Thursday, 31 August 2017

ಬಾಳೆಹೊನ್ನೂರಿಗೆ  ಬಿಜೆಪಿ ಯಿಂದ 8  ಕೋಟಿ ರಸ್ತೆ...

                         ಉದ್ದೇಶಿತ ರಸ್ತೆಯ ನೀಲನಕ್ಷೆ

ಬಾಳೆಹೊನ್ನೂರು ಜಿಲ್ಲೆಯ ಬಹುದೊಡ್ಡಗ್ರಾಮ ಪಂಚಾಯಿತಿ. ಈ ಊರಿಗೆ ಸಂಪರ್ಕಕ್ಕೆ ಇರುವ ಎಲ್ಲಾ ಮುಖ್ಯ ರಸ್ತೆಗಳನ್ನು ಕಳೆದ 5 ವರ್ಷದ ಹಿಂದೆಯೇ ಜೀವರಾಜ್ ಸುಸಜ್ಜಿತವಾಗಿ ನಿರ್ಮಿಸಿದ್ದಾರೆ ಆದರೇ 11 ವಾರ್ಡ್ ಗಳ ಎಲ್ಲಾ ಸಣ್ಣ ರಸ್ತೆಗಳು ಗುಂಡಿಬಿದ್ದು ಪಾಳುಬಿದ್ದಂತಾಗಿದ್ದನ್ನು ಮನಗಂಡ ಸ್ಥಳಿಯ ಬಿಜೆಪಿ ಮುಖಂಡರು ಈ ಹಿಂದೆ  ಜೀವರಾಜ್ ರವರಿಗೆ ಮನವಿಸಲ್ಲಿಸಿದರು ಇದರ ಸತ್ಯಾಸತ್ಯತೆ ಮತ್ತು ಜನತೆಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಜೀವರಾಜ್ ಕೋಟ್ಯಾಂತರ ರೂ ವೆಚ್ಚದಲ್ಲಿ ಬಾಳೆಹೊನ್ನೂರಿನ ಮುಖ್ಯರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದರು. ನಂತರ ಹಲಸೂರು ರಸ್ತೆಗೆ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಿದರು ನಂತರ ಬಾಳೆಹೊನ್ನೂರಿನ ಹಲವು ವಾರ್ಡ್ ಗಳಲ್ಲಿ ದಲಿತರು ಹೆಚ್ಚಾಗಿ ಇರುವಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಈಗ ಬಾಳೆಹೊನ್ನೂರಿನ ಬಹುಪುರಾತನವಾದ ಡೋಬಿಹಳ್ಳಕ್ಕೆ  ಆಧುನಿಕ ಸೇತುವೆ ಹಾಗೂ ಬಾಳೆಹೊನ್ನೂರಿನಿಂದ ಚೌಡೇಶ್ವರಿ ದೇವಸ್ಥಾನದವರೆಗೆ  ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮಂತ್ರಿಗಳಾದ ಸನ್ಮಾನ್ಯ ನಿತಿನ್ ಗಡ್ಕರಿಯವರೊಂದಿಗೆ ಸಮಾಲೋಚಿಸಿ  ಕೇಂದ್ರದ ಸಿ.ಆರ್.ಎಪ್ ಸೆಂಟ್ರಲ್ ರೋಡ್ ಪಂಡ್ ಅಡಿ ಈಗ 8 ಕೋಟಿ ಅನುದಾನವನ್ನು ತಂದು ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವುದೆಂದು ತಿಳಿಸಿದ್ದಾರೆ.

                        ದೋಬಿಹಳ್ಳದ ನೀಲ ನಕ್ಷೆ.
ಇಂದು ಈ ಕಾಮಗಾರಿಗೆ ಪೂರ್ವಭಾವಿಯಾಗಿ ಸಂಭಂದ ಪಟ್ಟ ಎಂಜಿನಿಯರ್ ಗಳು ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್. ಬಿಜೆಪಿ ಧುರೀಣ ಕಲ್ಮಕ್ಕಿ ಉಮೇಶ್ ಮತ್ತು ಬಿಜೆಪಿ ಜಿಲ್ಲಾ ಮುಖಂಡ ಪ್ರಭಾಕರ್ ಪ್ರಣಸ್ವಿ. ವಕ್ತಾರ ಜಗದೀಶ್ಚಂದ್ರ. ತಾಲ್ಲೂಕ್ ಪಂಚಾಯಿತಿ ಉಪಾಧ್ಯಕ್ಷ ಮಂಜು ಹೊಳೆಬಾಗಿಲು ಇವರೊಂದಿಗೆ ಚರ್ಚಿಸಿ ಸರ್ವೇ ಕಾರ್ಯ ನೆರೆವೇರಿಸಿದರು.

