿ ಉಮೇಶ್ ರವರಿಗೆ ಜಿಲ್ಲಾ ಉಪಾಧ್ಯಕ್ಷ ರನ್ನಾಗಿ ನೇಮಕ ಮಾಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದ್ದು  ಮುಂದಿನ ದಿನಗಳಲ್ಲಿ ಇದು ಪಕ್ಷದ ಬೆಳವಣಿಗೆಗೆ ಪೂರಕವಾಗಿದ್ದು ಇದೇ ಪ್ರಪ್ರಥಮ ಬಾರಿಗೆ ಬಾಳೆಹೊನ್ನೂರು ಹೋಬಳಿ ವಿಧಾನಸಭಾ ಚುನಾವಣೆಯಲ್ಲಿ ಲೀಡ್ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಈ ಸುದ್ದಿ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ ಎಂದು ನುಡಿದರು.

Saturday, 17 February 2018

ಜೀವರಾಜ್ ಗೆಲುವು ಶತಸಿದ್ಧ: ನವಶಕ್ತಿ ಸಮಾವೇಶದಲ್ಲಿ ಸಂತೋಷ್ ಜೀ.


ಶೃಂಗೇರಿ ಕ್ಷೇತ್ರಮಟ್ಟದ ಪ್ರತಿ ಬೂತ್ ನ 9 ಜನರ ತಂಡದ ಸಮಾವೇಶ ನ.ರಾ.ಪುರದ ಕರಿಬಸವೇಶ್ವರ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿತು. ಸಮಾವೇಶದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಜೀ ರವರು ಭಾರತೀಯ ಜನತಾ ಪಕ್ಷದ ಸಂಘಟನೆಯ ಸಮಾವೇಶವನ್ನು ಇನ್ನೂ ಹತ್ತು ಜನ್ಮ ಎತ್ತಿದರೂ ಕಾಂಗ್ರೇಸ್ ನವರು ಮಾಡಲು ಸಾದ್ಯವಿಲ್ಲ. ಕಾರಣ ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಪಕ್ಷ.  ಈ ನವಶಕ್ತಿ ಸಮಾವೇಶ ಪಕ್ಷದ ಬಲಾ ಬಲವನ್ನು ಅಳೆಯುವ ಸಾಧನವಾಗಿದ್ದು ಇನ್ನು ಮುಂಬರುವ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸದೃಡವನ್ನಾಗಿ ಜನರಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದರು. ಬಿಜೆಪಿಯ ಹಲವಾರು ಕಾರ್ಯಕ್ರಮಗಳನ್ನು ಕಾಂಗ್ರೇಸ್ ನವರು ಕಾಪಿ ಮಾಡಿದ್ದಾರೆ ಪರ್ವಾಗಿಲ್ಲ ಬಿಜೆಪಿ ದೇಶದ ಅಭಿವೃದ್ಧಿಗೋಸ್ಕರ ಮಾಡಿದರೇ ಉಳಿದ ಪಕ್ಷದವರು ವೈಯುಕ್ತಿಕ ಹಿತಾಸಕ್ತಿಗೋಸ್ಕರ ಮಾಡುತ್ತಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ತಲೆ ತಗ್ಗಿಸಿ ಮತಕೇಳುವ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಜೀವರಾಜ್ ಅಷ್ಟು ಸದೃಡವಾಗಿ ಪಕ್ಷವನ್ನು ಸಂಘಟಿಸಿದ್ದಾರೆ ಅಲ್ಲದೇ ಅಷ್ಟೇ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಇನ್ನೂ ಸಿದ್ದರಾಮಯ್ಯನ ಬಜೆಟ್ ಮೇಲೆ ವಾಗ್ದಾಳಿ ನೆಡೆಸಿದ ಅವರು ಯಾವ ರೈತ ಸಾಲಬಾದೆಯಿಂದ ಸಾಯುತ್ತಾನೋ ಆತನ ಸಾಲ ಮನ್ನಾ ಮಾಡುವ ನಿರ್ಧಾರ ನಿಜಕ್ಕೂ ಆತಂಕಕಾರಿ ಬೆಳವಣಿಗೆ ಈ ನಿರ್ಧಾರ ಇನ್ನಷ್ಟು ರೈತರು ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸುವಂತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಬಾರಿ ಸಿದ್ದರಾಮಯ್ಯನವರ ದುರಾಡಳಿತವೇ ಚುನಾವಣ ವಿಚಾರವಾಗಿದ್ದು ಈ ಕಾಂಗ್ರೇಸ್ ಸರ್ಕಾರದ ಅವದಿಯಲ್ಲಿ 3015 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ರೈತವಿರೋದಿ ಸರ್ಕಾರ. ಕರ್ನಾಟಕದ ಚಳುವಳಿಗಾರರು ಮಾರಾಟವಾದಂತ ಕೆಟ್ಟ ಸರ್ಕಾರ. ಜಗತ್ತಿನಲ್ಲಿ ಬಾನುವಾರ ಬಂದ್ ಕರೆದಂತ ನೀತಿಗೆಟ್ಟ ಸರ್ಕಾರವೇನಿದ್ದರು ಅದು ಈ ಸಿದ್ದರಾಮಯ್ಯನ ಸರ್ಕಾರ. ಹಾಗಾಗಿ ಜೀವರಾಜ್ ನೇತೃತ್ವದಲ್ಲಿ  ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಗ್ರಾಪ್ ಏರುತ್ತಲಿದೆ ಅದು ಚುನಾವಣೆಯಲ್ಲಿ ಗೆಲುವಿನ ರೂಪವಾಗಿ ಹೊರ ಹೊಮ್ಮಿ ಜೀವರಾಜ್ ತಮ್ಮ ನಾಲ್ಕನೆ ಗೆಲುವು ಸಾಧಿಸಲಿದ್ದಾರೆ ಎಂದು ನುಡಿದರು.
ಸಮಾವೇಶದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್ ಜೀವರಾಜ್.  ಸಂಘಟನಾ ಕಾರ್ಯದರ್ಶಿ ಗಣೇಶ್ ರಾವ್,  ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ಮುಖಂಡರಾದ ಬಾಸ್ಕರ್ ವೆನಿಲ್ಲಾ, ಮಹಾಬಲ ರಾವ್, ನಟೇಶ್ ಶೃಂಗೇರಿ,  ಕಲ್ಮಕ್ಕಿ ಉಮೇಶ್, ಪುಣ್ಯಪಾಲ್, ಕವಿತಾ ಲಿಂಗರಾಜು, ಶಿಲ್ಪ ರವಿ, ಪಾರ್ವತಮ್ಮ, ಪಿ.ಜೆ.ಆಂಟೋನಿ, ಕೆಸುವೆ ಮಂಜು, ಗೋಪಾಲ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Friday, 16 February 2018

