Wednesday 21 June 2017

ಸಾಲ ಮನ್ನಾ ಎಂಬುದು ಸರ್ಕಾರದ ಸಾಧನೆಯು ಅಲ್ಲ ರೈತರಿಗೆ ಸಂಭ್ರಮವು ಅಲ್ಲ
ವಿನೋದ್ ಶೆಟ್ಟಿ. ನವದೆಹಲಿ. ನ್ಯೂಸ್ ಬ್ಲಾಗ್ ಹವ್ಯಾಸಿ ಬರಹಗಾರರು.

 ದೇಶ ಸ್ವಾತಂತ್ರ್ಯಗೊಂಡು ೭೦ ವರ್ಷದ ನಂತರವೂ ಈ  ದೇಶದ ರೈತ ಸಾಲ ಮನ್ನಕ್ಕಾಗಿ ಸರ್ಕಾರದ ಮುಂದೆ ಕೈ ಚಾಚುವ ಪರಿಸ್ಥಿತಿ ನಿಜಕ್ಕೂ ಶೋಚನೀಯ. ದೇಶ ಆಳಿದ ನಾಯಕರುಗಳಿಗೆ ರೈತರ ವಿಚಾರ ಕೇವಲ ಮತಗಳಿಕೆಗೆ ಸೀಮಿತವಾಯಿತೆ ಹೊರತು ರೈತರನ್ನು ಬಲಿಷ್ಠಗೊಳಿಸಲು ಸಾಧ್ಯವಾಗಲೇ ಇಲ್ಲ.
   ನಮ್ಮದೇ ತೆರಿಗೆ ಹಣವನ್ನು ಸಾಲ ಮನ್ನಕ್ಕಾಗಿ ಬಳಸುವ ಸರ್ಕಾರಗಳು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಲು ಹೊರಟಿರುವುದು ನಿಜಕ್ಕೂ ಹಾಸ್ಯಸ್ಪದ.
    ಕೇಂದ್ರ ಸರ್ಕಾರ ಬೇವು ಲೇಪಿತ ಯೂರಿಯಾ ಹಾಗು ಮಣ್ಣು ಪರೀಕ್ಷಾ ಕೇಂದ್ರದಂತಹ ಕ್ರಮ ರೈತನಲ್ಲಿ ಆಶಾಭಾವನೆ ಮೂಡಿಸಿರುವುದು ನಿಜ ಇದರೊಂದಿಗೆ ಈ ಕೆಳಗಿನ ಕೆಲವು ಅಂಶಗಳು ಅಳವಡಿಸಿಕೊಂಡು ರೈತನನ್ನು ಸಾಲದಿಂದ ಸಂಪೂರ್ಣ ಮುಕ್ತಿ ಮಾಡಿ ರೈತ ಆತ್ಮಹತ್ಯೆ ಇಲ್ಲದ ಸಶಕ್ತ ರೈತರ ದೇಶ ಇದಾಗಲಿ ಎಂಬುದೇ ಆಶಯ.
೧. ಸರ್ಕಾರದ ಮೂಲಕ ಮಣ್ಣು ಪರೀಕ್ಷಿಸಿ ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ನಿರ್ಧರಿಸಬೇಕು.
೨. ಬೆಳೆ ಬೆಳೆಯಲು ಸರ್ಕಾರದ ಮೂಲಕ ಬೀಜ ಹಾಗು ಇತರ ಸಲಕರಣೆ ನೀಡಬೇಕು.
೩. ಬೆಳೆದ ಬೆಳೆಗೆ ಸರ್ಕಾರವೇ ವೈಜ್ಞಾನಿಕ ಬೆಲೆ ನಿರ್ಧರಿಸಿ ಅದಕ್ಕೆ ಮಾರುಕಟ್ಟೆ ಒದಗಿಸಿ ಮಧ್ಯವರ್ತಿಯಿಂದ ರೈತರನ್ನು ಕಾಪಾಡಬೇಕು.
೪. ಒಂದು ವೇಳೆ ಬೆಳೆ ನಷ್ಟ ಅಥವಾ ಬರದಂತಹ ಸಂದರ್ಭದಲ್ಲಿ ಸರ್ಕಾರವೇ ಪರಿಹಾರ ಆ ವರ್ಷದ ಫಸಲನ್ನು ಅಂದಾಜಿಸಿ ನೀಡಬೇಕು.
೫. ರೈತರ ಸಮೀಕ್ಷೆ ಮಾಡಿ ಪ್ರತೀ ರೈತರಿಗೂ  ಆಧಾರ್ ತರಹದ ಡಿಜಿಟಲ್ ಕಾರ್ಡ್ ನೀಡಿ ಅದರಲ್ಲಿ ರೈತರ ಭೂಮಿ ಅಳತೆ, ಮಣ್ಣಿನ ಗುಣ , ಬೆಳೆಯುವ ಬೆಳೆ, ಆ ರೈತನ ಅವಲಂಬಿತರ ಸಂಖ್ಯೆ, ಇತರ ರೈತನಿಗೆ ಸಂಬಂಧಪಟ್ಟ ಅಂಶಗಳನ್ನು ಒಂದೇ ಡಿಜಿಟಲ್ ಕಾರ್ಡ್ನಲ್ಲಿ ನಮೂದಿಸಬೇಕು.
೬, ಡಿಜಿಟಲ್ ಕಾರ್ಡ್ನ ಆಧಾರದಲ್ಲಿ ರೈತನ ಆರ್ಥಿಕ ಪರಿಸ್ಥಿತಿ ಗುರುತಿಸಿ ರೈತನ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ನೆರವಾಗಬೇಕು.
೭. ಡಿಜಿಟಲ್ ಕಾರ್ಡಿನ ಮೂಲಕ ರೈತರ ಮುಖವಾಡ ಹಾಕಿ ರೈತರಿಗೆ ಸಿಗುವ ಸವಲತನ್ನು ದುರುಪಯೋಗಪಡಿಸುವ ಮಂದಿಗೂ ಕಡಿವಾಣ ಹಾಕಬಹುದು.
   ಈ ತರಹದ ಕ್ರಮಗಳು ಈ ದೇಶದ ರೈತನನ್ನು ಸಾಲಗಾರನ ಬದಲು ಸ್ವಾವಲಂಭಿಯನ್ನಾಗಿ ಮಾಡಬಲ್ಲುದು. ಕೊನೆಯದಾಗಿ ನಮಗೆ ಬೇಕಾಗಿರುವುದು ಸಾಲ ಮನ್ನಾ ಮಾಡುವ ನಾಯಕ ಅಥವಾ ಸರ್ಕಾರವಲ್ಲ ನಮಗೆ ಬೇಕಾಗಿರುವುದು ಸಾಲವೇ ಇಲ್ಲದ ರೈತನನ್ನಾಗಿಸುವ ಸರ್ಕಾರ.

No comments:

Post a Comment