ಬಿಜೆಪಿ ಮುಖಂಡರೊಂದಿಗೆ ಎಂಜಿನಿಯರ್ ಗಳ ಸರ್ವೆ ಕಾರ್ಯ


ಈ ಸಂಧರ್ಭದಲ್ಲಿ  ಶೃಉಂಗೇರಿ ಕ್ಷೇತ್ರ ಬ್ಲಾಗ್ ನೊಂದಿಗೆ ಮಾತನಾಡಿದ ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಜೀವರಾಜ್ ರವರ ಶ್ರಮದಿಂದಾಗಿ ಬಾಳೆಹೊನ್ನೂರು ಆಧುನೀಕರಣವಾಗುತ್ತಿದೆ  ಜೀವರಾಜ್ ರವರ ಶ್ರಮಕ್ಕೆ ಬಾಳೆಹೊನ್ನೂರಿನ ಜನತೆ ಮುಂದಿನ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಬೆಂಬಲಿಸಿಯೇ ಬೆಂಬಲಿಸುತ್ತಾರೆ ಆ ಬಗ್ಗೆ ಅನುಮಾನ ಬೇಡ. ಬಾಳೆಹೊನ್ನೂರು ಅಭಿವೃದ್ಧಿಗಾಗಿ ಜೀವರಾಜ್ ರವರನ್ನು ಬೆಂಬಲಿಸಬೇಕಾಗಿದೆ ಇಷ್ಟೋದು ದೊಡ್ಡಮೊತ್ತದ ಅನುದಾನವನ್ನು ಬಾಳೆಹೊನ್ನೂರಿಗೆ ನೀಡಿದ್ದಕ್ಕಾಗಿ ಜನತೆಯ ಪರವಾಗಿ ಜೀವರಾಜ್ ರವರನ್ನು ಅಭಿನಂದಿಸಿದರು.
ಬಿಜೆಪಿ ಧುರೀಣ ಕಲ್ಮಕ್ಕಿ ಉಮೇಶ್ ಮಾತನಾಡಿ ಅಭಿವೃದ್ಧಿ ಹೇಗೆ ಮಾಡಬೇಕೆಂದು ಜೀವರಾಜ್ ರವರನ್ನು ನೋಡಿ ಕಲಿಯಬೇಕು ಮುಂದಿನ ಚುನಾವಣೆಯಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅತಿಹೆಚ್ಚು ಮತಗಳ ಮುನ್ನಡೆಯನ್ನು ಬಾಳೆಹೊನ್ನೂರಿನ ಜನತೆ ಜೀವರಾಜ್ ರವರಿಗೆ ನೀಡುತ್ತಾರೆ. ನಮ್ಮ ಮುಂದಿನ ಗುರಿ ಅಭಿವೃದ್ಧಿಗಾಗಿ ಪಂಚಾಯ್ತಿಯನ್ನು ಕಾಯದೇ ಜೀವರಾಜ್ ರವರ ಅನುಧಾನದಲ್ಲೇ ಬಾಳೆಹೊನ್ನೂರನ್ನು ಇನ್ನೂ ಅಭಿವೃದ್ಧಿಪಡಿಸುತ್ತೇವೆ. ಈ ಕಾಮಗರಿ ಮುಗಿದ ನಂತರ ಬಾಳೆಹೊನ್ನೂರಿನ ಬಹುದೊಡ್ಡ ಕಾಮಗಾರಿಯಾದ ಬಾಳೆಹೊನ್ನೂರಿನ ಭದ್ರಾನಧಿಯ ಮುಖ್ಯ ಸೇತುವೆ ಹಾಗೂ ಪ್ರಧಾನ ಮಂತ್ರಿ ಜನೌಷದ ಕೇಂದ್ರ ಆರಂಭಿಸುವ ಬಗ್ಗೆ ಬಿಜೆಪಿ ಗಮನ ಹರಿಸುತ್ತದೆ ಎಂದು ನುಡಿದರು.
ಈ ಕಾಮಗಾರಿ ಶೀಘ್ರವಾಗಿ ಮುಗಿದು ಜನಸೇವೆಗೆ ಅರ್ಪಣೆಯಾಗಲಿದೆ ಎಂದು ನುಡಿದರಲ್ಲದೇ ಈ ಕಾಮಗಾರಿಯನ್ನು ನಾವೇ ಮಾಡಿಸಿದ್ದು ಎಂದು ಹೇಳಿಕೊಂಡು ಕೆಲ ಕಾಂಗ್ರೇಸ್ ಮುಖಂಡರುಜನರೆದುರು ಪೋಸ್ ಕೊಡಲು ಬರಬಹುದೆಂದು ಕಾಂಗ್ರೇಸಿಗರನ್ನು ಲೇವಡಿ ಮಾಡಿದರು