ಜೀವರಾಜ್ ರಸ್ತೆ ಕಾಮಗಾರಿ : ಪೋಲಿಸ್ ಇಲಾಖೆಯ ದಿವ್ಯ ನಿರ್ಲಕ್ಷ. 
ಬಾಳೆಹೊನ್ನೂರಿನ ಜೀವರಾಜ್ ರಸ್ತೆ

ದೇವರು ವರ ಕೊಟ್ಟರು ಪೂಜಾರಿ ಕೊಡ ಎನ್ನುವ ಗಾದೆ ಮಾತಂತೆ ಬಾಳೆಹೊನ್ನೂರಿನ ಹೃದಯ ಭಾಗದಲ್ಲಿ  ಕೇಂದ್ರ ಬಿಜೆಪಿ ಸರ್ಕಾರದ 8ಕೋಟಿ ಅನುದಾನದಲ್ಲಿ ನೆಡೆಯುತ್ತಿರುವ ರಸ್ತೆ ಹಾಗೂ ಡೋಬಿಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ  ಎಷ್ಟು ವೇಗವಾಗಿ ಚಾಲನೆ ಪಡೆಯಿತೋ ಈಗ ಅಷ್ಟೇ ನಿಧಾನಗತಿಯಲ್ಲಿ ಸಾಗುತ್ತಿದೆ.  ಕಾರಣ ವಾಹನಗಳ ಕಿರಿಕಿರಿ.  ಹೌದು ಎರೆಡೂ ಬದಿಯ ರಸ್ತೆಯಲ್ಲಿ ಒಂದು ಬದಿಯ ರಸ್ತೆ ಸಂಪೂರ್ಣ ನಿರ್ಮಾಣಗೊಂಡು  ಇನ್ನೊಂದು ಬದಿಯ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ ಆದರೇ ಬಾಳೆಹೊನ್ನೂರು ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮಾತ್ರ ಕೇವಲ ಇಬ್ಬರು ಮಹಿಳಾ ಹೋಂ ಗಾರ್ಡ್ ಗಳನ್ನು ಅಲ್ಲಿಗೆ ನೇಮಕ ಮಾಡಿ ಸಾರ್ವಜನಿಕರ ಕಷ್ಟಕ್ಕೂ,  ಕಾಮಗಾರಿ ಮಾಡುತ್ತಿರುವವರರಿಗೂ ನನಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.  ಟ್ರಾಪಿಕ್ ಗೆ ಸಂಬಂದಿಸಿದ ಇತರ ವಿಚಾರಗಳಿಗೆ ಕಿವಿಕೊಡುವ ಸಬ್ ಇನ್ಸ್ ಪೆಕ್ಟರ್ ಈ ವಿಚಾರಕ್ಕೆ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನ ಹರಿಸದೇ ಇರುವುದು ನಿಜಕ್ಕೂ ಬಾಳೆಹೊನ್ನೂರಿನ ದುರಂತ.  ಕೂಡಲೇ ಮಾನ್ಯ ಎಸ್. ಪಿ ಅಣ್ಣಾಮಲೈ ಸಾಹೇಬರು ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ನಾಗರೀಕರ ಅಭಿಲಾಷೆಯಾಗಿದೆ.  ಅಲ್ಲದೇ..  ಒಂದು ಭಾಗ ಸಂಪೂರ್ಣ ಕಾಮಗಾರಿ ಮುಗಿದಿದ್ದು ಇನ್ನೊಂದು ಭಾಗದಲ್ಲಿ ಅಲ್ಲಲ್ಲಿ ಕಾಮಗಾರಿ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಕೂಡಲೇ ಏಡಬದಿಯ ಪಥದ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ,  ಅಂಗಡಿ,  ಗ್ಯಾರೇಜ್ ಮಾಲಿಕರಿಗೆ ಈ ಜೀವರಾಜ್ ರಸ್ತೆಯಲ್ಲಿ  ವ್ಯವಹರಿಸಲು ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಇನ್ನೂ ಕಾಮಗಾರಿ ಅತ್ಯುತ್ತಮವಾಗಿ ಸಾಗುತ್ತಿದ್ದು ಕೇವಲ ರಕ್ಷಣೆ ಮತ್ತು ಟ್ರಾಪಿಕ್ ಸಮಸ್ಯೆಯಿಂದ ಕಾಮಾಗಾರಿಯ ವೇಗ ಕುಂಠಿತವಾಗುತ್ತಿರುವುದು ನಿಜಕ್ಕೂ ಖೇದಕರ ಹಾಗೂ ಜೀವರಾಜ್ ಹೆಸರಿಗೆ ಕಳಂಕ ತರುವ ಉದ್ದೇಶ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.ಕೂಡಲೇ ಪೋಲಿಸ್ ಇಲಾಖೆ ಈ ಮಾರ್ಗದಲ್ಲಿ ಕಾಮಗಾರಿ ಮುಗಿಯುವವರೆಗೂ ದ್ವಿಚಕ್ರ ವಾಹನ ಹೊರತು ಪಡಿಸಿ ಬೇರೆ ಯಾವುದೇ ವಾಹನ ಬಿಡದೇ ಆದಷ್ಟು ಬೇಗನೆ ಈ ರಸ್ತೆ  ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವಂತೆ ಈಸಂಬಂದಪಟ್ಟವರು ಗಮನಿಸ ತಕ್ಕದ್ದು.

