Tuesday 27 June 2017

ಹಲವು ತೆರಿಗೆಗಳಿಂದ ಮುಕ್ತಿ ದೇಶಕ್ಕೆ ಸಿಗಲಿದೆ ಶಕ್ತಿ

                  ವಿನೋದ್ ಶೆಟ್ಟಿ. ಅಂಕಣಕಾರರು. 
                        ಶೃಂಗೇರಿ ನ್ಯೂಸ್ ಬ್ಲಾಗ್.


ಸ್ವಾತಂತ್ರ್ಯದ ನಂತರ ದೇಶವು ಒಂದು ಐತಿಹಾಸಕ ತೆರಿಗೆ ಸುಧಾರಣಾ ಕ್ರಮಕ್ಕೆ ಮುಂದಾಗಿದ್ದು ಈ ಸುಧಾರಣೆ ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ. ಒಂದು ದೇಶ ಒಂದು ತೆರಿಗೆ ಒಂದು ಮಾರುಕಟ್ಟೆ ಎಂಬ ಸೂತ್ರದ ಮೂಲಕ ದೇಶದಾದ್ಯಂತ "ಸರಕು ಮತ್ತು ಸೇವಾ ತೆರಿಗೆ" ಜುಲೈ ಒಂದರಿಂದ ಜಾರಿಗೆ ಬರಲಿದೆ.

ಏನಿದು ಸರಕು ಮತ್ತು ಸೇವಾ ತೆರಿಗೆ (GST) :
ಒಂದು ವಸ್ತುವಿಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ತೆರಿಗೆ ಪ್ರಮಾಣ ಹಾಗೂ ಹಲವಾರು ತರಹದ ತೆರಿಗೆ ಪಾವತಿಸಬೇಕಿತ್ತು ಈಗ ಜಿ ಎಸ್ ಟಿ ಮೂಲಕ ಒಂದು ವಸ್ತುವಿಗೆ ದೇಶದಾದ್ಯಂತ ಏಕರೂಪವಾದ ತೆರಿಗೆ ಇರಲಿದ್ದು ತೆರಿಗೆ ಪಾವತಿ ಕ್ರಮ ಕೂಡ ಸರಳವಾಗಲಿದೆ. ಹತ್ತು ಹಲವಾರು ತೆರಿಗೆಯ ಮೂಲಕ ಬೇಸತ್ತಿದ್ದ ಜನರಿಗೆ ಸರಳವಾದ ಏಕೀಕೃತ ತೆರಿಗೆ ಪದ್ದತಿಯ ಮೂಲಕ ಅನೂಕೂಲ ಕಲ್ಪಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಜಿ ಎಸ್ ಟಿ ಅನೂಕೂಲಗಳು :
 ೧. ಸರಳವಾದ ತೆರಿಗೆ ಪಾವತಿ ಪದ್ಧತಿ.
೨. ಹಲವಾರು ತೆರಿಗೆಗಳಿಂದ ಮುಕ್ತಿ.
೩. ಉತ್ಪಾದಕರಿಂದ ಗ್ರಾಹಕರವರೆಗೆ ತೆರಿಗೆ ಹೊರೆ     ಕಡಿಮೆ.
೪. ದೇಶದ ಆರ್ಥಿಕ ಶಕ್ತಿಯ ಹೆಚ್ಚಳ.
೫. ತೆರಿಗೆ ವಂಚಕರಿಗೆ ಕಂಟಕ.
೬. ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಜನರ ಸೇರ್ಪಡೆ.
೭. ಮುಂದಿನ ದಿನಗಳಲ್ಲಿ ತೆರಿಗೆ ಪ್ರಮಾಣ ಗಣನೀಯ ಇಳಿಕೆಗೆ ಸಹಕಾರಿ.
೮. ಹೊಸ ಉದ್ಯಮಗಳ ಸ್ಥಾಪನೆಗೆ ಪ್ರೇರಣೆ.
೯. ಉದ್ಯೋಗ ಸೃಷ್ಟಿ.
೧೦. ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ.

      ಈಗಾಗಲೇ ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿದ್ದು ಜಿ ಎಸ್ ಟಿ ಜಾರಿಯ ನಂತರ ದೇಶದ ಆರ್ಥಿಕ ಪ್ರಗತಿಯಲ್ಲಿ ಇನ್ನಷ್ಟು ವೇಗ ಪಡೆಯಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
       ಭಾರತ ಜಗದ್ಗುರುವಾಗುವುದನ್ನೇ  ಧ್ಯೇಯವಾಗಿಸಿಕೊಂಡು ನಿರಂತರ ಕಾರ್ಯಪ್ರವೃತ್ತವಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೂರ ದೃಷ್ಟಿಯ ಕ್ರಮಗಳು ದೇಶದ ೧೨೫ ಕೋಟಿ ಜನರ ಸಹಕಾರದಿಂದ ಭಾರತವನ್ನು ಜಗದ್ಗುರುವಾಗಿ ನೋಡುವ ದಿನಗಳು ಬಹಳ ದೂರವಿಲ್ಲ ಎಂಬುದಂತು ಸತ್ಯ.

No comments:

Post a Comment