Wednesday, 30 August 2017

ಕಾಂಗ್ರೇಸ್ ತೊರೆದು ಬಿಜೆಪಿಗೆ ಸೇರ್ಪಡೆ.

ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿಯ ಸರಿಸುಮಾರು 13 ಜನ ಕಾಂಗ್ರೇಸ್ ಮುಖಂಡರು ಸ್ಥಳಿಯ ಕಾಂಗ್ರೆಸ್ ಮುಖಂಡರ ಜಾತಿ ರಾಜಕೀಯ. ಅಭಿವೃದ್ಧಿ ಕಾರ್ಯಗಳಲ್ಲಿ ಅಡ್ಡಗಾಲು ಹಾಕುವುದು,  ಸ್ಥಳಿಯ ಕೆಳ ವರ್ಗದ ಜನರನ್ನು  ನೇಪಥ್ಯಕ್ಕೆ ಮಾತ್ರ ಬಳಸಿಕೊಳ್ಳುವುದನ್ನು ವಿರೋದಿಸಿ ಮಾನ್ಯ ಶಾಸಕರಾದ ಡಿ.ಎನ್.ಜೀವರಾಜ್ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮುಂದೆಯೂ ಅವರೇ ಶಾಸಕರಾಗಿ ಮಂತ್ರಿಗಳು ಆಗಲಿ ಎಂಬ ಅಭಿಲಾಷೆಯಿಂದ ಅವರ ಕೈ ಬಲಪಡಿಸಲು ಬಿಜೆಪಿ ಪಕ್ಷಕ್ಕೆ ಕೊಪ್ಪದ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಡಿ.ಎನ್.ಜೀವರಾಜ್ ಸಮ್ಮುಖದಲ್ಲಿ  ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಬ್ಲಾಗ್ ನೊಂದಿಗೆ ಮಾತನಾಡಿದ ಜೀವರಾಜ್ ಕ್ಷೇತ್ರದಲ್ಲಿ ಹೊಸ ಮನ್ವಂತರದ ಗಾಳಿ ಬೀಸುತ್ತಿದ್ದು ನನಗೆ ನನ್ನ ಮೊದಲ ಗೆಲುವಿನ ಚುನಾವಣೆಯ ಕೆಲ ನೆನಪುಗಳು ಮರುಕಳಿಸುತ್ತಲಿದೆ. ಕ್ಷೇತ್ರದ ಮತದಾರರು ಈ ಹಿಂದಿಗಿಂತಲೂ ಪ್ರಭುದ್ಧರಾಗಿದ್ದು ಅವರು ದಿನ ನಿತ್ಯದ ಚಟುವಟಿಕೆಗಳನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾನೆ.
ಕಾಂಗ್ರೇಸ್ ಒಡೆದ ಮನೆಯಂತಾಗಿದ್ದು ಅದು ಎಲ್ಲಿಯವರೆಗೂ ಅವರ ಕಾರ್ಯಕರ್ತರನ್ನು ಜೀತದವರಂತೆ ನೆಡೆಸಿಕೊಂಡು ಬರುತ್ತದೆಯೋ ಅಲ್ಲಿಯವರೆಗೂ ಆ ಪಕ್ಷಕ್ಕೆ ಶೃಂಗೇರಿಯಲ್ಲಿ ನೆಲೆ ಇಲ್ಲ ಅಲ್ಲದೇ ಈಗಾಗಲೇ ಕ್ಷೇತ್ರದ ಜನತೆ ಒಂದು ಚುನಾವಣೆಯಲ್ಲಿ ಗೆಲ್ಲದೇ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಇನ್ನೂ ಗೆದ್ದರೆ ಇನ್ನೆಷ್ಟು ಸುಳ್ಳು ಹೇಳಬಹುದು ಎಂದು ಆಲೋಚಿಸುತ್ತಿದ್ದಾರೆ ಹಾಗಾಗಿ ಕಾಂಗ್ರೇಸ್ ನ ದುಡ್ಡಿನ ಮದ ಈ ಬಾರಿ ಕರಗೇ ಕರಗುತ್ತದೆ ಎಂದು ನುಡಿದರು.
ನಿಮಗೆ ಬಿಜೆಪಿ ಟಿಕೇಟ್ ಸಿಗುವುದಿಲ್ಲವಂತೆ ಎಂದು ಕಾಂಗ್ರೇಸ್ ನವರು ಅಪಪ್ರಚಾರ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜೀವರಾಜ್ ನಾನು ಜನರ ನನ್ನ ಕಾರ್ಯಕರ್ತರ ನನ್ನ ಪಕ್ಷದ  ನಿಷ್ಠಾವಂತ  ಬಿಜೆಪಿ ಕಾರ್ಯಕರ್ತ ನನ್ನ ಪಕ್ಷ ನನ್ನ ಜನರು ಏನು ಹೇಳುತ್ತಾರೋ ಅದನ್ನು ಮಾಡಲು ನಾನು ಸಿದ್ಧ.. ಅದು ಬಿಟ್ಟು ಕಾಂಗ್ರೇಸ್ ಪುಡಾರಿಗಳ ಮಾತುಗಳು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ  ಸೋಲಿನ ಭಯ ಕಾಂಗ್ರೇಸನ್ನು ಆವರಿಸಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ನರಾಪುರ ಮಂಡಲ ಅಧ್ಯಕ್ಷ ವೆನಿಲ್ಲಾ ಭಾಸ್ಕರ್. ಕೊಪ್ಪ ಮಂಡಲ ಅಧ್ಯಕ್ಷ ಮಹಬಲರಾವ್.. ಶೃಂಗೇರಿ ಮಂಡಲ ಅಧ್ಯಕ್ಷ ನಟೇಶ್ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ.  ಕ್ಷೇತ್ರ ಸಂಘಟನ ಕಾರ್ಯದರ್ಶಿ ಗಣೇಶ್ ರಾವ್ ಉಪಸ್ಥಿತರಿದ್ದರು.
ಸೆಪ್ಟಂಬರ್ 3 ಕ್ಕೆ ಶ್ರೀ ಆನಂದಗುರೂಜಿ ಬಾಳೆಹೊನ್ನೂರಿಗೆ



