Tuesday, 13 June 2017

ಕಾಂಗ್ರೇಸ್ , ಕಮುನಿಷ್ಟರಿಂದ ಶೃಂಗೇರಿ ಜಗದ್ಗುರುಗಳಿಗೆ ಅಗೌರವ.


ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ  ಶೃಂಗೇರಿ ಮಠದ ಸ್ವಾಮೀಜಿಯವರನ್ನು ಅವರಿಗೆ ಮೀಸಲಾದ ಆಸನದಲ್ಲಿ ಆಸೀನರಾಗಲು ಬಿಡದೆ ಅವರ ಆಸನವನ್ನು ಕಿತ್ತುಕೊಂಡು ಅವಮಾನ ಮಾಡಿದ ಕೇರಳದ  ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್  ಶಾಸಕ  ಶಿವಕುಮಾರ್ ನ ಈ   ಕೀಳು ಮಟ್ಟದ ವರ್ತನೆಯನ್ನ ಮಾಡಿದ್ದು ಎಂದು ಕೇರಳದ ಮಂಗಳಂ.ಕಾಮ್ ವರದಿ ಮಾಡಿದೆ ಹಾಗೂ ಕೇರಳದ  ಮುಖ್ಯಮಂತ್ರಿ ಈ ಅವಮಾನಕಾರಿ ಘಟನೆಯ ಬಗ್ಗೆ  ಶೃಂಗೇರಿ ಸಂಸ್ಥಾನದ  ಸ್ವಾಮೀಜಿ ಯವರ ಕ್ಷಮೆ ಯಾಚಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ಇನ್ನೂ ಜಗದುರುಗಳು ಸಹ ಕೇವಲ ಸಂಬಂದಿಸಿದ ಕಾರ್ಯದಲ್ಲಿ ಭಾಗವಹಿಸಿ ವೇದಿಕೆ ಏರದೇ ವಾಪಸ್ ಆಗಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ


ದೇಶದಲ್ಲಿ ಜಾನುವಾರು ಹತ್ಯೆ ನಿಯಂತ್ರಣ ಕಾಯಿದೆ ಜಾರಿಗೆ ಬಂದಾಗ ಇದೇ ಕೇರಳದಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದ ಈ ಕಾಂಗ್ರೆಸ್- ಸಿಪಿಎಂ ಕೂಟಕ್ಕೆ ಇದು " ವಿನಾಶಕಾಲೇ ವಿಪರೀತ ಬುದ್ಧಿಃ " ಎಂಬಂತಾಗಿದೆ.
ಕಾಂಗ್ರೇಸ್ ಅಧಿಕಾರಕ್ಕೆ ಬಂದರೇ ಎನಾಗುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾರಣೆಯಾಗಿದ್ದು ಸದ್ಯ ಈ ಸುದ್ದಿ ಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು  ಶೃಂಗೇರಿ ಮಠದ ಭಕ್ತಾಭಿಮಾನಿಗಳು ಈ ಘಟನೆಯ ಸಂಪೂರ್ಣ ಮಾಹಿತಿ ಪಡೆದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ನಿರ್ದಾರ ಮಾಡಿದ್ದಾರೆಂದು ಮಾಹಿತಿಗಳು ಲಭಿಸಿದೆ. ಈ ಬಗ್ಗೆ ಸ್ಥಳಿಯ ಕಾಂಗ್ರೇಸಿಗರು ಯಾವ ಪ್ರತಿಕ್ರೀಯೆ ನೀಡುತ್ತಾರೆಂದು ಕಾದುನೋಡಬೇಕಿದೆ.

1 comment:

  1. very unfortunate and shocking. may god give them some wisdom

    ReplyDelete