Monday 19 February 2018

ಜೀವರಾಜ್ ರಸ್ತೆ ಸಮಸ್ಯೆ ಬಗೆಹರಿಸಲು ಸ್ವತಃ ಜೀವರಾಜೇ ಬರಬೇಕಾಯ್ತು.

ಅಭಿವೃದ್ಧಿಕಾರ್ಯಗಳು ಜನತೆಯ ಕಲ್ಯಾಣಕ್ಕಾಗಿಯೇ ಹೊರತು ಜನ ವಿರೋದಿಯಲ್ಲ, ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಮಾಡಿ ಜನತೆಗೆ ತೊಂದರೆಕೊಡುವ ನೀಚ ಮಟ್ಟಕ್ಕೆ ರಾಜಕೀಯ ಪಕ್ಷವೊಂದು ಇಳಿದಿರುವುದು ಆ ಪಕ್ಷದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕಾಂಗ್ರೇಸ್ ಹೆಸರೇಳದೇ ಜೀವರಾಜ್ ಹರಿಹಾಯ್ದರು. ಕಾರ್ಯ ನಿಮಿತ್ತ ಭೆಂಗಳೂರಿಗೆ ಸಾಗುವ ಮಾರ್ಗಮದ್ಯೆ ಬಾಳೆಹೊನ್ನೂರಿನಲ್ಲಿ ನಿರ್ಮಾಣವಾಗುತ್ತಿರುವ 8ಕೋಟಿ ವೆಚ್ಚದ ದ್ವಿ ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಕಾಮಗಾರಿಗೆ ಕೆಲವರು ರಾಜಕೀಯ ಪುಡಾರಿಗಳ ಆಟಕ್ಕೆ ತಕ್ಕಂತೆ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಾರೆ ಮತ್ತು ಕಾಮಗಾರಿ ಶೀಘ್ರ ಮುಗಿಯದಂತೆ ತೊಂದರೆ ನೀಡುತ್ತಾರೆ ಎಂಬ ಸಾರ್ವ ಜನಿಕರು ದೂರಿದಾಗ  ಜೀವರಾಜ್ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಆ ಪಕ್ಷಕ್ಕೆ ಶೋಭೆ ತರುವಂತಹದ್ದಲ್ಲ ಇದಕ್ಕೆ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು. ಕೆಲ ಪುಡಾರಿಗಳು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿರುವುದಕ್ಕೆ ಪೋಲಿಸರನ್ನು ಕರೆಯಿಸಿದ ಜೀವರಾಜ್ ಯಾವುದೇ ಕಾರಣಕ್ಕೂ ರಸ್ತೆ ಬಂದ್ ಮಾಡದೇ ಒನ್ ವೇ ಮಾಡಿ ಸೂಕ್ತ ಬಂದೋಬಸ್ದ್ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.
ಜನತೆ ಈ ರಸ್ತೆಗೆ  ಜೀವರಾಜ್ ರಸ್ತೆ ಎಂದು ಹೆಸರಿಟ್ಟಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಶಾಸಕನಾಗಿ ನಾನು ಇಲ್ಲಿ ನಿಂತಿರುವುದು ಆ ಜನತೆಯ ಪ್ರೀತಿ ವಿಶ್ವಾಸದಿಂದ  . ಅವರು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಕೊನೆಯವರೆಗೂ ಚಿರರುಣಿಯಾಗಿ ಜನಸೇವೆ ಮಾಡುವುದು ನನ್ನ ಕೆಲಸ ಎಂದು ನುಡಿದರು. ಒಟ್ಟಾರೆ ಜೀವರಾಜ್ ರಸ್ತೆಯ ಸಮಸ್ಯೆ ಬಗೆಹರಿಸಲು ಜೀವರಾಜೇ ಬರಬೇಕಾಯ್ತು!

ವರದಿ: ಜಗದೀಶ್ಚಂದ್ರ.ಬಿ

No comments:

Post a Comment