ದಿನಾಂಕ 3-9-2017 ರಂದು ಬಾಳೆಹೊನ್ನೂರಿನ ವಿಧ್ಯಾಗಣಪತಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಹರ್ಶಿ  ಶ್ರೀ ಆನಂದ ಗುರೂಜಿಯವರನ್ನು ಬಾಳೆಹೊನ್ನೂರು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಶ್ರೀ ಕಲ್ಮಕ್ಕಿ ನಾಗೇಶ್ ರವರು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂಧರ್ಭದಲ್ಲಿ ಸಮಿತಿಯ ಮುಖಂಡರು ಆದ ಕಲ್ಮಕ್ಕಿ ಉಮೇಶ್ ಮತ್ತು ಬಾಬಣ್ಣ ಮತ್ತು ಟಿ.ಎಂ.ಯೋಗೇಶ್ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಬ್ಲಾಗ್ ನೊಂದಿಗೆ ಮಾತನಾಡಿದ ಟಿ.ಎಂ. ನಾಗೇಶ್ ಆ ದಿನ ಸಂಜೆ ನಾಲ್ಕು ಗಂಟೆಗೆ ಮಹರ್ಷಿಯವರ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜಾ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರು ರೂ 1000  ನೀಡಿ ತಮ್ಮ ಹೆಸರನ್ನು ನೊಡಾಯಿಸಲು ಸಮಿತಿ ಆಯೋಜಿಸಿದ್ದು ಪೂಜಾ ಕಾರ್ಯದ ಟಿಕೇಟ್ ಗಳು ಸಮಿತಿಯ ಕೌಂಟರ್ ನಲ್ಲಿ ದೊರೆಯುತಿದ್ದು ಇದರ ಸದುಪಯೋಗವನ್ನು ಭಕ್ತಾಭಿಮಾನಿಗಳು ಪಡೆಯಬಹುದಾಗಿದೆ ಎಂದು ತಿಳಿಸಿದರು. ಅಲ್ಲದೇ ದಿನಾಂಕ 4-9-2017  ರಂದು ಬೃಹತ್ ಅನ್ನಧಾನ ಕಾರ್ಯಕ್ರಮ ಆಯೋಜಿಸಿದ್ದು ಅನ್ನಧಾನದ ನಂತರ ಶ್ರೀ ಮಹಾಗಣಪತಿಯ ವಿಸರ್ಜನಾ ಮೆರವಣಿಗೆ ಆಕರ್ಷಕ ಕಲಾತಂಡಗಳ ನೇತೃತ್ವದಲ್ಲಿ ನೆಡೆಯಲಿದ್ದು ಅದೇ ದಿನ ಜೆ.ಸಿ.ಸರ್ಕಲ್ ನಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಟಿ.ಎಂ.ನಾಗೇಶ್ ತಿಳಿಸಿದರು.