Friday, 9 February 2018

ಸಮೀಕ್ಷೆ ಬಹಿರಂಗ : ಅಭ್ಯರ್ಥಿ ಬದಲಾವಣೆಗೆ ಕಾಂಗ್ರೇಸ್ ನಲ್ಲಿ ಗರಿಗೆದರಿದ ರಾಜಕೀಯ.

ಚುನಾವಣಾ ಸಮಯ ಚುನಾವಣೋತ್ತರ ಸಮೀಕ್ಷೆಗಳದ್ದೇ ಚರ್ಚೆ . ದಿನಕ್ಕೊಂದು ಚಾನಲ್ ಪತ್ರಿಕೆ ಸಮೀಕ್ಷೆ ಹೊರಬೀಳುತ್ತಿದ್ದಂತೆ ಶೃಂಗೇರಿ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿದೆ. ಹೌದು ಎಲ್ಲಾ ಚುನಾವಣ ಸಮೀಕ್ಷೆಗಳು ಬಿಜೆಪಿ ಯ ಡಿ.ಎನ್.ಜೀವರಾಜ್ ಗೆಲುವು ಖಚಿತ ಎಂದು ಸಮೀಕ್ಷೆಯ ಮಾಹಿತಿ ಹೊರ ಹಾಕುತ್ತಿದ್ದಂತೆ ಬಿಜೆಪಿಯವರು ಗೆಲುವಿನ ನಗೆ ಬೀರಲಾರಂಭಿಸಿದರೇ ಕಾಂಗ್ರೇಸ್ ನಲ್ಲಿ  ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ದಿಲ್ಲಿಯಲ್ಲಿ ಲಾಭಿ ಶುರುವಿಟ್ಟುಕೊಂಡಿರುವುದು ಸದ್ಯದಮಟ್ಟಿಗೆ ಹೊಸಬೆಳವಣಿಗೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಟಿ.ಡಿ.ರಾಜೇಗೌಡರೇ ಈ ಬಾರಿಯ ಅಭ್ಯರ್ಥಿ ಎಂದು ಮೊದಲ ಹಂತದಲ್ಲಿ ಆಯ್ಕೆಯಾಗಿದ್ದರೂ ಕ್ಷೇತ್ರದ ಶೃಂಗೇರಿ ಮತ್ತು ನರಾ..ಪುರದ ಕೆಲ ಮುಖಂಡರ ಬೆಂಬಲಿಗರು ಅಭ್ಯರ್ಥಿ ಬದಲಾಯಿಸಿ ಎಂಬ ಲಾಭಿ ಶುರುವಿಟ್ಟುಕೊಂಡಿರುವುದು ಸದ್ಯದ ಮಟ್ಟಿಗೆ ಹೊಸಬೆಳವಣಿಗೆ. ಇನ್ನೂ ರಾಜೇಗೌಡರು ವರ್ಷಕ್ಕೂ ಮುಂಚಿನಿಂದಲೇ ಪ್ರವಾಸ ಮಾಡುತ್ತಾ ಚುನಾವಣೆಗೆ ತಯಾರಿನೆಡೆಸಿದ್ದು ಸದ್ಯದ ಈ ಹೊಸ ಬೆಳವಣಿಗೆಗೆ ಯಾವ ರೀತಿ ಪ್ರತಿಕ್ರೀಯಿಸುತ್ತಾರೋ ಕಾದುನೋಡಬೇಕು. ಒಟ್ಟಾರೆ ಮಲೆನಾಡಿನಲ್ಲಿ ರಾಜಕೀಯ ನಿಧಾನವಾಗಿ ಅವರ್ನ ಬಿಟ್ ಇವರ್ನ ಬಿಟ್ ಅವರ್ಯಾರು ಎನ್ನುವ ಆಟದಂತಾಗಿದೆ.