Thursday, 10 August 2017

ಬಾಳೆಹೊನ್ನೂರು ಗಣಪತಿ ಉತ್ಸವಕ್ಕೆ ಶ್ರೀ ಆನಂದಗುರೂಜಿ ದಿವ್ಯಸಾನಿಧ್ಯ-ಟಿ.ಎಂ.ನಾಗೇಶ್


ಕರ್ನಾಟಕದಲ್ಲಿಯೇ ಅತ್ಯಂತ ವ್ಯವಸ್ಥಿತ ಹಾಗೂ ಅದ್ದೂರಿಯ ಗಣೇಶೋತ್ಸವ ಎಂಬ ಕೀರ್ತಿಗೆ ಪಾತ್ರವಾಗಿರುವ ಬಾಳೆಹೊನ್ನೂರಿನ ಶ್ರೀ ವಿಧ್ಯಾಗಣಪತಿ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಮಹಾಲಕ್ಷಿಯ ಪೂಜಕರು ಆಗಿರುವ ಶ್ರೀ ಆನಂದಗುರೂಜಿಯವರನ್ನು ಸಮಿತಿಯವತಿಯಿಂದ ಅಧಿಕೃತವಾಗಿ  ಸಮಿತಿಯ ಅಧ್ಯಕ್ಷರಾದ ಟಿ.ಎಂ ನಾಗೇಶ್ ಕಲ್ಮಕ್ಕಿ ರವರ ನೇತೃತ್ವದಲ್ಲಿ  ಆಹ್ವಾನಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಟಿ.ಎಂ.ನಾಗೇಶ್ ಪ್ರತಿಬಾರಿಯಂತೆ ಈ ಬಾರಿಯೂ ಬಾಳೆಹೊನ್ನೂರು ಹಾಗೂ ಸುತ್ತಮುತ್ತಲ ಎಲ್ಲಾ ಗ್ರಾಮಗಳ ನಾಗರೀಕರ ಸಲಹೆ ಸಹಕಾರದೊಂದಿಗೆ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದೆಂದು ತಿಳಿಸಿದರು.
ಈ ಸಂಧರ್ಭದಲ್ಲಿ  ಮುಖಂಡರಾದ ಟಿ.ಎಂ.ಉಮೇಶ್,  ಸೇವಾಸಮಿತಿಯ ತ್ರಿವಿಕ್ರಮ್ ಭಟ್, ಎಸಿಎಪ್ ಶಂಕರ್ ರವರು, ಹಿರಿಯಣ್ಣ, ಸುರೇಂದ್ರ ಮಾಸ್ಟರ್, ಚಂದ್ರೇಗೌಡರು ಉಪಸ್ಥಿತರಿದ್ದರು.